ಬೆಂಗಳೂರು: ಸುಭಾತ್ರಾ ಎ. (20ನೇ, 21ನೇ, 23ನೇ, 29ನೇ ಹಾಗೂ 42ನೇ ನಿಮಿಷ) ಅವರ ಐದು ಗೋಲುಗಳ ನೆರವಿನಿಂದ ಕರ್ನಾಟಕ ತಂಡವು ಖೇಲೊ ಇಂಡಿಯಾ– ಅಸ್ಮಿತಾ 13 ವರ್ಷದೊಳಗಿನ ಬಾಲಕಿಯರ ಫುಟ್ಬಾಲ್ ಲೀಗ್ (ದಕ್ಷಿಣ ವಲಯ) ಪಂದ್ಯದಲ್ಲಿ 8–0ಯಿಂದ ಆಂಧ್ರಪ್ರದೇಶ ತಂಡವನ್ನು ಸುಲಭವಾಗಿ ಮಣಿಸಿತು.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಆತಿಥೇಯ ತಂಡವು ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿತು. ಅಂಡಮಾನ್ ವಿರುದ್ಧ ಸೋಮವಾರ ಏಳು ಗೋಲು ಹೊಡೆದಿದ್ದ ಸುಭಾತ್ರಾ ಮತ್ತೊಮ್ಮೆ ಮಿಂಚಿದರು. ಗೌರಿ ನಿಂಗಪ್ಪಗೌಡ ಪಾಟೀಲ (7ನೇ ನಿ.), ಅನ್ವಿ ಜೋಶಿ (18ನೇ ನಿ.) ಹಾಗೂ ಪ್ರಣೀತಾ ವಿ.ಆರ್. (50ನೇ ನಿ.) ತಲಾ ಒಂದು ಗೋಲು ಗಳಿಸಿದರು. ಎದುರಾಳಿ ತಂಡವು ಕರ್ನಾಟಕದ ರಕ್ಷಣಾ ವ್ಯವಸ್ಥೆಯನ್ನು ಭೇದಿಸಲು ವಿಫಲವಾಯಿತು.

ದಿನದ ಇನ್ನೊಂದು ಪಂದ್ಯದಲ್ಲಿ ಪಾಂಡಿಚೇರಿ ತಂಡವು 20–0ಯಿಂದ ಅಂಡಮಾನ್ ತಂಡವನ್ನು ನಿರಾಯಾಸವಾಗಿ ಸೋಲಿಸಿತು. ಪಾಂಡಿಚೇರಿ ತಂಡದ ರಾಜೇಶ್ವರಿ ಏಳು ಗೋಲು (1ನೇ, 8ನೇ, 10ನೇ, 29ನೇ, 34ನೇ, 37ನೇ, 45ನೇ ನಿಮಿಷ) ಗಳಿಸಿ ಪಾರಮ್ಯ ಮೆರೆದರು. ಎಂ.ಶಿವಶ್ರೀ (4ನೇ, 45ನೇ, 46ನೇ ಹಾಗೂ 49ನೇ ನಿ.) ಹಾಗೂ ಮಹಾದೇವಿ (30ನೇ, 47ನೇ, 48ನೇ ಹಾಗೂ 50ನೇ ನಿ.) ತಲಾ ನಾಲ್ಕು ಗೋಲು ಗಳಿಸಿದರು. ಸೆಬಿಯಾ ಎಸ್. (12ನೇ ಹಾಗೂ 36ನೇ ನಿ.) ಮತ್ತು ಶುಭ (16ನೇ ಹಾಗೂ 36ನೇ ನಿ.) ತಲಾ ಎರಡು ಹಾಗೂ ಇಶಾಂತಿಕಾ (3ನೇ ನಿ.) ಒಂದು ಗೋಲು ಹೊಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.