ಮಂಗಳವಾರ, 27 ಜನವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಕಾನೂನಿಗೆ ವಿರುದ್ಧವಾದ ಕೆಲವು ಸಂಗತಿಗಳು ನಡೆಯಬಹುದು
Published 26 ಜನವರಿ 2026, 23:40 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸುಗಂಧ ದ್ರವ್ಯಗಳ ಉತ್ಪಾದಕ ಕೈಗಾರಿಕೆ ಮತ್ತು ಮಾರಾಟದವರಿಗೆ ಉತ್ತಮ ವ್ಯವಹಾರಗಳು ಕಂಡುಬರುತ್ತವೆ. ಭವಿಷ್ಯದ ಯೋಜನೆಯಲ್ಲಿ ಪಾಲುದಾರಿಕೆಯು ಹಂತ ಹಂತವಾಗಿ ಲಾಭ ತರಲಿದೆ.
ವೃಷಭ
ಯೋಜನೆಗಳು ಹಾಗೂ ಅವುಗಳ ಬೆಳವಣಿಗೆಗಳ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚೆಯನ್ನು ನಡೆಸಿ ನಂತರದಲ್ಲಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ಷೇರು ಅದೃಷ್ಟದಾಯಕವಾಗಿರುತ್ತದೆ.
ಮಿಥುನ
ಸಂಘ ಸಂಸ್ಥೆಗಳ ಕೆಲಸ ಕಾರ್ಯಗಳಲ್ಲಿ ಸ್ವಯಂ ಪ್ರೇರಿತರಾಗಿ ಅಧಿಕ ಕೆಲಸ ಅಥವಾ ಹಣಕಾಸಿನ ಜವಾಬ್ದಾರಿ ತೆಗೆದುಕೊಳ್ಳುವುದು ಸಮಸ್ಯೆಯನ್ನು ಎಳೆದುಕೊಂಡಂತಾಗುತ್ತದೆ. ದಿನಸಿ ವರ್ತಕರಿಗೆ ಲಾಭದಾಯಕ ದಿನ.
ಕರ್ಕಾಟಕ
ಹೋಟೆಲ್ ಉದ್ಯಮದವರಿಗೆ ಮತ್ತು ಟ್ರಾವೆಲಿಂಗ್ ಏಜೆಂಟರಿಗೆ ಲಾಭದ ನಿರೀಕ್ಷೆಯಲ್ಲಿ ಅಲ್ಪಮಟ್ಟದ ವ್ಯತ್ಯಾಸಗಳಾಗುವುದು. ಸಂತಾನ ಅಪೇಕ್ಷಿಗಳಿಗೆ ದೇವತಾನುಗ್ರಹದಿಂದ ಫಲದಾಯಕವಾಗಲಿದೆ.
ಸಿಂಹ
ಜೀವನದಲ್ಲಿ ಮಹತ್ತರ ಬದಲಾವಣೆಯಾಗುವ ಸೂಚನೆಗಳು ಗಮನಕ್ಕೆ ಬರಲಿವೆ. ಬಹಳ ದಿನಗಳ ನಂತರ ವ್ಯವಹಾರ ತೃಪ್ತಿಕರವಾಗಿರುವುದು. ಅವಿವಾಹಿತರಿಗೆ ವಿವಾಹ ಯೋಗವಿದೆ.
ಕನ್ಯಾ
ವಾಣಿಜ್ಯೋದ್ಯಮಿಗಳಿಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿ ವಿಶೇಷ ಜೀವನಾನುಭವ ಉಂಟಾಗುವುದು. ಮನೆಯಲ್ಲಿ ಸಂತೋಷದಿಂದಿರಲು ಹೊಂದಾಣಿಕೆಯೇ ಮೂಲ ಮಂತ್ರವಾಗಿರಬೇಕು.
ತುಲಾ
ನಾಜೂಕಿನ ಮಾತುಗಳು ಅಥವಾ ಹಿತವಚನಗಳು ಸಹೋದ್ಯೋಗಿಯನ್ನು ಧೈರ್ಯದಿಂದ ಇರುವಂತೆ ಮಾಡಲಿವೆ. ಬರಲಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ವಿಚಾರದಲ್ಲಿ ವಿಫಲರಾಗುವಿರಿ.
ವೃಶ್ಚಿಕ
ಬ್ಯಾಂಕ್ ನೌಕರರಿಗೆ ಕೆಲಸಗಳಲ್ಲಿ ಒತ್ತಡ ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ ಸಿಗುವುದು. ಸಣ್ಣ ವಿಚಾರಗಳನ್ನು ದೊಡ್ಡದಾಗಿ ಪರಿಗಣಿಸಿ ಗಂಭೀರ ನಿರ್ಧಾರ ತೆಗೆದುಕೊಳ್ಳಬೇಡಿ. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ ಹೆಚ್ಚುವುದು.
ಧನು
ಬಂಧು ಮಿತ್ರರೊಡನೆ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುವ ಅವಕಾಶ ಸಿಗಲಿದೆ. ಪಾತ್ರೆ ಮಾರಾಟ ಮಾಡುವವರಿಗೆ, ತಾಮ್ರ, ಹಿತ್ತಾಳೆಯ ದೇವರ ಪೂಜಾ ಪಾತ್ರೆಯ ಮಾರಾಟಗಾರರಿಗೆ ಅಧಿಕ ಲಾಭವಿರುವುದು.
ಮಕರ
ಹಾರ್ಡ್‌ವೇರ್‌ ಅಂಗಡಿಯವರಿಗೆ ಹಣಕಾಸಿನ ವಹಿವಾಟು ಉತ್ತಮವಾಗಿದ್ದು ಮಾರಾಟ ಕ್ಷೇತ್ರವನ್ನು ಹೆಚ್ಚಿಸಿಕೊಳ್ಳುವಿರಿ. ಸತ್ಫಲಗಳನ್ನು ಅನುಭವಿಸಲು ಶ್ರೀಲಕ್ಷ್ಮಿನರಸಿಂಹ ಸ್ವಾಮಿಯ ಸೇವೆಯು ಅನುಕೂಲವಾಗಲಿದೆ.
ಕುಂಭ
ಶ್ರಮದ ದುಡಿಮೆಯೇ ಮಂತ್ರವಾಗಿರಲಿ. ಕಾನೂನಿಗೆ ವಿರುದ್ಧವಾದ ಅಥವಾ ನಿಯಮ ಉಲ್ಲಂಘನೆಯ ಕೆಲವು ಸಂಗತಿಗಳು ನಡೆಯಬಹುದು. ದುರ್ಗಾಪರಮೇಶ್ವರಿಯ ದರ್ಶನದಿಂದ ಎಲ್ಲಾ ಒಳ್ಳೆಯದಾಗುವುದು.
ಮೀನ
ಇಂದಿನ ಜೀವನದಲ್ಲಿ ನಿಮಗೆದುರಾಗಿ ಬರುತ್ತಿರುವ ಅದೃಷ್ಟದ ಲಾಭವನ್ನು ವ್ಯರ್ಥವಾಗದಂತೆ ಪಡೆದುಕೊಳ್ಳಲು ಪರಿಪೂರ್ಣ ಪ್ರಯತ್ನ ಹಾಕುವುದು ಅಗತ್ಯ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಿ
ADVERTISEMENT
ADVERTISEMENT