ಬೆಂಗಳೂರು: ಸಾದರಮಂಗಲದಲ್ಲಿ ಹಿಂದಕ್ಕೆ ತೆಗೆಯುತ್ತಿದ್ದ ಬಿಎಂಟಿಸಿ ಬಸ್ಗೆ ರೈಲು ತಾಗಿದ್ದು, ಬಸ್ನ ಹಿಂಭಾಗಕ್ಕೆ ಹಾನಿಯಾಗಿದೆ. ಬಸ್ನಲ್ಲಿ ಪ್ರಯಾಣಿಕರಿಲ್ಲದೇ ಇದ್ದಿದ್ದರಿಂದ ಜೀವಾಪಾಯದ ದುರಂತ ತಪ್ಪಿದೆ.

ಇಲ್ಲಿ ರೈಲು ಹಳಿ ಮತ್ತು ರಸ್ತೆ ಅಕ್ಕಪಕ್ಕದಲ್ಲಿಯೇ ಹಾದು ಹೊರಗುತ್ತದೆ. ಸಾದರಮಂಗಲದ ಬಿಎಂಟಿಸಿ ಘಟಕದಿಂದ (51ನೇ ಘಟಕ) ಕಾಡುಗೋಡಿಗೆ ಬಸ್ ಸೋಮವಾರ ಬೆಳಿಗ್ಗೆ 9.15ರ ವೇಳೆ ಹೊರಟಿತ್ತು. ಅಲ್ಲೇ ಮುಂದೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ಬಸ್ ಅನ್ನು ಹಿಂದಕ್ಕೆ ತೆಗೆಯುವ ವೇಳೆ ಬಸ್ ಚಾಲಕನ ನಿರ್ಲಕ್ಷ್ಯದಿಂದಾಗಿ ಹಳಿ ಕಡೆಗೆ ಹೆಚ್ಚು ಹಿಂದಕ್ಕೆ ಸಾಗಿತ್ತು. ಅದೇ ಸಮಯದಲ್ಲಿ ಎಸ್ಎಂವಿಟಿ ಬೆಂಗಳೂರು– ಟಾಟಾನಗರ (ಜಾರ್ಖಂಡ್) ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಬಂದಿದ್ದು, ಬಸ್ಗೆ ತಾಗಿದೆ.

ಬಿಎಂಟಿಸಿ ವಿಭಾಗೀಯ ನಿರ್ವಾಹಕ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸುರಕ್ಷತೆಗೆ ಅಪಾಯ ತರುವ ಘಟನೆ ಇದು ಎಂದು ಪರಿಗಣಿಸಿ ನೈರುತ್ಯ ರೈಲ್ವೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.