ಜನಸಂಖ್ಯೆ ಸ್ಫೋಟ: ಜನಜಾಗೃತಿ ಅಗತ್ಯ

ಬುಧವಾರ, ಜೂಲೈ 17, 2019
23 °C

ಜನಸಂಖ್ಯೆ ಸ್ಫೋಟ: ಜನಜಾಗೃತಿ ಅಗತ್ಯ

Published:
Updated:

ಗುಲ್ಬರ್ಗ: ಬೆಳೆಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ದೇಶ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದೀಪಕನಾಗ್ ಎಸ್. ಪುಣ್ಯಶೆಟ್ಟಿ ಹೇಳಿದರು.ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಬುಧವಾರ ಇಲ್ಲಿನ ಆರೋಗ್ಯ ನಿರೀಕ್ಷಕರ ತರಬೇತಿ ಕೇಂದ್ರದಲ್ಲಿ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕಾಗಿದೆ.ಜನಸಂಖ್ಯೆ ಸ್ಫೋಟ ನಿಯಂತ್ರಿಸದೇ ಹೋದರೆ, ಮುಂದಿನ ಪೀಳಿಗೆಗೆ ನೀರು, ಆಹಾರ ಸೇರಿದಂತೆ ಸಂಪನ್ಮೂಲ ಕೊರತೆ ಉದ್ಭವಿಸಲಿದೆ. ಇದರಿಂದ ಬಡತನ, ನಿರುದ್ಯೋಗದ ಸಮಸ್ಯೆಯೂ ಹೆಚ್ಚಾಗಲಿದೆ ಎಂದು ಎಚ್ಚರಿಸಿದ ಅವರು, ದೇಶದ ಪ್ರಗತಿ ಸಾಧಿಸಬೇಕೆಂದರೆ ಮಿತ ಸಂತಾನ ಸೂತ್ರವನ್ನು ಪಾಲಿಸುವುದು ಅಗತ್ಯ ಎಂದರು.`ಜನಸಂಖ್ಯಾ ಸ್ಫೋಟದಿಂದ ಮೂಲಸೌಲಭ್ಯಗಳ ಕೊರತೆಯು ತೀವ್ರ ಸ್ವರೂಪದಲ್ಲಿ ದೇಶವನ್ನು ಕಾಡಲಿದೆ` ಎಂದು ಉಪನ್ಯಾಸ ನೀಡಿದ ಎನ್.ವಿ. ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಆನಂದ ಕಿತ್ತೂರ ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಗಣ್ಣ ಬಸಣ್ಣ ಚಿಕ್ಕಲಗಿ ಸ್ವಾಗತಿಸಿದರು.

 

ಇದಕ್ಕೂ ಮುನ್ನ, ಜನಸಂಖ್ಯಾ ಸ್ಫೋಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ರ‌್ಯಾಲಿ ಏರ್ಪಡಿಸಲಾಗಿತ್ತು. ಜಿಲ್ಲಾ ಸರ್ಕಾರಿಆಸ್ಪತ್ರೆಯಿಂದ ಹೊರಟು ವಿವಿಧ ರಸ್ತೆಗಳಲ್ಲಿ ಸಂಚರಿಸಿದ ರ‌್ಯಾಲಿಯಲ್ಲಿ ಆರೋಗ್ಯ ಇಲಾಖೆ ಹಾಗೂ ಆಸ್ಪತ್ರೆಗಳ ಸಿಬ್ಬಂದಿ ಪಾಲ್ಗೊಂಡು ಜನಸಂಖ್ಯೆ ಹೆಚ್ಚಳದ ದುಷ್ಪರಿಣಾಮದ ಬಗ್ಗೆ ವಿವರಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry