ಕಾಂಗ್ರೆಸ್ ಪಕ್ಷ ಸಂಘಟನೆಗೆ ಅಭಿಪ್ರಾಯ ಸಂಗ್ರಹ

ಸೋಮವಾರ, ಜೂಲೈ 15, 2019
25 °C

ಕಾಂಗ್ರೆಸ್ ಪಕ್ಷ ಸಂಘಟನೆಗೆ ಅಭಿಪ್ರಾಯ ಸಂಗ್ರಹ

Published:
Updated:

ಆಳಂದ: ಕಾಂಗ್ರೆಸ್ ಪಕ್ಷವನ್ನು ಬೂತ್‌ಮಟ್ಟದಿಂದ ಸಂಘಟಿಸಿ ಮುಂದಿನ ಚುನಾವಣೆಗೆ ಸಿದ್ಧಗೊಳಿಸಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿರುವುದಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಶರಣ ಪ್ರಕಾಶ ಪಾಟೀಲ್ ಊಡಗಿ ತಿಳಿಸಿದ್ದಾರೆ.ಪಟ್ಟಣದ ವಿಠಲರಾವ ಪಾಟೀಲ್‌ಮನೆಯಲ್ಲಿ ಗುರುವಾರ ಪಕ್ಷದ ಸಭೆಯಲ್ಲಿ ಅವರು ಮಾತನಾಡಿದರು. ಹೈಕಮಾಂಡ್ ಸೂಚನೆ ಮೇರೆಗೆ ಶಾಸಕ ಮಸ್ತಾಕ ಅಲಿ ನೇತೃತ್ವದ ವೀಕ್ಷಕರ ತಂಡವು ಅಭಿಪ್ರಾಯ ಸಂಗ್ರಹಿಸಿತು.ಮಾಜಿ ಉಪಸಭಾಪತಿ ಬಿ.ಆರ್.ಪಾಟೀಲ್ ಬೆಂಬಲಿಗರಾದ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಮ ಪ್ಯಾಟಿ, ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ ಪಾಟೀಲ್, ಮುಖಂಡರಾದ ಸಿದ್ದಣ್ಣಾ ಮಾಸ್ತರ ಸೇಗಜಿ, ದತ್ತಾ ಹೊನ್ನಹಳ್ಳಿ, ಗುರುನಾಥ ಸನ್ಮುಖ, ಸ್ವಾಮಿರಾವ ಚನ್ನಗೊಂಡ, ಗುರುಶರಣ ಪಾಟೀಲ್ ಕೊರಳ್ಳಿ, ವೀರಣ್ಣಾ ಮಂಗಾಣೆ ಮಾತನಾಡಿ, `ಬಿ.ಆರ್.ಪಾಟೀಲ್ ನಾಯಕತ್ವದಲ್ಲಿ ತಾಲ್ಲೂಕಿನಲ್ಲಿ ಚುನಾವಣೆ ಎದುರಿಸಲು ಮುಂದಾಗಬೇಕು. ಇವರು ಈ ಹಿಂದೆ ಶಾಸಕರಾಗಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳು~ ಪಕ್ಷದ ಗೆಲುವಿಗೆ ನೆರವಾಗಲಿದೆ ಎಂದು ತಿಳಿಸಿದರು.ಸಿದ್ದುಗೌಡ ಪಾಟೀಲ್ ಗುಳ್ಳಹಳ್ಳಿ, ಪಂಡಿತ ಶೇರಿಕಾರ, ಶಿವಾ ನಾಗೂರೆ ಮತ್ತಿತರರು, `ಬಿ.ಆರ್. ಪಾಟೀಲ ಅವರಿಗೆ ಟಿಕೇಟ್ ದೊರೆಯುವುದಿಲ್ಲ~ ಎಂದು ಅಪಪ್ರಚಾರ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದಾಗ, ಮಲ್ಲಿನಾಥ ಪಾಟೀಲ ಸೊಂತ, `ಬಿ.ಆರ್.ಪಾಟೀಲ್ ಪ್ರಶ್ನಾತೀತ ನಾಯಕ. ಗಾಳಿ ಸುದ್ದಿಗೆ  ತಲೆ ಕೆಡಿಸಿಕೊಳ್ಳಬಾರದು~ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರರಾವ ದೇಶಮುಖ, ದಶರಥ ಒಂಟಿ, ಮೋಹನಗೌಡ ಪಾಟೀಲ್ ಇತರರಿದ್ದರು. ನಂತರ ಅತಿಥಿ ಗೃಹದಲ್ಲಿ ಕಾಂಗ್ರೆಸ್ ಮುಖಂಡ ಸೂರ್ಯಕಾಂತ ಕೊರಳ್ಳಿ ಬೆಂಬಲಿತ ಕಾರ್ಯಕರ್ತರು ವೀಕ್ಷರನ್ನು ಭೇಟಿ ಮಾಡಿ, ಕೊರಳ್ಳಿ ಪರವಾಗಿ ಮನವಿ ಸಲ್ಲಿಸಿ, ಮುಂದಿನ ಚುನಾವಣೆಯಲ್ಲಿ ಇವರಿಗೆ ಟಿಕೇಟ್ ನೀಡಬೇಕೆಂದು ಒತ್ತಾಯಿಸಿದರು.ಷಣ್ಮುಖಯ್ಯ ಸ್ವಾಮಿ, ಶಾಂತಮಲ್ಲಪ್ಪ ಪಾಟೀಲ್ ಮದಗುಣಕಿ, ಶಿವಪೂಜಪ್ಪ ಬಿರಾದಾರ, ಶಿವಾನಂದ ಉಪ್ಪಿನ್, ಉದಯಕುಮಾರ ಪಾಟೀಲ್, ಶಿವರಾಜ ನೆಲ್ಲೂರೆ, ವಿಜಯಕುಮಾರ ಕಾಮನ್ನಳ್ಳಿ, ಇಮಾಮ ಪಟೇಲ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry