ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಎಸ್‌. ಧೋನಿ, ಜೊಕೊವಿಚ್‌ರಿಂದ ಪ್ರಭಾವಿತನಾಗಿದ್ದೇನೆ: ಗುಕೇಶ್

Published 26 ಏಪ್ರಿಲ್ 2024, 0:38 IST
Last Updated 26 ಏಪ್ರಿಲ್ 2024, 0:38 IST
ಅಕ್ಷರ ಗಾತ್ರ

ಚೆನ್ನೈ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಮತ್ತು ಅಗ್ರಮಾನ್ಯ ಟೆನಿಸ್‌ ತಾರೆ ನೊವಾಕ್ ಜೊಕೊವಿಚ್‌ ಒತ್ತಡದ ಸಂದರ್ಭವನ್ನು ನಿಭಾಯಿಸುವ ರೀತಿ ಗುಕೇಶ್ ಅವರಿಗೆ ಇಷ್ಟವಾಗಿದೆ. ಈ ಇಬ್ಬರು ದಿಗ್ಗಜ ಆಟಗಾರರಿಂದ ಪ್ರಭಾವಿತನಾಗಿರುವುದಾಗಿ ಅವರು ಹೇಳಿದ್ದಾರೆ.

ಈ ಇಬ್ಬರು ತಾರೆಯರು ಎಂಥ ಒತ್ತಡದ ಸಂದರ್ಭವನ್ನೂ ತಾಳಿಕೊಳ್ಳಬಲ್ಲ ಸಮರ್ಥರು. ಅಗತ್ಯದ ಸಂದರ್ಭದಲ್ಲಿ ತಮ್ಮ ಅತ್ಯುತ್ತಮ ಆಟ ಆಡಬಲ್ಲವರು ಎಂದು ಚೆನ್ನೈನ ಗ್ರ್ಯಾಂಡ್‌ಮಾಸ್ಟರ್‌
ಹೇಳಿದ್ದಾರೆ.

ವಿಶ್ವದ ಅಗ್ರಮಾನ್ಯ ಆಟಗಾರ ಕಾರ್ಲ್‌ಸನ್‌ ಹಲವು ಯುವ ಚೆಸ್‌ ಆಟಗಾರರಿಗೆ ಪ್ರೇರಣೆಯಾಗಿದ್ದಾರೆ. ಇದಕ್ಕೆ ಗುಕೇಶ್‌ ಅವರೂ ಹೊರತಲ್ಲ. ‘ಅವರಿಂದ ಹಲವು ವಿಷಯ ಕಲಿಯಬಹುದು. ಬರೇ ಚೆಸ್‌ ಅಷ್ಟೇ ಅಲ್ಲ, ಗಟ್ಟಿಮನೋಬಲ ಹೊಂದಿರು ವವರು ಅವರು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT