ಮುಂಬೈ: ಭಾನುವಾರ ನಿಗದಿಯಾಗಿರುವ ಲಯೊನೆಲ್ ಮೆಸ್ಸಿ ಅವರ ಎರಡು ಕಾರ್ಯಕ್ರಮಗಳ ತಾಣದಲ್ಲಿ ಬಿಗಿ ಭದ್ರತೆ ಏರ್ಪಡಿಲಾಗಿದೆ. ಕೋಲ್ಕತ್ತದಲ್ಲಿ ಶನಿವಾರ ಮೆಸ್ಸಿ ಅವರ ಕಾರ್ಯಕ್ರಮದಲ್ಲಿ ಅಹಿತಕರ ಘಟನೆಗಳು ನಡೆದ ಕಾರಣ ಮುನ್ನೆಚ್ಚರಿಕೆ ವಹಿಸಲಾಗಿದೆ.

ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಾದೆಲ್ ‘ಗೋಟ್’ ಕಪ್ ಕಾರ್ಯಕ್ರಮದಲ್ಲಿ ಮೆಸ್ಸಿ ಭಾಗಿಯಾಗಲಿದ್ದಾರೆ. ನಂತರ ಸೆಲೆಬ್ರಿಟಿಗಳನ್ನು ಒಳಗೊಂಡ ಪ್ರದರ್ಶನ ಪಂದ್ಯವೂ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಬರುವ ಪ್ರೇಕ್ಷಕರು ನೀರಿನ ಬಾಟಲಿ, ನಾಣ್ಯಗಳು, ಲೋಹದ ವಸ್ತುಗಳನ್ನು ಕ್ರೀಡಾಂಗಣದೊಳಕ್ಕೆ ಒಯ್ಯದಂತೆ ತಡೆ ಹೇರಲಾಗುವುದು.

ನೂಕುನುಗ್ಗಲು, ಕಾಲ್ತುಳಿತದಂಥ ಅಪಾಯ ತಪ್ಪಿಸಲು ಹೆಚ್ಚಿನ ಎಚ್ಚರಿಕೆ ವಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬ್ರೆಬೋರ್ನ್ ಕ್ರೀಡಾಂಗಣದಿಂದ ಮೆಸ್ಸಿ ಅವರು ವಾಂಖೆಡೆ ಕ್ರೀಡಾಂಗಣಕ್ಕೆ ತೆರಳಲಿದ್ದು, ಅಲ್ಲಿ ಸಂಜೆ 5 ಗಂಟೆ ಸುಮಾರಿಗೆ ‘ಗೋಟ್’ ಇಂಡಿಯಾ ಪ್ರಧಾನ ಕಾರ್ಯಕ್ರಮ ನಿಗದಿಯಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸುವ ನಿರೀಕ್ಷೆಯಿರುವ ಕಾರಣ ಬಂದೋಬಸ್ತ್ಗಾಗಿ 2000 ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರೇಕ್ಷಕರು ₹5,000 ದಿಂದ 25,000 ತೆತ್ತು ಟಿಕೆಟ್ ಖರೀದಿಸಿದ್ದಾರೆ. 33,000 ಪ್ರೇಕ್ಷಕರು ಕ್ರೀಡಾಂಗಣದೊಳಗೆ ಬರುವ ನಿರೀಕ್ಷೆಯಿದೆ. ಜೊತೆಗೆ ಮೆಸ್ಸಿ ಅವರ ‘ದರ್ಶನ’ ಪಡೆಯಲು ಕ್ರೀಡಾಂಗಣದ ಹೊರಗೆ 30,000 ಜನರು ಸೇರುವ ಸಾಧ್ಯತೆಯಿದೆ. ಪೊಲೀಸರು ವೀಕ್ಷಣಾ ಗೋಪುರಗಳನ್ನೂ ಸ್ಥಾಪಿಸಿದ್ದಾರೆ.

ನಿರಾಶಾದಾಯಕ: ಭುಟಿಯಾ

ಅರ್ಜೆಂಟೀನಾದ ಫುಟ್ಬಾಲ್ ತಾರೆ ಮೆಸ್ಸಿ ಅವರ ಕೋಲ್ಕತ್ತದ ಕಾರ್ಯಕ್ರಮದಲ್ಲಿ ನಡೆದ ಗೊಂದಲ, ಅರಾಜಕತೆಯ ಪರಿಸ್ಥಿತಿಗೆ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ನಿರಾಶೆ ವ್ಯಕ್ತಪಡಿಸಿದ್ದಾರೆ. ದೇಶದ ವರ್ಚಸ್ಸಿಗೆ ಮಸಿ ಬಳಿಯುವ ಇಂಥ ಘಟನೆಗಳು ಮರುಕಳಿಸದಂತೆ ಆಯೋಜಕರು ಎಚ್ಚರಿಕೆ ವಹಿಸಬೇಕು ಎಂದು ಅವರು ಛತ್ತೀಸಗಢದ ರಾಯಪುರ ವಿಮಾನ ನಿಲ್ದಾಣದಲ್ಲಿ ತಿಳಿಸಿದರು.

ಎಐಎಫ್ಎಫ್ ಕಳವಳ

ಕೋಲ್ಕತ್ತದ ಸಾಲ್ಟ್ಲೇಕ್ ಕ್ರೀಡಾಂಗಣದಲ್ಲಿ ನಡೆದ ಗೊಂದಲ, ಅಹಿತಕರ ಘಟನೆಗಳಿಗೆ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಕಳವಳ ವ್ಯಕ್ತಪಡಿಸಿದೆ.

‘ಈ ಸಮಾರಂಭವನ್ನು ಖಾಸಗಿ ಸಂಸ್ಥೆ ಆಯೋಜಿಸಿದೆ. ಎಐಎಫ್ಎಫ್ ಇದರ ಸಂಘಟನೆ, ಯೋಜನೆ, ಆಯೋಜನೆಯಲ್ಲಿ ಯಾವುದೇ ರೀತಿ ಒಳಗೊಂಡಿಲ್ಲ’ ಎಂದು ಎಐಎಫ್ಎಫ್ ಹೇಳಿಕೆಯಲ್ಲಿ ತಿಳಿಸಿದೆ. ಈ ಕಾರ್ಯಕ್ರಮದ ವಿವರಗಳನ್ನು ಎಐಎಫ್ಎಫ್ಗೆ ತಿಳಿಸಿರಲಿಲ್ಲ ಅಥವಾ ಫೆಡರೇಷನ್ನಿಂದ ಅನುಮತಿಯನ್ನೂ ಕೇಳಿರಲಿಲ್ಲ ಎಂದೂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.