ಭಾನುವಾರ, ಮೇ 29, 2022
22 °C

ಊರಿಗಿಲ್ಲ ರಸ್ತೆ, ನೀರಿನ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ: ಪ್ರತಿಯೊಬ್ಬ ಮನುಷ್ಯನಿಗೆ ಜೀವಿಸಲು ಶುದ್ಧ ಕುಡಿಯುವ ನೀರು, ವಾಸಿಸಲು ಮನೆ, ಆಹಾರ, ತನ್ನ ಗೂಡಿಗೆ ತಲುಪಲು ಸಂಪರ್ಕದ ವ್ಯವಸ್ಥೆ, ಒಳ್ಳೆಯ ವಾತಾವರಣ ಮತ್ತಿತರ ಮೂಲ ಸೌಕರ್ಯಗಳು ಬೇಕು. ಆದರೆ 60 ವರ್ಷಗಳಿಂದ ಈ ಸೌಕರ್ಯಗಳಿಂದ ಪರದಾಡುತ್ತಿರುವ ಈ ಪುಟ್ಟ ವಾರ್ಡಿನ ಕರುಣಾಜನಕ ಕಥೆ ಇದು. ಪ್ರಜಾತಂತ್ರ ವ್ಯವಸ್ಥೆಯ ಕತ್ತಲೆಯ ಕರಾಳ  ನೋಟ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ  ಎ.ಸಿ.ಸಿ. ಸಿಮೆಂಟ್ ಕಂಪೆನಿಯ ಪುರಸಭೆ ವ್ಯಾಪ್ತಿಯಲ್ಲಿ ಬರುವ 2 ಕಿ.ಮೀ. ದೂರದಲ್ಲಿರುವ 23ನೇ ವಾರ್ಡ್ ಜನರ ವ್ಯಥೆ ಇದು.ಇಲ್ಲಿ 5ನೇ ತರಗತಿ ಶಾಲೆ, 50 ಕುಟುಂಬಗಳು ವಾಸಿಸುತ್ತವೆ.  ಸರಿಯಾದ ರಸ್ತೆಗಳಿಲ್ಲ, ಕುಡಿಯುವ ನೀರು ಗಣಿಗಾರಿಕೆಗೆಂದು ಅಗೆದ ಕಂದಕದಲ್ಲಿ ನಿಂತ ನೀರೆ ಗತಿ, ಇದರಿಂದ ಕಾಲರಾ ಇನ್ನಿತರ ಕಾಯಿಲೆಗಳು ಅಂಟಿಕೊಳ್ಳುವುದು ಇಲ್ಲಿನ ಜನರಿಗೆ ಹೊಸದೆನಲ್ಲ. ಶಾಲೆಯ ಮಕ್ಕಳು ಈ ನೀರನ್ನೆ ಸೇವಿಸಬೇಕು. ಹಲವಾರು ಬಾರಿ ಮಕ್ಕಳು ಈ ನೀರು ಸೇವಿಸಿ ಅಸ್ತವ್ಯಸ್ತರಾದ ಘಟನೆ ಇದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಸುಳಿವುದಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.ಸರಿಯಾದ ರಸ್ತೆಗಳಿಲ್ಲದೆ ಗರ್ಭಿಣಿ ಮಹಿಳೆಯರಿಗೆ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಅವರ ಯಾತನೆ ಹೇಳತಿರದು ಎನ್ನುತ್ತಾರೆ ಶಾರದಾಬಾಯಿ.ಹಿನ್ನಲೆ: 1952ರಲ್ಲಿ ಅಂದಿನ ಕಾಲದ  ‘ಸ್ಟೋನ್ ಡಬ್ಲು.ಎಸ್.ಎಮ್. ಕಂಪೆನಿ’ಯ ಮಾಲೀಕ ಗುತ್ತಾಸೇಟ್ ತನ್ನ ಗಣಿ ಉದ್ಯಮ ನಡೆಸುವ ಸಲುವಾಗಿ ವಿವಿಧ ಗ್ರಾಮಗಳಿಂದ ಕೆಲ ಜನರನ್ನು ಕರೆ ತಂದ ಮಾಲೀಕ ಇನ್ನಿಲ್ಲ. ಈಗ ಗಣಿಯ ಮಾಲಿಕರು ಮಗ ನರ್ಮದ ಶೇಠ ಮತ್ತು ನವಿದಬಾಬಾ ಶೇಠ, ಇವರಿಬ್ಬರ ಮದ್ಯ ಖ್ಯಾತೆ ಬಂದಿದ್ದರಿಂದ ಇಲ್ಲಿನ ನಿವಾಸಿಗಳಿಗೆ ಮನೆ ಖಾಲಿ ಮಾಡಿ ಎಂಬ ಮಾತು ಜನರಿಗೆ ದಿಕ್ಕು ದೋಚದಂತಾಗಿದೆ ಎಂದು ವೀರಣ್ಣ ನಿಂಬಳ್ಕರ್, ಬಸ್ಸು ಮಾರಾಜ, ನರಸಿಂಗ್ ತಿಳಿಸಿದರು. ಮಗ ಇವರ ಪರವಾಗಿದ್ದು ಸಮಸ್ಯೆ ಕೋರ್ಟ್ ಅಂಗಳದಲ್ಲಿದೆ.ಶಾಸಕ ವಾಲ್ಮೀಕ ನಾಯಕ, ಪುರಸಭೆ ಮತ್ತು ಎ,ಸಿ.ಸಿ ಕಂಪೆನಿ ಅಧಿಕಾರಿಗಳು ತಮ್ಮ ಕಡೆ ಗಮನ ಹರಿಸಿಬೇಕೆಂದು ಜನರು ಕೋರಿದ್ದಾರೆ.  

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.