ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಕೂಪ

7

ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಕೂಪ

Published:
Updated:

ಕೆಂಭಾವಿ: ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಜನರು ಈ ಸಲದ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶಾಸಕ ಶರಣ  ಬಸಪ್ಪಗೌಡ ದರ್ಶನಾಪೂರ ಹೇಳಿದರು.ಸಮೀಪದ ಪರಸನಹಳ್ಳಿ ಗ್ರಾಮದಲ್ಲಿ ಗುಲ್ಬರ್ಗ ಜಿಲ್ಲಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಸಿದ್ರಾಮರೆಡ್ಡಿ ಸನ್ಮಾನ ಹಾಗೂ ಪರಸನಹಳ್ಳಿ ಗ್ರಾಮದ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಸರ್ಕಾರ ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡುತ್ತಿದೆ.ರಾಜ್ಯದ ಇತಿಹಾಸದಲ್ಲಿ ಯಾವೊಬ್ಬ ಮುಖ್ಯಮಂತ್ರಿಯೂ ಜೈಲಿಗೆ ಹೋಗಿರಲಿಲ್ಲ.ಆದರೆ ಮೂವರು ಮುಖ್ಯಮಂತ್ರಿಗಳನ್ನು ಕಂಡ ಬಿಜೆಪಿ ಸರ್ಕಾರದಲ್ಲಿ, ಈಗಾಗಲೇ ಒಬ್ಬ ಮುಖ್ಯಮಂತ್ರಿಗಳು ಸೇರಿದಂತೆ ಹಲವಾರು ಮಂತ್ರಿಗಳು ಜೈಲಿಗೆ ಹೋಗಿ ಬಂದಿದ್ದಾರೆ. ಸರ್ಕಾರದ ಆಸ್ತಿಯನ್ನು ಲಪಟಾಯಿಸಿದ ಗಣಿ ಧಣಿಗಳು ಜೈಲು ಸೇರಿದ್ದಾರೆ. ಮೊದಲ ಬಾರಿಗೆ ಬಿಜೆಪಿ ಸರ್ಕಾರ ಶಾಸಕರ ಖರೀದಿಗೆ ಇಳಿದಿದ್ದು, ಅನೇಕ ಬಿಜೆಪಿ ಕಾರ್ಯಕರ್ತರಿಗೆ ಭ್ರಮನಿರಸನವಾಗಿದೆ ಎಂದರು.

ರಾಜ್ಯದ ಜನ ಬದಲಾವಣೆ ಬಯಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಹೇಳಿದರು.ಬಿಜೆಪಿ ಮುಖಂಡರಾದ ಗಿರೆಣ್ಣಗೌಡ ಪೊಲೀಸ್‌ಪಾಟೀಲ, ಹಳ್ಳೆಪ್ಪಗೌಡ ಪೊಲೀಸ್‌ಪಾಟಿಲ, ಶಂಕರಗೌಡ ಪೊಲೀಸ್‌ಪಾಟೀಲ, ಆನಂದ ವಜ್ಜಲ, ಪರಮಣ್ಣ ವಂದಗನೂರ, ಪ್ರಭುಗೌಡ ನಗನೂರ, ನಿಂಗಪ್ಪ ತೋಟದ, ಮಲ್ಲಪ್ಪ ಪೂಜಾರಿ, ಸಿದ್ಧಪ್ಪ ದೊಡಮನಿ, ಸಿದ್ಧನಗೌಡ, ಮುಂತಾದವರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್, ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ಧನಗೌಡ ಪೊಲೀಸ್‌ಪಾಟೀಲ, ಮುಖಂಡರಾದ ಬಸಣ್ಣ ಬೂದೂರ, ಶರಣಬಸ್ಸು ಡಿಗ್ಗಾವಿ, ಶಾಂತಗೌಡ ನೀರಲಗಿ, ಸಂಗನಗೌಡ ಮರಡ್ಡಿ, ಕೃಷ್ಣಯ್ಯ ಗುತ್ತೇದಾರ, ಶಾಂತಗೌಡ ಪಾಟೀಲ ಏವೂರ, ಶಿವಮಾಂತ ಚಂದಾಪುರ, ವಾಮನರಾವ ದೇಶಪಾಂಡೆ, ಮಲ್ಲಣ್ಣ ಮೇಟಿ, ಶರಣಗೌಡ ದೇಸಾಯಿ, ತಮ್ಮನಗೌಡ, ಮಲ್ಲಯ್ಯ ಕಮತಗಿ,ಗದ್ದೆಪ್ಪ ನಾಯ್ಕೋಡಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಖಾಜಾ ಪಟೇಲ್ ಕಾಚೂರ, ನಂದರೆಡ್ಡೆಪ್ಪಗೌಡ ಮೇಟಿ ಮುಂತಾದವರು ಭಾಗವಹಿಸಿದ್ದರು. ಎಪಿಎಂಸಿ ಸದಸ್ಯ ಮಲ್ಲಣ್ಣ ಹೆಗ್ಗೇರಿ ಸ್ವಾಗತಿಸಿದರು. ಪಿಡ್ಡಪ್ಪ ಅಣಬಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry