ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಮಾರ್ಗ ಮತ್ತು ಪ್ರಯತ್ನದಲ್ಲಿ ನಂಬಿಕೆ ಇರಲಿ
Published 6 ಮೇ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವಾಹನ ಮಾರಾಟಗಾರರು ವಾಕ್ಪಟುತ್ವದಿಂದ ಉತ್ತಮ ಹೊಗಳಿಕೆಯನ್ನು ಕೇಳುವಿರಿ. ಧಾನ್ಯ ಖರೀದಿ ಮಾಡುವಾಗ ಮಧ್ಯವರ್ತಿಗಳ ಅತಿಯಾಸೆಗೆ ಬೇಸರ ಪಡುವಿರಿ.
ವೃಷಭ
ಅಭಿವೃದ್ಧಿಗೆ ಕಾರಣರಾದವರನ್ನು ಮರೆತು ಶುಭ ಕಾರ್ಯಗಳನ್ನು ಹಮ್ಮಿಕೊಂಡಿದ್ದರೆ ಯೋಚಿಸಿ; ಅದರಿಂದಾಗುವ ಮನಸ್ತಾಪವನ್ನು ತಪ್ಪಿಸಿ. ಮುಖ್ಯವಾದ ಕೆಲಸಕ್ಕಾಗಿ ಪ್ರಯಾಣ ಬೆಳೆಸುವಿರಿ.
ಮಿಥುನ
ಸ್ನೇಹಿತನೊಂದಿಗೆ ಮುನಿಸಿನ ತೆರೆಯನ್ನು ಬದಿ ಸರಿಸಿ,ಉತ್ತಮ ಸಮಯ ಅನುಭವಿಸುವಿರಿ. ಈಟಿಯಲ್ಲಿ ಇರಿಯುವಂಥ ಮಾತುಗಳ ಮೇಲೆ ಹಿಡಿತವಿರಲಿ. ಮಾರ್ಗ ಮತ್ತು ಪ್ರಯತ್ನದಲ್ಲಿ ನಂಬಿಕೆ ಇರಲಿ.
ಕರ್ಕಾಟಕ
ಯಾವುದೋ ಯೋಚನೆ ಮಾಡುತ್ತಾ ಇನ್ನಾವುದೋ ಕೆಲಸ ಮಾಡಿ ಅಪಘಾತಗಳನ್ನು ಮಾಡಿಕೊಳ್ಳಬೇಡಿ. ಜವಾಬ್ದಾರಿಯುತ ಯೋಜನೆಯ ಸ್ಪಷ್ಟ ವಿಷಯವೊಂದನ್ನು ಆಳವಾಗಿ ಅಧ್ಯಯನ ಮಾಡಬೇಕಾಗುತ್ತದೆ.
ಸಿಂಹ
ತವರಿನಲ್ಲಿ ನಡೆದ ಘಟನೆಗಳಿಂದ ಅತ್ಯಂತ ಸಂತೋಷ ಹೊಂದುವಿರಿ. ತವರಿನ ಕಡೆಯವರು ಮನೆಗೆ ಬರುವ ಸಾಧ್ಯತೆಗಳಿವೆ. ಸುಗಂಧ ದ್ರವ್ಯ ತಯಾರಕರು ಹಾಗೂ ಮಾರಾಟಗಾರರಿಗೆ ಲಾಭದಾಯಕ ದಿನವಾಗಲಿದೆ.
ಕನ್ಯಾ
ಸಂಘ–ಸಂಸ್ಥೆಗಳ ವಿಚಾರವನ್ನು ಮುಕ್ತವಾಗಿ ಚರ್ಚಿಸಿ ನಂತರದಲ್ಲಿ ಕೆಲಸಗಳನ್ನು ಕಾರ್ಯರೂಪಕ್ಕೆ ತರುವುದು ಉತ್ತಮ. ಸಮಪಾಲು ಸಮ ಬಾಳು ಎಂಬ ಧ್ಯೇಯವನ್ನು ಪಾಲಿಸಿ.
ತುಲಾ
ವಂಶಾಭಿವೃದ್ಧಿಯಾಗಿರುವ ವಿಚಾರದಿಂದ ಸಂತೋಷ ಮುಗಿಲುಮುಟ್ಟುವುದು. ಮಾನಸಿಕ ಶಕ್ತಿಗಳು ಬಲಯುತವಾಗಿ ಯೋಚನೆಗಳನ್ನು ಶೀಘ್ರವೇ ಕಾರ್ಯರೂಪಕ್ಕೆ ಇಳಿಸುತ್ತೀರಿ.
ವೃಶ್ಚಿಕ
ಮನಸ್ಸಿಗೆ ಬಂದ ಮಾತುಗಳನ್ನು ಆಡದೆ ಯೋಚನೆ ಮಾಡಿ ತೂಕದ ಮಾತುಗಳನ್ನು ಆಡಿದಲ್ಲಿ ಗೌರವಗಳು ಹೆಚ್ಚಾಗುವುದು. ಆಕಸ್ಮಿಕವಾಗಿ ಬರುವಂಥ ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸುವಿರಿ.
ಧನು
ನೃತ್ಯ ಕಲಾವಿದರು ಹಾಗೂ ಪ್ರಹಸನಕಾರರಿಗೆ ಉತ್ತಮ ಅವಕಾಶಗಳು ಅರಸಿಕೊಂಡು ಬರಲಿವೆ. ವಾದ-ವಿವಾದಗಳಿಂದ, ರಾಜಿ–ಪಂಚಾಯ್ತಿಗಳಿಂದ ಇಂದು ದೂರವಿರಿ. ಸಾಧ್ಯವಾದಷ್ಟು ಶಾಂತಿಯಿಂದ ಕೆಲಸವನ್ನು ಸಾಧಿಸಿ.
ಮಕರ
ಮಾಡುತ್ತಿರುವ ಕೆಲಸದಲ್ಲಿ ಹಣದ ಕೊರತೆ ಕಂಡುಬಂದರೆ ಸಂಕೋಚ ಮಾಡಿಕೊಳ್ಳದೆ ಆತ್ಮೀಯರಲ್ಲಿ ಕೇಳಿ . ತೀರಿಸುವ ಸಾಮರ್ಥ್ಯ ಇದೆ. ಉತ್ತಮ ಬುದ್ಧಿಶಕ್ತಿಯಿಂದ ಜನ ಮನ್ನಣೆ ಗಳಿಸಬಹುದು.
ಕುಂಭ
ಬಹುದಿನಗಳ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೀಡುವ ಪ್ರದರ್ಶನಕ್ಕೆ ಪ್ರಶಂಸೆಗಳ ಮಹಾಪೂರ ಹರಿದು ಬರಲಿದೆ. ಚುಟುಕಾದ ಹಾಗೂ ಸರಿಯಾದ ಮರುತ್ತರಗಳಿಗೆ ಪ್ರಶಂಸೆಗಳು ದೊರೆಯುತ್ತವೆ.
ಮೀನ
ಕೋರ್ಟ್ ಕೆಲಸಗಳಲ್ಲಿ ಜಯ ಉಂಟಾಗಿ ಸಮಸ್ಯೆಗಳು ಬಗೆಹರಿಯುತ್ತವೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಆದಾಯದ ಎರಡರಷ್ಟು ಖರ್ಚು ಸಂಭವಿಸಬಹುದು.