ಮಡೆಸ್ನಾನ ಅವಮಾನ

7

ಮಡೆಸ್ನಾನ ಅವಮಾನ

Published:
Updated:

ಗುಲ್ಬರ್ಗ: ಪ್ರಸ್ತುತ ಸಂಕಷ್ಟ ಪರಿಸ್ಥಿತಿಯಲ್ಲಿ ಮಡಿವಂತರು ಮಡೆಸ್ನಾನವನ್ನು ಸಂಸ್ಕೃತಿಕ ಭಾಗವೆಂದು ಬಿಂಬಿಸಿ, ಅದನ್ನು ವೈಭವೀಕರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೋಲಾರದ ಆದಿಮ ಸಂಸ್ಥೆಯ ಅಧ್ಯಕ್ಷ ಕೋಟಿಗಾನಹಳ್ಳಿ ರಾಮಯ್ಯ ಸೋಮವಾರ ಇಲ್ಲಿ ಹೇಳಿದರು.ಗುಲ್ಬರ್ಗ ವಿಶ್ವವಿದ್ಯಾಲಯದ ಡಾ. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದ್ದ `ಪಿ.ಜಿ. ಡಿಪ್ಲೊಮಾ ಇನ್ ಅಂಬೇಡ್ಕರ್ ಸ್ಟಡೀಸ್~ ಪ್ರಾರಂಭೋತ್ಸವ ಸಮಾರಂಭದಲ್ಲಿ ಮಾತನಾಡಿದರು.

`ಡಾ. ಬಾಬಾಸಾಹೇಬ ಅಂಬೇಡ್ಕರ್ ಈ ನೆಲದ ಸರ್ವಶ್ರೇಷ್ಠ ಚಿಂತಕ ಹಾಗೂ ಸಮಾಜ ಸುಧಾರಕ.

 

ಹೀಗಾಗಿ ದೇಶದ ಸಂಸ್ಕೃತಿಯನ್ನು ಅಂಬೇಡ್ಕರರ ದೃಷ್ಟಿಕೋನದಲ್ಲಿ ನೋಡಿದಾಗ ಮಾತ್ರ, ಒಂದು ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ~ ಎಂದು ಅಭಿಪ್ರಾಯಪಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಡಿ.ಬಿ. ನಾಯಕ್ ಮಾತನಾಡಿ, `ಬುದ್ಧ, ಅಂಬೇಡ್ಕರ್ ಹಾಗೂ ಬಸವಣ್ಣನವರು ಯಾವುದೇ ಒಂದು ಜಾತಿಗೆ ಸಿಮೀತವಾದವರಲ್ಲ. ಅವರನ್ನು ಎಲ್ಲರೂ ಒಪ್ಪಿಕೊಂಡಾಗ ಮಾತ್ರ ಸುಧಾರಣೆ ಸುಲಭವಾಗುತ್ತದೆ~ ಎಂದರು.ಡಾ. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ. ಎಚ್.ಟಿ. ಪೋತೆ ಸ್ವಾಗತಿಸಿದರು. ಪ್ರೊ. ಬಸವರಾಜ ಸಬರದ ವಂದಿಸಿದರು. ಪ್ರೊ. ಗುರು ಶ್ರೀರಾಮಲು ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry