ಕಲಾವಿದನಿಗೆ ಪಾವತಿಯಾಗದ ಮೊತ್ತ

7

ಕಲಾವಿದನಿಗೆ ಪಾವತಿಯಾಗದ ಮೊತ್ತ

Published:
Updated:

ಗುಲ್ಬರ್ಗ:ಬೆಳಗಾವಿಯಲ್ಲಿ ಲೋಕಾರ್ಪಣೆಗೊಳ್ಳಲಿರುವ `ಸುವರ್ಣ ಸೌಧ~ಕ್ಕೆ ರಾಷ್ಟ್ರೀಯ ಲಾಂಛನವಾದ ಅಶೋಕ ಸ್ತಂಭ ತಯಾರಿಸಿಕೊಟ್ಟ ಇಲ್ಲಿನ ಕಲಾವಿದನಿಗೆ ಈವರೆಗೆ ಪೂರ್ಣ ಹಣ ಪಾವತಿಯಾಗಿಲ್ಲ!

ಸುಮಾರು ಆರೂವರೆ ಟನ್ ತೂಕದ ಕಂಚಿನ ಲಾಂಛನವನ್ನು ರೂ. 75 ಲಕ್ಷ ವೆಚ್ಚದಲ್ಲಿ ಸಿದ್ಧಪಡಿಸುವ ಜವಾಬ್ದಾರಿಯನ್ನು ವಿ.ಟಿ.ಎನ್ ಕ್ರಿಯೇಟಿವ್ ಆರ್ಟ್ ಸ್ಟುಡಿಯೋದ ಮುಖ್ಯಸ್ಥ ಹಾಗೂ ಹಿರಿಯ ಕಲಾವಿದ ವಿಶ್ವೇಶ್ವರಯ್ಯ ಟಿ. ನಾಯಿಂದ್ರಕರ್ ಅವರಿಗೆ ಪುಣೆಯ ಬಿ.ಜಿ.ಶಿರ್ಕೆ ಕನ್ಸ್‌ಟ್ರಕ್ಷನ್ ಟೆಕ್ನಾಲಜೀಸ್ ಕಂಪೆನಿಯು ವಹಿಸಿತ್ತು.

 

ಈ ಸ್ತಂಭವನ್ನು ಕೇವಲ ಮೂರು ತಿಂಗಳಲ್ಲಿ ಪೂರ್ಣಗೊಳಿಸಿದ ವಿಶ್ವೇಶ್ವರಯ್ಯ ಅವರು, ಕಳೆದ ಜುಲೈ 15ರಂದು ಅದನ್ನು ಬೆಳಗಾವಿಗೆ ಕಳಿಸಿದ್ದರು.“ಆದರೆ ನನಗೆ ಬರಬೇಕಾದ ಪೂರ್ಣ ಮೊತ್ತ ಪಾವತಿಸಿಲ್ಲ. ಹಲವು ಸಲ ಅಲೆದಾಡಿದಾಗ 45 ಲಕ್ಷ ರೂಪಾಯಿ ಕೊಟ್ಟಿದ್ದು, ಬಾಕಿ ಮೊತ್ತ 30 ಲಕ್ಷ ರೂಪಾಯಿ ಈವರೆಗೆ ಕೊಟ್ಟಿಲ್ಲ. ಸಾಲ ಮಾಡಿ ಕಚ್ಚಾವಸ್ತು ಖರೀದಿಸಿದ್ದೇನೆ; ಕಾರ್ಮಿಕರಿಗೆ ಕೂಲಿ ಹಣ ಕೊಟ್ಟಿದ್ದೇನೆ. ಎಷ್ಟು ಗೋಗರೆದರೂ ಬಾಕಿ ಹಣ ಕೊಡುತ್ತಿಲ್ಲ” ಎಂದು ವಿಶ್ವೇಶ್ವರಯ್ಯ ಅಳಲು ತೋಡಿಕೊಂಡಿದ್ದಾರೆ.ಇದೇ ರೀತಿ, ಬೆಳಗಾವಿ ಮಹಾನಗರ ಪಾಲಿಕೆಯು 339 ಕಿಲೋ ತೂಕದ ಅಶೋಕ ಸ್ತಂಭ ನಿರ್ಮಿಸುವ ಕಾಮಗಾರಿಯನ್ನು ಇವರಿಗೆ ವಹಿಸಿದೆ. ಇದಕ್ಕಾಗಿ ಪಾಲಿಕೆಯು ನೀಡಬೇಕಾದ ಮೊತ್ತ 4,91,550 ರೂಪಾಯಿ. ಆದರೆ ಈವರೆಗೆ 2.2 ಲಕ್ಷ ರೂಪಾಯಿ ಮಾತ್ರ ಪಾವತಿಸಿ, ಬಾಕಿ ಹಣ ಕೊಡುತ್ತಿಲ್ಲ ಎಂದು ಅವರು ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry