ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ

7

ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ

Published:
Updated:

ಗುಲ್ಬರ್ಗ: ನಗರದಲ್ಲಿ ಅಕ್ಟೋಬರ್ 18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದ ಎಲ್ಲ ಜಿಲ್ಲೆಗಳ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬಳಮಗಿ ತಿಳಿಸಿದರು.ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ನೇತೃತ್ವದಲ್ಲಿ ಮಂಗಳವಾರ ನಗರದ  ಐವಾನ್ ಇ ಶಾಹಿ ಅತಿಥಿಗೃಹದಲ್ಲಿ `ಅಭಿವೃದ್ಧಿ ಕುರಿತ ದುಂಡುಮೇಜಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಸರ್ಕಾರದ ಅಧಿಕಾರಾವಧಿಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿಪರ ಕಾರ್ಯ ಹಾಗೂ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಈ ಭಾಗದ ಆಶೋತ್ತರಗಳನ್ನು ಸಚಿವ ಸಂಪುಟದಲ್ಲಿ ಈಡೇರಿಸಬೇಕು ಎಂದು  ವಿನಂತಿ ಸಲಾಗಿದೆ ಎಂದರು.ಅಮೃತ ಯೋಜನೆ ಅಡಿಯಲ್ಲಿ 33 ಸಾವಿರ ಫಲಾನುಭವಿಗಳನ್ನು ಗುರುತಿಸಲಾಗಿದೆ. ನಬಾರ್ಡ್ ಯೋಜನೆ ಅಡಿಯಲ್ಲಿ ಸಾಲದ ವ್ಯವಸ್ಥೆ ಮಾಡಲಾಗಿದೆ. ಕುರಿ ಸಾಕಾಣಿಕೆಗೆ ರೂ. 5ಲಕ್ಷದಿಂದ ರೂ. 25 ಲಕ್ಷದವರೆಗೆ ಸಾಲ ನೀಡಲಾಗಿದೆ ಎಂದರು.ಕುರಿಕೋಟಾ ಸೇತುವೆ ದುರಸ್ತಿ ಕಾರ್ಯ ಹೈದರಾಬಾದ್ ಮೂಲದವರಿಂದ ನಡೆದಿದ್ದು, ದುರಸ್ತಿ ಕಾರ್ಯದ ವೆಚ್ಚ 6 ಕೋಟಿ 3 ಲಕ್ಷ ಇರುವುದರಿಂದ ಶೀಘ್ರವೇ ಗುಲ್ಬರ್ಗದಲ್ಲಿ ನಡೆಯಲಿರುವ ಸಚಿವ ಸಂಪುಟದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಶಾಸಕರಾದ ಅಲ್ಲಮಪ್ರಭು ಪಾಟೀಲ, ಶಶೀಲ್ ಜಿ. ನಮೋಶಿ, ದೊಡ್ಡಪ್ಪಗೌಡ ಪಾಟೀಲ, ರೈತ ಮುಖಂಡ ಕೇದಾರಲಿಂಗಯ್ಯ ಹಿರೇಮಠ, ದಿನಗೂಲಿ ನೌಕರರ ಸಮಘದ ಚಂದ್ರಶೇಖರ ಹಿರೇಮಠ, ವೀರಕನ್ನಡಿಗರ ಸೇನೆಯ ಅಮೃತ ಚ. ಪಾಟೀಲ, ಗೊಂಡ ಕುರುಬ ಸಮಾಜದ ಮಹಾಂತೇಶ ಕೌಲಗಿ,ಬಸವರಾಜ ಎಂ. ರಾವೂರ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ನಾಲ್ವಾರಕರ್, ಯಶವಂತ ಹತ್ತರಕಿ, ಅರ್ಥಶಾಸ್ತ್ರಜ್ಞೆ ಸಂಗೀತಾಟ್ಟಿಮನಿ, ಸಾಹಿತಿಗಳಾದ ಪ್ರೊ. ವಸಂತ ಕುಷ್ಟಗಿ, ಪ್ರೊ. ಶಿವರಾಜ ಪಾಟೀಲ, ಸುಭಾಷ್ ಗೌಳಿ ಈ ಭಾಗದ ಅಭಿವೃದ್ಧಿಗೆ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಬೇಕಾದ ನಿರ್ಣಯಗಳ ಕುರಿತು ಸಚಿವಗಮನಸೆಳೆದರು.ಸಂಪುಟದಲ್ಲಿ ಗಣನೆಗೆ ತೆಗೆದುಕೊಳ್ಳಬೇಕಾದ ಪ್ರಮುಖ ವಿಷಯಗಳಾದ ಸಂವಿಧಾನದ 371ನೇ ಕಲಂ ತಿದ್ದುಪಡಿಯಿಂದಾಗಿ ಸಿಗುವ ಎಲ್ಲ ಸ್ಥಾನಮಾನಗಳನ್ನು ಒದಗಿಸಬೇಕು, ಈ ಪ್ರದೇಶದ ಬೃಹತ್, ಮಧ್ಯಮ ಮತ್ತು ಸಣ್ಣ ನೀರಾವರಿ ಯೋಜನೆಗಳನ್ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಸೇರ್ಪಡೆ ಮಾಡಬೇಕು, ಎಚ್ಕೆಡಿಬಿಗೆ ಇನ್ನೂ ಹೆಚ್ಚಿನ ಅನುದಾನ ನೀಡಬೇಕು, ಹೈ.ಕ. ಇತಿಹಾಸವನ್ನು   ಪಠ್ಯದಲ್ಲಿ ಸೇರ್ಪಡೆ ಮಾಡಬೇಕು,ಗುಲ್ಬರ್ಗ-ರಾಯಚೂರಿನಲಐಟಿ ಕೇಂದ್ರಗಳನ್ನು ಸ್ಥಾಪಿಸಬೇಕು, ಗುಲ್ಬರ್ಗದಲ್ಲಿ ವಿಕಾಸಸೌಧದ ಆವರಣದಲ್ಲಿ ವಿಮೋಚನಾ ಹೋರಾಟಗಾರ ಸರ್ದಾರ್ ಶರಣಗೌಡರ ಪ್ರತಿಮೆ ಸ್ಥಾಪಿಸಬೇಕು ಎಂಬ ಹಲವಾರು ಪ್ರಮುಖ ಬೇಡಿಕೆಗಳನ್ನು ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ ಆರಂಭದಲ್ಲಿ ಸಭೆಯ ಗಮನಕ್ಕೆ ತಂದರು.ಗುಲ್ಬರ್ಗ ವಿವಿ ರಾಘವೇಂದ್ರ ಕುಲಕರ್ಣಿ, ಮನೀಷ್ ಜಾಜು, ಮಿರಾಜೋದ್ದಿನ್, ಶಾಂತಪ್ಪ ಕಾರಭಾಸಗಿ, ಸಚಿನ್ ಫರಹತಾಬಾದ್, ಸುಂದರರಾಜ್, ಗೋಪಾಲ ನಾಟಿಕಾರ, ಭವಾನಿಕುಮಾರ ವಳಕೇರಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು. ಸಮಿತಿ ವಕ್ತಾರ ನಾಗಲಿಂಗಯ್ಯ ಮಠಪತಿ ಸ್ವಾಗತಿಸಿ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry