ಭಾನುವಾರ, ಏಪ್ರಿಲ್ 18, 2021
24 °C

ಮಕ್ಕಳಲ್ಲಿ ಓದುವ ಹವ್ಯಾಸ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: `ಪಠ್ಯ ಪುಸ್ತಕಗಳ ಜೊತೆಗೆ ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಹುಡುಕಿ, ಓದುವ ಹವ್ಯಾಸ ರೂಢಿಸುವುದು ಅಗತ್ಯ~ ಎಂದು ರಂಗಭೂಮಿ ನಿರ್ದೇಶಕ ಸಿದ್ದರಾಮ ರಾಜಮಾನೆ ಅಭಿಪ್ರಾಯ ವ್ಯಕ್ತಪಡಿಸಿದರು.ಅಫಜಲಪುರ ತಾಲ್ಲೂಕಿನ ಮದರಾ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಮಹತ್ವದ ಯೋಜನೆಯಲ್ಲಿ ಶಾಲಾ ವಾಚನಾಲಯದ `ತೆಗೆಯಿರಿ ಪುಸ್ತಕ ಹೊರಗೆ-ಹಚ್ಚಿರಿ ಜ್ಞಾನದ ದೀವಿಗೆ~ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಿ.ಆರ್.ಪಿ ಗುರುರಾಜ ಆಹೇರಿ ಶಾಲಾ ಗ್ರಂಥಾಲಯವನ್ನು ಶಾಲಾ ಶ್ರದ್ಧಾ ವಾಚನಾಲಯ ಎಂದು ನಾಮಕರಣ ಮಾಡಿದರು. `ಅವ್ವ~ ಮಹಿಳಾ ಸಂಸ್ಥೆ ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.  ಮುಖ್ಯಗುರು ಪ್ರಮೀಳಾ ಪುರವಂತ ಅಧ್ಯಕ್ಷತೆ ವಹಿಸಿದ್ದರು. ಮಲ್ಲಣ್ಣ ಪಾಟೀಲ, ಕಾಸಿಂ ಅನ್ಸಾರಿ, ಬಾಬು ಪವಾರ ಇದ್ದರು. ಶಿಕ್ಷಕ ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೋಭಾ ಸ್ವಾಮಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.