ಇಂದೋರ್: ಭಾನುವಾರ ರಾತ್ರಿ ವಿರಾಟ್ ಕೊಹ್ಲಿ ಛಲದ ಶತಕ ಮತ್ತು ಹರ್ಷಿತ್ ರಾಣಾ ಅವರ ಸ್ಫೋಟಕ ಅರ್ಧಶತಕ ಮಾತ್ರ ಭಾರತದ ಅಭಿಮಾನಿಗಳ ನೆನಪಿನ ಪುಟದಲ್ಲಿ ಸೇರಿದವು. ಆದರೆ ನ್ಯೂಜಿಲೆಂಡ್ ತಂಡವು 38 ವರ್ಷಗಳ ನಂತರ ಭಾರತದಲ್ಲಿ ಏಕದಿನ ಕ್ರಿಕೆಟ್ ಸರಣಿ ಜಯಿಸಿತು.

ಹೋಳ್ಕರ್ ಮೈದಾನದಲ್ಲಿ ನಡೆದ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಕಿವೀಸ್ ಬಳಗವು 41 ರನ್ಗಳಿಂದ ಗೆದ್ದಿತು. 2–1ರಿಂದ ಸರಣಿ ಕಿರೀಟ ಧರಿಸಿತು.

338 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ್ದ ಭಾರತ ತಂಡಕ್ಕೆ 46 ಓವರ್ಗಳಲ್ಲಿ 296 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ವಿರಾಟ್ 108 ಎಸೆತಗಳಲ್ಲಿ 124 ರನ್ ಗಳಿಸಿದರು. ಸಮಚಿತ್ತ ಮತ್ತು ಸಂದರ್ಭಕ್ಕೆ ತಕ್ಕ ಆಕ್ರಮಣಶೀಲ ಆಟವು ಅವರ ಇನಿಂಗ್ಸ್ನಲ್ಲಿ ಮೇಳೈಸಿತ್ತು. ಚೇಸ್ ಮಾಸ್ಟರ್ ಖ್ಯಾತಿಗೆ ತಕ್ಕ ಆಟವಾಡಿದರು. ಆದರೆ ನಿತೀಶ್ ಕುಮಾರ್ ರೆಡ್ಡಿ (53; 57ಎ, 4X2, 6X2) ಮತ್ತು ಹರ್ಷಿತ್ ರಾಣಾ (52; 43ಎ, 4X4, 6X4) ಅವರನ್ನು ಬಿಟ್ಟರೆ ಉಳಿದ ಬ್ಯಾಟರ್ಗಳಿಂದ ಕೊಹ್ಲಿಗೆ ಬೆಂಬಲ ಸಿಗಲಿಲ್ಲ.

ಆರಂಭಿಕ ಜೋಡಿ ರೋಹಿತ್ ಶರ್ಮಾ (11 ರನ್ ) ಮತ್ತು ನಾಯಕ ಶುಭಮನ್ ಗಿಲ್ (23ಎ) ಕೂಡ ತಂಡದ ಮೊತ್ತ 50 ರನ್ ಮುಟ್ಟುವ ಮುನ್ನವೇ ನಿರ್ಗಮಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜ ಕೂಡ ಕುಸಿದರು. ಕಿವೀಸ್ ತಂಡದ ಝ್ಯಾಕ್ರಿ ಫೌಲ್ಕೆಸ್ (77ಕ್ಕೆ3) ಹಾಗೂ ಕ್ರಿಸ್ಟನ್ ಕ್ಲರ್ಕ್ (54ಕ್ಕೆ3) ಶಿಸ್ತಿನ ದಾಳಿ ನಡೆಸಿದರು.

ಮಿಚೆಲ್ –ಗ್ಲೆನ್ ಶತಕದಾಟ: ಸರಣಿಯಲ್ಲಿ ಸತತ ಎರಡನೇ ಶತಕ ಬಾರಿಸಿದ ಡ್ಯಾರಿಲ್ ಮಿಚೆಲ್ (137; 131ಎ, 4X15, 6X3) ಮತ್ತು ಅಬ್ಬರದ ಬ್ಯಾಟಿಂಗ್ ಮಾಡಿದ ಗ್ಲೆನ್ ಫಿಲಿಪ್ಸ್ (106; 88ಎ, 4X9, 6X3) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 219 ರನ್ ಸೇರಿಸಿದರು. ತಂಡವು ಬೃಹತ್ ಮೊತ್ತ ಗಳಿಸಲು ಕಾರಣರಾದರು.

ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಎಡಗೈ ವೇಗಿ ಅರ್ಷದೀಪ್ ಸಿಂಗ್ ಮೊದಲ ಓವರ್ನಲ್ಲಿಯೇ ಹೆನ್ರಿ ನಿಕೊಲ್ಸ್ ಅವರನ್ನು ಕ್ಲೀನ್ಬೌಲ್ಡ್ ಮಾಡಿದರು. ಹೆನ್ರಿ ಬರಿಗೈಯಲ್ಲಿ ಮರಳಿದರು. ನಂತರದ ಓವರ್ನಲ್ಲಿ ಹರ್ಷಿತ್ ರಾಣಾ ಎಸೆತದಲ್ಲಿ ರೋಹಿತ್ ಪಡೆದ ಕ್ಯಾಚ್ಗೆ ಡೆವೊನ್ ಕಾನ್ವೆ ಕೂಡ ನಿರ್ಗಮಿಸಿದರು.

ಈ ಹಂತದಲ್ಲಿ ವಿಲ್ ಯಂಗ್ (30; 41ಎ) ಮತ್ತು ಮಿಚೆಲ್ ಜೊತೆಗೂಡಿ 53 ರನ್ ಸೇರಿಸಿದರು. ಯಂಗ್ ವಿಕೆಟ್ ಪಡೆದ ಹರ್ಷಿತ್ ಈ ಜೊತೆಯಾಟವನ್ನೂ ಮುರಿದರು.

ಆಗ ಕ್ರೀಸ್ಗೆ ಬಂದ ಗ್ಲೆನ್ ಅವರು ಮಿಚೆಲ್ ಜೊತೆಗೂಡಿ ದೊಡ್ಡ ಜೊತೆಯಾಟವಾಡಿದರು. ಆತಿಥೇಯ ಬೌಲರ್ಗಳ ಎಲ್ಲ ಪ್ರಯತ್ನಗಳೂ ವಿಫಲವಾದವು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 50 ಓವರ್ಗಳಲ್ಲಿ 8ಕ್ಕೆ337 (ವಿಲ್ ಯಂಗ್ 30, ಡ್ಯಾರಿಲ್ ಮಿಚೆಲ್ 137, ಗ್ಲೆನ್ ಫಿಲಿಪ್ಸ್ 106, ಮೈಕೆಲ್ ಬ್ರೇಸ್ವೆಲ್ ಔಟಾಗದೇ 28, ಅರ್ಷದೀಪ್ ಸಿಂಗ್ 63ಕ್ಕೆ3, ಹರ್ಷಿತ್ ರಾಣಾ 84ಕ್ಕೆ3)

ಭಾರತ: 46 ಓವರ್ಗಳಲ್ಲಿ 296 (ಶುಭಮನ್ ಗಿಲ್ 23, ವಿರಾಟ್ ಕೊಹ್ಲಿ 124, ನಿತೀಶ್ ಕುಮಾರ್ ರೆಡ್ಡಿ 53, ಹರ್ಷಿತ್ ರಾಣಾ 52, ಝ್ಯಾಕ್ರಿ ಫೌಲ್ಕೆಸ್ 77ಕ್ಕೆ3, ಕ್ರಿಸ್ಟನ್ ಕ್ಲರ್ಕ್ 54ಕ್ಕೆ3, ಜೇಡನ್ ಲೆನಾಕ್ಸ್ 42ಕ್ಕೆ2)

ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ 41 ರನ್ಗಳ ಜಯ ಹಾಗೂ 2–1ರಿಂದ ಸರಣಿ ಗೆಲುವು.

ಪಂದ್ಯ–ಸರಣಿಯ ಆಟಗಾರ: ಡ್ಯಾರಿಲ್ ಮಿಚೆಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.