ಸೋಮವಾರ, ಜೂಲೈ 6, 2020
24 °C

ವ್ಯಾಪಾರ-ವಹಿವಾಟು ಸ್ಥಗಿತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವ್ಯಾಪಾರ-ವಹಿವಾಟು ಸ್ಥಗಿತ!

ಶಹಾಬಾದ: ಪಟ್ಟಣದ ಹಲವೆಡೆ ನಡೆದಿರುವ ಕಟ್ಟಡ ನೆಲಸಮ ಸ್ವಯಂ ಕಾರ್ಯಾಚರಣೆಯಿಂದ ಇಲ್ಲಿನ ಬಡೆಬಜಾರದ ಚಿತ್ರ ಭೂಕಂಪಕ್ಕೆ ಒಳಗಾದಂತೆ ಕಂಡುಬರುತ್ತಿದ್ದು ಒಂದು ವಾರದಿಂದ ಕುಂಠಿತವಾಗಿದ್ದ ವ್ಯಾಪಾರ- ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ವ್ಯಾಪಾರಿಗಳಿಗೆ ಮಾತ್ರವಲ್ಲ, ಸಾರ್ವಜನಿಕರಿಗೂ ತೊಂದರೆಯಾಗಿದೆ. ಲಕ್ಷಾಂತರ ರೂಪಾಯಿ ವಹಿವಾಟು ನಿಂತು ಹೋಗಿದೆ.ಬಡೆ ಬಜಾರದಲ್ಲಿ ಬಟ್ಟೆ, ಹಿತ್ತಾಳೆ, ಸ್ಟೀಲ್, ಸಿಮೆಂಟ್, ಕಿರಾಣಾ, ಬೇಕರಿ, ಪಾನ ಬೀಡಾ ಮತ್ತಿತರಪ್ರಮುಖ ಉದ್ಯಮವಾಗಿತ್ತು. ರಸ್ತೆ ವಿಸ್ತರಣೆಗೆ ಮಾ.21ರಂದು ಸರ್ಕಾರದ ನಿರ್ಣಯ ಕೈಗೊಂಡ ನಂತರ ಒಂದೊಂದೇ ಅಂಗಡಿಗಳು ಮುಚ್ಚಿ ಈಗ ಖಾಲಿಯಾಗಿದ್ದು, ಭಾಗಶಃ ಕಟ್ಟಡಗಳು ನೆಲಕಚ್ಚಿವೆ. ವ್ಯಾಪಾರಿಗಳ ಮುಖದಲ್ಲಿ ಲವಲವಿಕೆ ಇಲ್ಲ. ಪ್ರಮುಖ ಬೀದಿಯಾಗಿದ್ದ ಬಡೆ ಬಜಾರ ಇಂದು ಹಾಳು ಹಂಪೆಯಂತಾಗಿದೆ. ಮುಖ್ಯರಸ್ತೆ ಬಹುತೇಕ ಅಂಗಡಿ ಮಾಲೀಕರು ಸ್ವಯಂಪ್ರೇರಣೆಯಿಂದ ಕಟ್ಟಡ ನೆಲಸಮ ಮಾಡಿಕೊಂಡಿದ್ದು ಕೆಲವರು ತಡೆಯಾಜ್ಞೆ ಅರ್ಜಿ ಸಲ್ಲಿಸಿದ್ದ 15-20 ದಿನಗಳ ಕಾಲಾವಕಾಶ ಕೋರಿದ್ದಾರೆ ಎನ್ನಲಾಗಿದೆ.ಮುತ್ತಿಗೆ: ಜನವಸತಿ ಪ್ರದೇಶದಲ್ಲಿ 70 ಅಡಿ ರಸ್ತೆ ವಿಸ್ತರಿಸುವ ನೆಪದಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿಗೆ ತೀವ್ರ ಹಾನಿಯಾಗಲಿದ್ದು, ಶುಕ್ರವಾರ ಈ ಸಂಬಂಧ ಹಳೆ ಶಹಾಬಾದಗೆ ಭೇಟಿ ನೀಡಿದ ತಹಸೀಲ್ದಾರರನ್ನು ಜನ ತರಾಟೆಗೆ ತೆಗೆದುಕೊಂಡ ಬಗ್ಗೆ ವರದಿಯಾಗಿದೆ. ವಸತಿ ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಕಡಿತಗೊಳಿಸಬೇಕು ಎಂದು ಆಗ್ರಹಿಸಿ ಸಚಿವ ಸುರೇಶಕುಮಾರ ಬಳಿ ತೆರಳಿದ್ದ ನಿಯೋಗ ಮತ್ತೆ ಜಿಲ್ಲಾಧಿಕಾರಿಗಳ ಹೊಸ ಆದೇಶಕ್ಕೆ ಕಾಯಬೇಕಾಗಿದೆ.ಭಾನುವಾರ ಪಟ್ಟಣದಲ್ಲಿ ಸಂತೆ. ಕಟ್ಟಡ ನೆಲಸಮ ಕಾರ್ಯ ಶಹಾಬಾದಿಗರನ್ನು ಮಾತ್ರವಲ್ಲ ಸುತ್ತಲಗ್ರಾಮೀಣ ಪ್ರದೇಶದ ಜನರನ್ನೂ ಗಂಭೀರ ಸಮಸ್ಯೆಗೆ ಸಿಲುಕಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.