ಸೋಮವಾರ, ನವೆಂಬರ್ 18, 2019
23 °C

`ಸಮಾನತೆ ಸಾರಿದ ವಚನ ಸಾಹಿತ್ಯ'

Published:
Updated:

ಗುಲ್ಬರ್ಗ: ಸಮಾಜದಲ್ಲಿನ ಜಾತಿ ಪದ್ದತಿಯುನ್ನು ಹೋಗಲಾಡಿಸಿ ಎಲ್ಲರೂ ಸಮಾನರು ಎಂಬ ಭಾವನೆ ಸಾರಿದ ಕೀರ್ತಿ ವಚನ ಸಾಹಿತ್ಯಕ್ಕೆ ಸಲ್ಲುತ್ತದೆ ಎಂದು ಹಿರಿಯ ಸಾಹಿತಿ ಡಾ. ಮಾಣಿಕರಾವ ಧನಶ್ರೀ ಹೇಳಿದರು.ನಗರದ ಬಸವಚೇತನ ವಿದ್ಯಾರ್ಥಿ ಪ್ರಸಾದ ನಿಲಯದಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನ ವತಿಯಿಂದ ಲಿಂ. ಮಲ್ಲಣಗೌಡ ಪೊಲೀಸ್ ಪಾಟೀಲ ಕಲ್ಲೂರ(ಕೆ) ಸ್ಮರಣಾರ್ಥ ನ ಭಾನುವಾರ ನಡೆದ `ವಚನದಲ್ಲಿನ ಬೆಳಕು- ಸಮಾಜದಲ್ಲಿನ ಕತ್ತಲು' ಎಂಬ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವಿಶ್ವ ಸಾಹಿತ್ಯವನ್ನು ತೆಗೆದುಕೊಂಡು ನೋಡಿದರೆ ವಚನ ಸಾಹಿತ್ಯ ಬಹಳಷ್ಟ ಪ್ರಮಾಣದಲ್ಲಿ ಕೊಡುಗೆಯನ್ನು ನೀಡಿದೆ. ರಾಜರ ಕಾಲದಲ್ಲಿ ಕೇವಲ ಅರಮನೆ ಸಾಹಿತ್ಯವಾಗಿತ್ತು. ಆದರೆ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿ ಜನ ಸಾಮಾನ್ಯರ ಸಾಹಿತ್ಯವನ್ನಾಗಿ ಮಾಡಿದ್ದಾರೆ ಎಂದು ಹೇಳಿದರು. ವಚನದಲ್ಲಿರುವ ತತ್ವಗಳನ್ನು ನಾವೇಲ್ಲರು ಅಳವಡಿಸಿಕೊಳ್ಳಬೇಕು. ಮತ್ತು ಸಮಾಜದ ಸರ್ವತೋಮುಖ ಬೆಳವಣಿಗೆ ಎಲ್ಲರ ಶ್ರಮಿಸೋಣ ಎಂದರು.ಆಳಂದ ಮಕ್ಕಳ ಸಾಹಿತ್ಯ ಪರಿಷತ್ ಅದ್ಯಕ್ಷ ಅಪ್ಪಾ ಸಾಹೇಬ ತೀರ್ಥೆ ಮಾತನಾಡಿ, ನಮ್ಮಲಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೆಳೆಸುವಲ್ಲಿ ವಚನ ಸಾಹಿತ್ಯ ಸಹಾಯಕವಾಗಿದೆ. ವಚನಗಳಲ್ಲಿ ನಮ್ಮಲಿನ ಅಂದಕಾರವನ್ನು ಹೊಗಲಾಡಿಸಿ, ಬೆಳಕನ್ನು ತರುವಂತಹ ಶಕ್ತಿ ಇದೆ. ಶರಣ ಸಂಸ್ಕೃತಿಯನ್ನು ಸಾರುವ ವೀರಶೈವ ಧರ್ಮ ವಿಶ್ವ ಧರ್ಮವಾಗಿದೆ ಎಂದು ಅಭಿಪ್ರಾಯಪಟ್ಟರು.ಪ್ರಾಸ್ತವಿಕವಾಗಿ ಮಾತನಾಡಿದ ವಿಶ್ವಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ವಚನಗಳು ಹಾಗೂ ವಚನಕಾರರ ಬಗ್ಗೆ ಇಂದಿನ ಯುವಕರಿಗೆ ತಿಳಿಸುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.ಡಾ. ಬಿ.ಎಚ್. ಪುರಂತಗಿ, ಬಿ.ಎಂ ಪಾಟೀಲ ಕಲ್ಲೂರ (ಕೆ), ಮಹೇಶ ಹೊಸರಕರ್,  ಪ್ರತಿಷ್ಠಾನದ  ಸಂಚಾಲಕ ಶ್ರೀಕಾಂತಗೌಡ ತಿಳಗೊಳ ಮತ್ತಿತರರು ಇದ್ದರು. ಡಾ. ವಿಜಯಲಕ್ಷ್ಮಿ ಕೊಸಗಿ, ಸಂಗಪ್ಪ ಹಾವಪ್ಪಗೋಳ, ಹುಚ್ಚಪ್ಪ ಹಡಪದ ಬೋಧನ ಮತ್ತಿತರರನ್ನು ಸನ್ಮಾನಿಸಲಾಯಿತು.

ಪ್ರತಿಕ್ರಿಯಿಸಿ (+)