ದೀಪೋತ್ಸವ ಮೂಲಕ ಮತದಾನ ಜಾಗೃತಿ

7

ದೀಪೋತ್ಸವ ಮೂಲಕ ಮತದಾನ ಜಾಗೃತಿ

Published:
Updated:

ಗುಲ್ಬರ್ಗ: ನಗರದ ವರ್ತುಲ ರಸ್ತೆ ಬಳಿಯ ಸಾಯಿಮಂದಿರದಲ್ಲಿ ಯುಗಾದಿ ಹಬ್ಬದ ದಿನದಂದು ಗುರುವಾರ ಸಂಜೆ ಆಯೋಜಿಸಿದ ದೀಪೋತ್ಸವ ಕಾರ್ಯಕ್ರಮದಲ್ಲಿ ಮತದಾನದ ದಿನಾಂಕ 5-5-2013 ಆಕರ್ಷಕವಾಗಿ ಮೂಡಿ ಬಂದಿತು. ಸಾಯಿಬಾಬಾರ ದರ್ಶನಕ್ಕಾಗಿ ಬಂದ ನೂರಾರು ಭಕ್ತಾದಿಗಳು ಆಸಕ್ತಿಯಿಂದ ಈ ದೀಪೋತ್ಸವ ಕಾರ್ಯಕ್ರಮ ವೀಕ್ಷಿಸಿದರು.ಸ್ವೀಪ್ ಯೋಜನೆಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಅಕುರಾತಿ ಮತದಾನ ಜಾಗೃತಿಯ ಈ ದೀಪೋತ್ಸವಕ್ಕೆ ಚಾಲನೆ ನೀಡಿದರು. ಗುಲ್ಬರ್ಗ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಮತ್ತಿತರರು ಹಾಜರಿದ್ದರು. ಈ ದೀಪೋತ್ಸವ ಕಾರ್ಯಕ್ರಮಕ್ಕಾಗಿ ಒಟ್ಟು 1008 ದೀಪಗಳನ್ನು ಬಳಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry