ಸಂಭ್ರಮದ ಶ್ರೀರಾಮನವಮಿ ಆಚರಣೆ

7

ಸಂಭ್ರಮದ ಶ್ರೀರಾಮನವಮಿ ಆಚರಣೆ

Published:
Updated:

ಜೇವರ್ಗಿ: ಪಟ್ಟಣದ ವಿಜಾಪುರ ರಸ್ತೆಯಲ್ಲಿರುವ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ರಾಮನವಮಿ ಅಂಗವಾಗಿ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಬೆಳಿಗ್ಗೆ 8ಗಂಟೆಗೆ ಶ್ರೀರಾಮಾಂಜನೇಯ ದೇವಸ್ಥಾನದಲ್ಲಿ ರಾಘವೇಂದ್ರಾಚಾರ್ಯ ಕೆಂಭಾವಿ ವಿಶೇಷ ಪೂಜೆ, ಅಲಂಕಾರ ಮತ್ತು ಕ್ಷೀರಾಭಿಷೇಕ ನಡೆಸಿಕೊಟ್ಟರು. ನಂತರ ಶ್ರೀರಾಮದೇವರ ಜನನದ ಅಂಗವಾಗಿ ತೊಟ್ಟಿಲು ಸೇವೆ ನಡೆಯಿತು. ಸರ್ವೇಶ್ವರ ಸಿಂಪಿ ಹಾಗೂ ವಿಪ್ರ ಸಮಾಜದ ಮಹಿಳೆಯರಿಂದ ರಾಮನಾಮ ಭಜನೆ ಕಾರ್ಯಕ್ರಮ ನಡೆಯಿತು.ಮಧ್ಯಾಹ್ನ 1ಗಂಟೆಗೆ ಭಕ್ತಾದಿಗಳಿಗೆ ತೀರ್ಥ-ಪ್ರಸಾದ ವಿತರಿಸಲಾಯಿತು. ಶ್ರೀ ರಾಮನವಮಿ ಅಂಗವಾಗಿ ಬೆಳಿಗ್ಗೆ 6ಗಂಟೆಗೆ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದುಕೊಂಡರು.ಈ ಸಂದರ್ಭದಲ್ಲಿ ಶೇಷಾಚಾರ್ಯ ಜೋಶಿ, ವೆಂಕಟರಾವ್ ಮಳ್ಳಿ, ಗುರುರಾಜರಾವ್ ಆಲಬಾಳ, ರಾಘವೇಂದ್ರರಾವ್ ಆಲಬಾಳ, ರಾಮರಾವ್ ಜವಳಗಿ, ಶಾಮರಾವ್ ರೇವನೂರ, ದತ್ತಾತ್ರಯರಾವ್ ಕೋಳಕೂರ, ಸುದರ್ಶನ್ ಆಲಬಾಳ, ಅಪ್ಪಾರಾವ್ ಪಾಟೀಲ್ ಕೂಟನೂರ, ದತ್ತಾತ್ರಯರಾವ್ ರೇವನೂರ, ರಾಘವೇಂದ್ರ ಕುಲಕರ್ಣಿ ಮದರಿ, ಕಿಶನರಾವ್ ಹೇಮನೂರ, ವಸಂತರಾವ್ ಕುಲಕರ್ಣಿ, ಮನೋಜ ಕುಲಕರ್ಣಿ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry