ಶುಕ್ರವಾರ, ನವೆಂಬರ್ 22, 2019
20 °C

ಮೂವರು ಶಾಸಕರ ಪ್ರತಿನಿಧಿತ್ವ..!

Published:
Updated:

ಚಿತ್ತಾಪುರ: ಚಿತ್ತಾಪುರ, ಕಾಳಗಿ, ಸೇಡಂ, ಹಾಗೂ ಚಿತ್ತಾಪುರ, ಶಹಾಬಾದ ಸೇಡಂ, ಇಂದು ಚಿತ್ತಾಪುರ, ಗುಲ್ಬರ್ಗ (ಗ್ರಾ), ಚಿಂಚೋಳಿ(ಮೀ) ಮತಕ್ಷೇತ್ರಗಳಲ್ಲಿ ತಾಲ್ಲೂಕು ಹರಿದು ಹಂಚಿ ಹೋಗಿದೆ. ಮೂರು ವಿಧಾನಸಭೆ ಮತಕ್ಷೇತ್ರಗಳ ಶಾಸಕರು ಚಿತ್ತಾಪುರ ತಾಲ್ಲೂಕನ್ನು ಪ್ರತಿನಿಧಿಸುತ್ತಿದ್ದಾರೆ.ರಾಜ್ಯ ವಿಧಾನಸಭೆಗೆ 1957 ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಳೆಗೆ ಮಣೆ ಹಾಕಿದ ಮತದಾರರು ವಿಜಯಾ ರಾಘವೇಂದ್ರ ಅವರನ್ನು ಶಾಸಕಿಯಾಗಿ ಚುನಾಯಿಸಿದ್ದರು. 1962ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಜಯಾ ರಾಘವೇಂದ್ರರಾವ್ ದೇಸಾಯಿ ಅವರು ಮರು ಆಯ್ಕೆಯಾದರು. 1967 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆರ್. ನಾಗಪ್ಪ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆಗೆ ಪ್ರವೇಶ ಮಾಡಿದ್ದಾರೆ. 1972 ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ವಿಜಯಾ ರಾಘವೇಂದ್ರ ಅವರು ಆಯ್ಕೆಯಾಗಿ ಚಿತ್ತಾಪುರ ಮತಕ್ಷೇತ್ರದಿಂದ ವಿಧಾನಸಭೆಗೆ ಮೂರು ಸಲ ಪ್ರವೇಶ ಮಾಡಿದ್ದಾರೆ.1978 ರಲ್ಲಿ ನಡೆದ ಚುನಾವಣೆಯಲ್ಲಿ ಕಾಳಗಿ ಕ್ಷೇತ್ರ ರದ್ದಾಗಿತ್ತು. ಅಲ್ಲಿ ಶಾಸಕರಾಗಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಪಕ್ಷದ ಪ್ರಭಾಕರ್ ಆರ್. ತೇಲ್ಕರ್ ಅವರು ಚಿತ್ತಾಪುರದಲ್ಲಿ ಆಯ್ಕೆಯಾದರು.  ಈ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸತತವಾಗಿ 25 ವರ್ಷಗಳ ಕಾಲ ಪ್ರಾಬಲ್ಯ ಮೆರೆದು ಅಧಿಕಾರ ಪಡೆದು, ಆಡಳಿತ ನಡೆಸಿದೆ. 1983 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ಓಟಕ್ಕೆ ಜನತಾ ಪಕ್ಷ ಕಡಿವಾಣ ಹಾಕಿತು. ಆ ಚುನಾವಣೆಯಲ್ಲಿ ಜನತಾ ಪಕ್ಷದ ವಿಶ್ವನಾಥ ಪಾಟೀಲ್ ಹೆಬ್ಬಾಳ ಆಯ್ಕೆಯಾದರು.

ಪ್ರತಿಕ್ರಿಯಿಸಿ (+)