ಶುಕ್ರವಾರ, ನವೆಂಬರ್ 22, 2019
20 °C

`ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ'

Published:
Updated:

ಗುಲ್ಬರ್ಗ: ನಗರದ ಗೋದುತಾಯಿ ದೊಡ್ಡಪ್ಪ ಅಪ್ಪಾ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನಲ್ಲಿ ಬುಧವಾರ ವಿಶ್ವ ಪುಸ್ತಕ ದಿನಾಚರಣೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಮುಖ್ಯ ಅತಿಥಿಯಾಗಿದ್ದ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ಅವರು, ಡಾ. ಸೀಮಾ ಪಾಟೀಲ ಬರೆದ `ವಿಜಾಪುರದ 2ನೇ ಇಬ್ರಾಹಿಂ ಅಲಿ ಆದಿಲ್ ಶಾಹಿ ಸಂಗೀತಕ್ಕೆ ಸಲ್ಲಿಸಿದ ಕೊಡುಗೆ ಹಾಗೂ ವ್ಯಕ್ತಿತ್ವ' ಪುಸ್ತಕ ಬಿಡುಗಡೆ ಮಾಡಿದರು. ಸಂಗೀತ ವಿಷಯದ ಮಾಹಿತಿ ನೀಡುವ ಈ ಪುಸ್ತಕವನ್ನು ಎಲ್ಲರೂ ಓದುವುದು ಅವಶ್ಯವಿದೆ ಎಂದರು.ಭಾರತೀಯರು ಇತಿಹಾಸ ನಿರ್ಮಾಣ ಮಾಡುವುದರಲ್ಲಿ ಜಗತ್ತಿನಲ್ಲಿ ಮುಂದಿದ್ದಾರೆ, ಅದರ ಜೊತೆಗೆ ಇತಿಹಾಸವನ್ನು ಉಳಿಸಿಕೊಂಡು ಹೋಗುವುದು ಮುಖ್ಯವಾಗಿದೆ ಎಂದರು.ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಜಿ. ಡೊಳ್ಳೆಗೌಡ್ರ ಮಾತನಾಡಿ, ಪುಸ್ತಕಗಳು ಜ್ಞಾನದ ದೀವಿಗೆಯಾಗಿವೆ. ವಿದ್ಯಾರ್ಥಿನಿಯರು ಅನಾವಶ್ಯಕ ಹಣ ಖರ್ಚು ಮಾಡದೇ ಜ್ಞಾನಯುಕ್ತ ಪುಸ್ತಕಗಳನ್ನು ಖರೀದಿಸಿ ಅಭ್ಯಾಸ ಮಾಡಿ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾಲೇಜಿನ ಗ್ರಂಥಪಾಲಕಿ ಪ್ರೊ. ಶಶಿಕಲಾ ಪುರವಂತಗಿ ಮಾತನಾಡಿ, ಯುನೆಸ್ಕೋದವರು 1995ರಲ್ಲಿ ವಿಶ್ವ ಪುಸ್ತಕ ದಿನಾಚರಣೆಯನ್ನು ಮೊಟ್ಟ ಮೊದಲು ಆರಂಭಿಸಿದರು. ಇದರ ಮೂಲ ಉದ್ದೇಶ ಎಲ್ಲರಲ್ಲೂ ಓದುವಂತಹ ಮನೋಭಾವ ಹೆಚ್ಚಿಸುವುದಾಗಿದೆ ಎಂದು ಮಾಹಿತಿ ನೀಡಿದರು.

ಲೇಖಕಿ ಡಾ. ಸೀಮಾ ಪಾಟೀಲ್ ಪುಸ್ತಕ ಓದುವ ಅಗತ್ಯದ ಬಗ್ಗೆ ಮಾತನಾಡಿದರು. ಶ್ವೇತಾ ಗೊಬ್ಬರ ನಿರೂಪಿಸಿದರು. ಗೀತಾ ಪ್ರಾರ್ಥಿಸಿದರು, ಸಾವಿತ್ರಿ ಸ್ವಾಗತಿಸಿದರು.ಪ್ರೊ. ಶ್ರಿದೇವಿ ಹರವಾಳ ಅತಿಥಿ ಪರಿಚಯ ಮಾಡಿಕೊಟ್ಟರು. ಪ್ರೊ. ಜಾನಕಿ ಹೂಸುರ ವಂದಿಸಿದರು. ವೇದಿಕೆಯ ಮೇಲೆ ಪಂಡಿತ ಮಲ್ಲಿಕಾರ್ಜುನ ಮನ್ಸೂರರ ಮಗಳಾದ ಲಕ್ಷ್ಮೀದೇವಿ ಪಾಟೀಲ, ಪ್ರೊ. ಶಾಂತಲಾ ನಿಷ್ಠಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)