ಜಿಲ್ಲೆಗೆ ಬಂಡವಾಳದ ಮಹಾಪೂರ

7

ಜಿಲ್ಲೆಗೆ ಬಂಡವಾಳದ ಮಹಾಪೂರ

Published:
Updated:
ಜಿಲ್ಲೆಗೆ ಬಂಡವಾಳದ ಮಹಾಪೂರ

ಗುಲ್ಬರ್ಗ: ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡನಲ್ಲಿರುವ ವಾಸವದತ್ತ ಸಿಮೆಂಟ್ ಕಂಪೆನಿಯ ವಿಸ್ತರಣಾ ಘಟಕವು ಮೇ ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ.ಈ ಘಟಕದಲ್ಲಿ  ರೂ. 800 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, 425 ಜನರಿಗೆ ಉದ್ಯೋಗಾವಕಾಶ ಲಭಿಸಲಿದೆ.  ಜಿಲ್ಲೆಯ ಚಿಂಚೋಳಿಯಲ್ಲಿ ಮೇ. ಚಿಂಚೋಳಿ ಶುಗರ್ಸ್‌ ಮತ್ತು ಬಯೋ ಇಂಡಸ್ಟ್ರೀಜ್ ಲಿಮಿಟೆಡ್‌ದಿಂದ ಸೆಪ್ಟೆಂಬರ್ ಅಂತ್ಯಕ್ಕೆ ಮದ್ಯ ತಯಾರಿಕಾ ಘಟಕ (ಡಿಸ್ಟಲರಿ ಪ್ಲಾಂಟ್) ಹಾಗೂ ನವೆಂಬರ್ ಅಂತ್ಯಕ್ಕೆ ಸಕ್ಕರೆ ಉತ್ಪಾದನಾ ಕೈಗಾರಿಕಾ ಘಟಕ ಕಾರ್ಯಾರಂಭ ಮಾಡಲಿದೆ.ಈ ವಿಷಯವನ್ನು ಮಂಗಳವಾರ ಗುಲ್ಬರ್ಗದಲ್ಲಿ  ಜರುಗಿದ ಜಿಲ್ಲೆಯ ಕೈಗಾರಿಕಾ ಯೋಜನೆಗಳ ಅನುಷ್ಠಾನದ ವಿವಿಧ ಹಂತಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೈಗಾರಿಕಾ ಸಂಸ್ಥೆಗಳ ಅಧಿಕಾರಿಗಳು ತಿಳಿಸಿದರು.  ಇದಲ್ಲದೇ ಗ್ರಾಸೀಮ್ ಇಂಡಸ್ಟ್ರೀಸ್ ಸಮೂಹದ ರಾಜಶ್ರೀ ಸಿಮೆಂಟ್ಸ್ ಘಟಕ ಅನುಷ್ಠಾನದ ಹಂತದಲ್ಲಿದ್ದು, ಈ ಯೋಜನೆಯಡಿ ಸುಮಾರು ಮೂರು ಸಾವಿರ ಕೋಟಿ ರೂಪಾಯಿ ಬಂಡವಾಳ ಹರಿದುಬರಲಿದೆ. 400 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ವಿವರಿಸಿದರು.ಸಾರ್ವಜನಿಕ ಅಹವಾಲುಗಳ ಸಭೆ ನಡೆಸಿದ್ದು, 998 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಈ ಪೈಕಿ 700 ಎಕರೆ ಭೂಮಿ ನೋಂದಣಿ ಮಾಡಲಾಗಿದೆ. ಕಾರ್ಖಾನೆಯ ಯಂತ್ರಗಳಿಗೆ ಆದೇಶ ನೀಡಲಾಗಿದೆ. ಶ್ರೀ ಸಿಮೆಂಟ್ ಲಿಮಿಟೆಡ್‌ದಲ್ಲಿ 1000 ಕೋಟಿ ರೂಪಾಯಿ ಬಂಡವಾಳ ಹರಿದು ಬಂದು 500 ಜನರಿಗೆ ಉದ್ಯೋಗಾವಕಾಶ ಸಿಗಲಿದೆ. ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ ಯೋಜನೆಯಡಿ ರೂ. 850 ಕೋಟಿ  ಹರಿದು ಬಂದು 175 ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.ಲಾಪ್ರೇಜ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ದಿಂದ 355 ಜನರಿಗೆ ಉದ್ಯೋಗ ಸಿಗಲಿದ್ದು, ರೂ. 1500 ಕೋಟಿ ಬಂಡವಾಳ ಹೂಡಿಕೆಯಾಗಲಿದೆ. ಜೆಮ್ ಸಿಮೆಂಟ್ಸ್ ಪ್ರೈವೇಟ್ ಲಿಮಿಟೆಡ್‌ದಿಂದ 145 ಜನರಿಗೆ ಉದ್ಯೋಗ ಸಿಗಲಿದ್ದು, ರೂ. 347.24 ಕೋಟಿ ಬಂಡವಾಳ ಹೂಡಿಕೆಯಾಗಲಿದೆ. ಈ ಘಟಕಗಳಿಗಾಗಿ ಭೂಮಿ ಖರೀದಿ, ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದೆ.

 

ವಿಕಾಟ್‌ಸಾಗರ ಸಿಮೆಂಟ್ಸ್ ಪ್ರೈವೇಟ್ ಲಿಮಿಟೆಡ್‌ದಲ್ಲಿ ರೂ. 788 ಕೋಟಿ ಬಂಡವಾಳ ಮತ್ತು 165 ಜನರಿಗೆ ಉದ್ಯೋಗಾವಕಾಶ ಮತ್ತು ಸೇವಾಲಾಲ್ ದಾಲ್ ಇಂಡಸ್ಟ್ರೀಜ್‌ದಲ್ಲಿ ರೂ.75 ಕೋಟಿ  ಬಂಡವಾಳ ಮತ್ತು 20 ಜನರಿಗೆ ಉದ್ಯೋಗಾವಕಾಶ ಸಿಗಲಿದ್ದು, ಕಟ್ಟಡಗಳ ನಿರ್ಮಾಣಕಾರ್ಯ ಪ್ರಗತಿಯಲ್ಲಿದೆ. ಜಾವರ್ ಸಿಮೆಂಟ್ಸ್ ಪ್ರೈವೇಟ್ ಲಿಮಿಟೆಡ್‌ದಿಂದ ರೂ. 3000 ಕೋಟಿ  ಬಂಡವಾಳ ಹೂಡಿಕೆಯ ಮತ್ತು 4050 ಜನರಿಗೆ ಉದ್ಯೋಗಾವಕಾಶ ಮತ್ತು ರೂ. 180 ಕೋಟಿ  ಬಂಡವಾಳ ಹೂಡಿಕೆಯ ಮತ್ತು 570 ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಎರಡು ಘಟಕಗಳಿಗೆ ಯಂತ್ರೋಪಕರಣ ಖರೀದಿಸುವ ಕಾರ್ಯ ಪ್ರಗತಿಯಲ್ಲಿದೆ.ಜಿಲ್ಲೆಯ  ಕೈಗಾರಿಕಾ ಬೆಳವಣಿಗೆಗಾಗಿ ಆಳಂದ ರಸ್ತೆಗೆ ಹೊಂದಿಕೊಂಡ 2,400 ಎಕರೆ ಭೂಮಿ ಸೇರಿದಂತೆ ಒಟ್ಟು 4,439 ಎಕರೆ ಭೂಮಿಯನ್ನು ಗುರುತಿಸಿದ್ದು, ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಜಿಲೆಯ್ಲು 3 ಕೈಗಾರಿಕಾ ಮತ್ತು 8 ಕೈಗಾರಿಕಾ ವಸಾಹತುಗಳನ್ನು ಹೊಂದಿದ್ದು, ನಂದೂರು-ಕೆಸರಟಗಿ ಕೈಗಾರಿಕಾ ಪ್ರದೇಶದಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು 50 ಎಕರೆ ಜಮೀನು ನಿಗದಿಪಡಿಸಲಾಗಿದೆ. ಜೇವರ್ಗಿ ತಾಲೂಕಿನಲ್ಲಿ ಆಹಾರ ಪಾರ್ಕ್ ಸ್ಥಾಪಿಸಲು 105 ಎಕರೆ ಜಮೀನು ನಿಗದಿಪಡಿಸಲಾಗಿದೆ. ಜಿಲೆಯ್ಲ ಹೊನ್ನಕಿರಣಗಿ ಗ್ರಾಮದ ಬಳಿ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಘಟಕ ಸ್ಥಾಪಿಸಲು ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ.ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್. ಜಿಲ್ಲೆಯಲ್ಲಿ ವಿವಿಧ ಕೈಗಾರಿಕಾ ಘಟಕಗಳ ಸ್ಥಾಪನೆಗಾಗಿ ಬಾಕಿ ಇರುವ ವಿವಿಧ ಹಂತದ ಪ್ರಸ್ತಾವನೆಗಳ ಪ್ರಗತಿ ಪರಿಶೀಲಿಸಿ, ಕೈಗಾರಿಕಾ ಘಟಕಗಳ ಸ್ಥಾಪನೆಯ ಪ್ರಸ್ತಾವನೆ ಮಂಜೂರಾತಿಗಾಗಿ ನೇರವಾಗಿ ಸಂಬಂಧಿಸಿದ ಇಲಾಖೆಗಳೊಂದಿಗೆ ಸಂಪರ್ಕ ಸಾಧಿಸಿ ಆದಷ್ಟು ಬೇಗ ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ  ಕೈಗಾರಿಕೋದ್ಯಮಿಗಳಿಗೆ ತಿಳಿಸಿದರು.  ತಮ್ಮ ಹಂತದಲಿರ್ಲುವ ಯಾವುದೇ ಪ್ರಸ್ತಾವನೆಗೆ ಶೀಘ್ರದಲಿಯ್ಲಾ ಮಂಜೂರಾತಿ ನೀಡಲು ಕ್ರಮ ಜರುಗಿಸಲಾಗುವುದು. ಹೊಸದಾಗಿ ಆರಂಭಿಸಲು ಮುಂದೆ ಬಂದಿರುವ  ವಿವಿಧ ಕೈಗಾರಿಕಾ ಘಟಕಗಳ ಸಂಸ್ಥೆಯವರು ಈ ಭಾಗದ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಅವರು ಹೇಳಿದರು.ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ನಂತರ ಪುನಃ ಜಿಲ್ಲೆಯಲ್ಲಿ 7095.56 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯ ಮತ್ತು 2,264 ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಇನ್ನೂ 9 ಕೈಗಾರಿಕಾ ಘಟಕಗಳು ಮಂಜೂರಾಗಿವೆ.  ಇವುಗಳಿಗೆ ಭೂ ಸ್ವಾಧೀನ ಪಡಿಸಿಕೊಳ್ಳುವ, ರೈತರ ಮತ್ತು ಸಾರ್ವಜನಿಕರ ಅಹವಾಲು ಸಭೆಗಳನ್ನು ನಡೆಸುವ ಮತ್ತಿತರ ಎಲ್ಲ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ ಎಂದು ಹೈದರಾಬಾದ ಕರ್ನಾಟಕ  ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹೇಳಿದರು.ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಮರನಾಥ ಪಾಟೀಲ್, ಕೈಗಾರಿಕೊದ್ಯಮಿ ಡಾ. ಎಸ್.ಎಸ್. ಪಾಟೀಲ, ಕರ್ನಾಟಕ ಉದ್ಯೋಗ ಮಿತ್ರ ಯೋಜನೆಯ ಜಂಟಿ ನಿರ್ದೇಶಕರಾದ ಸ್ವರೂಪ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ವಿವಿಧ ಕೈಗಾರಿಕೋದ್ಯಮಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry