ಶನಿವಾರ, ಮೇ 15, 2021
22 °C

ಶೌಚಾಲಯ ನಿರ್ಮಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದ ವಿವಿಧ ಕೊಳಚೆ ಪ್ರದೇಶಗಳಲ್ಲಿ ಮಹಿಳಾ ಶೌಚಾಲಯ ನಿರ್ಮಿಸುವಂತೆ ಆಗ್ರಹಿಸಿ ಸಾವಿತ್ರಿಬಾಯಿ ಫುಲೆ ಮಹಿಳಾ ಸ್ಲಂ ವೇದಿಕೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.ಬುದ್ಧನಗರ, ಶಿವಶಕ್ತಿ, ಅರಳಿಗಿಡ ಬಸವಣ್ಣನಗರ, ಸಿದ್ಧಾರೂಢ ನಗರ, ಪಂಚಶೀಲ ನಗರ, ಲಂಗಾರ ಹನುಮಾನ ನಗರ, ತಾರಫೈಲ್, ಇಂದಿರಾ ನಗರ ಮೊದಲಾದ ಕೊಳಚೆ ಪ್ರದೇಶಗಳಲ್ಲಿ ಮಹಿಳಾ ಶೌಚಾಲಯ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಮಹಿಳೆಯರು ಶೌಚಾಲಯಕ್ಕಾಗಿ ಪರದಾಡುತ್ತಿದ್ದಾರೆ. ಬಡವರಿಗೆ ಮಹಾನಗರ ಪಾಲಿಕೆ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಕೋರಿದರು.ಬಾಬುರಾವ ದಂಡಿನಕರ್, ರೇಣುಕಾ ಸರಡಗಿ, ಬಸವರಾಜ ಪೂಜಾರಿ, ಶಿವಕುಮಾರ ದೊಡ್ಮನಿ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.