ಶುಕ್ರವಾರ, ಮೇ 14, 2021
27 °C

ತೊಗರಿ ಆಮದಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬರ್ಮಾ, ಕೀನ್ಯಾ ಮುಂತಾದ ದೇಶಗಳಿಂದ ಆಮದು ಶುಲ್ಕವಿಲ್ಲದೆ ಲಕ್ಷಾಂತರ ಟನ್ ತೊಗರಿ ಬೇಳೆ ಆಮದು ಮಾಡಿಕೊಳ್ಳುತ್ತಿರುವುದು ತೊಗರಿ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರ ಇಂತಹ ರೈತ ವಿರೋಧಿ ನೀತಿಯನ್ನು ಕೈಬಿಟ್ಟು, ಶೇ 20ಕ್ಕೂ ಹೆಚ್ಚು ಆಮದು ಶುಲ್ಕ ವಿಧಿಸಿ ಅಗತ್ಯವಿರುವಷ್ಟು ಮಾತ್ರವೇ ತೊಗರಿ ಬೇಳೆ ಆಮದು ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ಆಗ್ರಹಿಸಿದರು.ಕರ್ನಾಟಕ ಪ್ರಾಂತ ರೈತ ಸಂಘ ಗುಲ್ಬರ್ಗ ತಾಲ್ಲೂಕು ಸಮಿತಿ ವತಿಯಿಂದ ಸೋಮವಾರ ನಗರದ ಜಿಲ್ಲಾ ಬಾಲ ಭವನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಮಟ್ಟದ 7ನೇ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ತೊಗರಿ ಬಿತ್ತನೆ ಪೂರ್ವದಲ್ಲಿಯೇ ಕೇಂದ್ರ ಸರ್ಕಾರ ಉತ್ಪಾದನಾ ವೆಚ್ಚ ಮತ್ತು ಶೇ 50 ಲಾಭಾಂಶ ಸೇರಿದಂತೆ ಡಾ.ಸ್ವಾಮಿನಾಥನ್ ಕೃಷಿ ಆಯೋಗದ ಸಲಹೆಯಂತೆ ಬೆಂಬಲ ಬೆಲೆ ಪ್ರಕಟಿಸುತ್ತಿಲ್ಲ ಎಂದರು.

ಮೈಬೂಬ ಶಾಹ ಕುರಿಕೋಟಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಗೌರಮ್ಮ ಪಾಟೀಲ, ಮಾತನಾಡಿದರು. ರಾಮಣ್ಣ ಮುಗಳಿ, ಎಚ್.ಕೆ.ರವಿಕುಮಾರ ಫರಹತಾಬಾದ, ಧರ್ಮರಾವ ಶಹಾಬಾದಿ, ಅಶೋಕ ಪಾಸೋಡಿ, ಗಂಗಮ್ಮ ಬಿರಾದಾರ, ಶಾಂತ ಘಂಟಿ ಮತ್ತಿತರರು ಪಾಲ್ಗೊಂಡಿದ್ದರು.ಸಕಾಲದಲ್ಲಿ ರೈತರಿಗೆ ಸಬ್ಸಿಡಿ ದರದಲ್ಲಿ ಬೀಜ-ಗೊಬ್ಬರ ವಿತರಿಸುವುದು, ಪ್ರತಿ ಕ್ವಿಂಟಲ್ ತೊಗರಿಗೆ ರೂ. 5,000 ಬೆಂಬಲ ಬೆಲೆ ನಿಗದಿ ಪಡಿಸಿ ಖರೀದಿಸುವುದು, ಪ್ರತಿಯೊಂದು ಅರ್ಹ ಕುಟುಂಬಕ್ಕೂ ಪಡಿತರ ಚೀಟಿ ವಿತರಿಸುವ ನಿರ್ಣಯಗಳನ್ನು ಸಮ್ಮೇಳನದಲ್ಲಿ ಅಂಗೀಕರಿಸಲಾಯಿತು. ಸಮ್ಮೇಳನದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಪದಾಧಿಕಾರಿಗಳು: ರಾಚಣ್ಣಾ ಆರ್. ಪಾಟೀಲ (ಅಧ್ಯಕ್ಷ), ಶರ್ಮಾ ಶಿವಕುಮಾರ ಫರಹತಾಬಾದ (ಪ್ರಧಾನ ಕಾರ್ಯದರ್ಶಿ), ಮೈಬೂಬ ಶಾಹ ಕುರಿಕೋಟಾ (ಖಜಾಂಚಿ), ಸಿದ್ರಾಮಪ್ಪ ಗೊಬ್ಬೂರ, ರೇವಣಸಿದ್ದಪ್ಪ ಪೊಲೀಸ್ ಪಾಟೀಲ (ಉಪಾಧ್ಯಕ್ಷರು), ಅಶೋಕ ಪಾಸೋಡಿ, ಜಯಶ್ರೀ ಗೌರೆ (ಸಹ ಕಾರ್ಯದರ್ಶಿ), ಧರ್ಮರಾವ ಶಹಾಬಾದಿ, ತಮ್ಮಣ್ಣ ಪೂಜಾರಿ, ಎಚ್.ಕೆ. ರವಿಕುಮಾರ, ರಾಮಣ್ಣ ಮುಗಳಿ, ರಾಜೇಂದ್ರ ರಾಜೋಳಕರ, ಮಹಾದೇವಿ, ಜಯಶ್ರೀ, ಚಂದ್ರಶೆಟ್ಟಿ ಪಾಟೀಲ, ಆನಂದ ಕಲ್ಲಹಂಗರಗಾ, ಬಾಬು ಜಮಾದಾರ, ಚನ್ನಬಸಪ್ಪ ಪಾಟೀಲ, ಪ್ರಕಾಶ ಪಾಟೀಲ (ಕಾರ್ಯಕಾರಿ ಮಂಡಳಿ ಸದಸ್ಯರು).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.