ಸೋಮವಾರ, ಆಗಸ್ಟ್ 19, 2019
28 °C

ಪಾಲಿಕೆ ಜಾಗ: ಪುಕ್ಕಟ್ಟೆ ಪ್ರಚಾರ ಯೋಗ!

Published:
Updated:

ಗುಲ್ಬರ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ ಜಾಗವನ್ನು ರಾಜಕೀಯ ಪಕ್ಷಗಳು ಪುಕ್ಕಟ್ಟೆ ಪ್ರಚಾರದ ವೇದಿಕೆ ಮಾಡಿಕೊಂಡಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ.ಬಹಿರಂಗ ಜಾಹೀರಾತು ಫಲಕ ಅಥವಾ ಫ್ಲೆಕ್ಸ್ ಅಳವಡಿಸುವ ಪೂರ್ವದಲ್ಲಿ ಯಾವುದೇ ಸಂಘ-ಸಂಸ್ಥೆ ಹಾಗೂ ರಾಜಕೀಯ ಪಕ್ಷಗಳು ಪಾಲಿಕೆ ಅನುಮತಿ ಪಡೆದುಕೊಳ್ಳಬೇಕು. ನಿಗದಿತ ಶುಲ್ಕವನ್ನು ಭರಿಸಬೇಕಾಗುತ್ತದೆ. ಯಾವುದೇ ಅನುಮತಿ ಪಡೆಯದೇ ಆಡಳಿತಾರೂಢ ಪಕ್ಷದ ಫ್ಲೆಕ್ಸ್‌ಗಳು ತಿಂಗಳಾನುಗಟ್ಟಲೆ ನಗರದ ರಸ್ತೆಗಳಲ್ಲಿ ಬೇಕಾಬಿಟ್ಟಿ ರಾರಾಜಿಸುತ್ತಿವೆ. ಇದರಿಂದ ಪಾಲಿಕೆಗೆ ಬರಬೇಕಿದ್ದ ಆದಾಯಕ್ಕೆ ಹೊಡೆತ ಬಿದ್ದಿದೆ.ಖಾಸಗಿ ಕಂಪೆನಿಯೊಂದು ಜಗತ್ ವೃತ್ತ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಹುಮಾನಾಬಾದ್ ರಿಂಗ್‌ರೋಡ್ ವೃತ್ತ, ಚೌಕ್ ಪೊಲೀಸ್ ಠಾಣೆ ವೃತ್ತ ಹಾಗೂ ಜೇವರ್ಗಿ ಕ್ರಾಸ್ ರಾಷ್ಟ್ರಪತಿ ಚೌಕ್ ವೃತ್ತಗಳಲ್ಲಿ ಜಾಹೀರಾತು ಕಮಾನುಗಳನ್ನು ನಿರ್ಮಿಸಿದೆ.ಇದಕ್ಕಾಗಿ ಪಾಲಿಕೆಯೊಂದಿಗೆ ಕಂಪೆನಿ ಒಪ್ಪಂದ ಮಾಡಿಕೊಂಡಿದೆ. ಜಾಹೀರಾತು ಅಳವಡಿಸುವುದಕ್ಕೆ ಪಾಲಿಕೆಯಿಂದ ಕಂಪೆನಿಗೆ ಇನ್ನು ಅನುಮತಿ ಸಿಕ್ಕಿಲ್ಲ. ಆದರೆ ಕಮಾನುಗಳನ್ನು ಪುಕ್ಕಟ್ಟೆ ಪ್ರಚಾರಕ್ಕೆ ಬಳಸಿಕೊಳ್ಳುವಲ್ಲಿ ರಾಜಕೀಯ ಪಕ್ಷ ಯಶಸ್ವಿಯಾಗಿದೆ.ಸರ್ಕಾರಿ ಜಾಗ ಹಾಗೂ ಖಾಸಗಿ ಜಾಗಕ್ಕೆ ಬೇರೆಬೇರೆ ರೀತಿಯ ತೆರಿಗೆ ಇದೆ. ಮಹಾನಗರ ಪಾಲಿಕೆಯು ಜಾಹೀರಾತು ಆದಾಯದತ್ತ ಗಂಭೀರ ಚಿಂತನೆ ನಡೆಸದ ಕಾರಣ, ಸಾಕಷ್ಟು ಆದಾಯ ಸೋರಿ ಹೋಗುತ್ತಿದೆ. ಈಚೆಗೆ ಮಹಾನಗರವಾಗಿ ಬೆಳೆದಿರುವ ಗುಲ್ಬರ್ಗದಲ್ಲಿ `ಬಹಿರಂಗ ಜಾಹೀರಾತು ಫಲಕ' (ಔಟ್‌ಡೋರ್ ಆ್ಯಡ್)ಗಳು ಸಾಕಷ್ಟು ಪ್ರಮಾಣದಲ್ಲಿ ತಲೆ ಎತ್ತುತ್ತಿವೆ.ಮಹಾನಗರ ಪಾಲಿಕೆಯು ಇವುಗಳ ಮೇಲೆ ಹಿಡಿತ ಸಾಧಿಸದ ಕಾರಣ  ಮುಖ್ಯವಾಗಿ ಆಡಳಿತ ನಡೆಸುವ ಪಕ್ಷಗಳು ಪುಕ್ಕಟ್ಟೆ ಪ್ರಚಾರಕ್ಕಾಗಿ ಸಾಕಷ್ಟು ಫ್ಲೆಕ್ಸ್ ಅಳವಡಿಸಿ ನಗರದ ಸೌಂದರ್ಯವನ್ನು ಹಾಳು ಮಾಡುತ್ತಿವೆ.

Post Comments (+)