ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕಾಯೋ ಕೆಲಸ!

ಎಲೆಕ್ಷನ್ ಆದ್ಮೇಲೆ ಯಾವ ಯಾವ ಮುಖಂಡರು ಏನೇನು ಮಾಡ್ತಿದಾರೆ ಅಂತ ಪರ್ಮೇಶಿ ಮಾಡಿದ ಸಾಕ್ಷಾತ್ ಸಮೀಕ್ಷೆಯ ವರದಿ ಹೀಗಿದೆ:
Published 2 ಮೇ 2024, 23:18 IST
Last Updated 2 ಮೇ 2024, 23:18 IST
ಅಕ್ಷರ ಗಾತ್ರ

ಎಲೆಕ್ಷನ್ ಆದ್ಮೇಲೆ ಯಾವ ಯಾವ ಮುಖಂಡರು ಏನೇನು ಮಾಡ್ತಿದಾರೆ ಅಂತ ಪರ್ಮೇಶಿ ಮಾಡಿದ ಸಾಕ್ಷಾತ್ ಸಮೀಕ್ಷೆಯ ವರದಿ ಹೀಗಿದೆ:

ತೆನೆಯಣ್ಣ: ಸಿಇಟಿ ರಿಸಲ್ಟೇ 15 ದಿನಕ್ಕೆ ಬರುತ್ತೆ, ಅಂತಾದ್ರಲ್ಲಿ ಎಲೆಕ್ಷನ್ ರಿಸಲ್ಟ್ ಇಷ್ಟು ಲೇಟಾದ್ರೆ ಹೇಗೆ? ಈ ಒಂದು ತಿಂಗಳಲ್ಲಿ ‘ಕಣ್ಣೀರ್ ಕಣ್ಣೀರ್’ ಡಾಕ್ಯುಮೆಂಟರೀನ ಸಹಾರಾ ಡೆಸರ್ಟ್‌ನಲ್ಲಿ ಶೂಟ್ ಮಾಡ್ಬೇಕು ಅಂತ ಪ್ಲಾನಿದೆ.

ಮುದ್ದೇಗೌಡರು: ಕಮಲ ನಯನ ಕಮಲ ವದನ ಹಾಡು ಹಾಕ್ಕಂಡ್ರೂ ನಿದ್ದೆ ಬರ್ತಿಲ್ಲ. ಮಗರಾಮನ್ನ ಸೆಂಟರ್ ಸಾಂದರ್ಭಿಕ ಶಿಶು ಮಾಡ್ಬಿಟ್ರೆ ನನ್ನ ಎಲ್ಲಾ ಜವಾಬ್ದಾರಿ ಮುಗಿದ ಹಾಗೆ.

ಮುದ್ದರಾಮಯ್ಯ: ಹಾಳಾದ್ದು ಚೊಂಬು ಚೊಂಬು ಅಂದು ನಿದ್ದೇಲೂ ಅದನ್ನೇ ಹೇಳ್ಕೊಳೋ ಹಾಗಾಗಿದೆ. ಯಾರೋ ಮೊನ್ನೆ ಕಮಲದೋರ್ದು ಗ್ಯಾರಂಟಿ ಚೊಂಬು ಅಂದ್ರು. ಯಾಕೋ ಅವಾಗಿಂದ ಚೊಂಬು ಅಂದಿದ್ದೇ ಎಡವಟ್ಟಾಯ್ತು ಅನ್ಸಕ್ಕೆ ಶುರುವಾಗಿದೆ.

ನಾರೀಶ್ವರಪ್ಪ: ಗೆದ್ರೆ ನಮೋಗೆ ಸಪೋರ್ಟು, ಸೋತ್ರೆ ಗೆಟ್‌ಔಟು! ಅದಕ್ಕೆ ನಾನೇ ಕಾಶಿ ಕಡೆ ಹೋಗಿ ರಾಜಕೀಯನೇ ಬಿಟ್ ಬಂದ್‌ಬಿಡೋಣ ಅಂದ್ಕೊಂಡಿದೀನಿ.

ಕೇಶೀ ಕುಮಾರ್: ಹೇಗಿದ್ರೂ ಮೇಡಂ ಕಾರಣ ಕೇಳಿ ನೋಟಿಸು ಕೊಡ್ತಾರೆ. ಅದು ಮಾಮೂಲಿ! ಅದಕ್ಕೆ ಈಗ್ಲೇ ಒಂದು ಡೀಟೈಲ್ಡ್ ರಿಪೋರ್ಟ್ ರೆಡಿ ಮಾಡ್ತಿದೀನಿ. ಯಾರ್‍ಯಾರ ನಾಲಿಗೆಯಿಂದ ಎಷ್ಟು ವೋಟು ಹಾಳಾಗೋಯ್ತು ಅನ್ನೋದಕ್ಕೆ ಎವಿಡೆನ್ಸ್ ಕಲೆಕ್ಟ್ ಮಾಡ್ತಿದೀನಿ.

ಜಯೇಂದ್ರ: ಮೋದಿ ಮಾಮ ಬಂದ್ರೂ ನಮ್ಮೋರೇ ನಮ್ಗೆ ಗುನ್ನ ಹಾಕಿರೋದ್ರಿಂದ ಎತ್ತು ಏರಿಗೆಳೀತು, ಕ್ವಾಣ ನೀರಿಗೆಳೀತು ಅಂದಂಗಾಯ್ತು. ಆದರೂ ಕಮಲ ಮೇನೆಗೆ ತೆನೆ ಸಿಗಿಸ್ಕೊಂಡು ರಥೋತ್ಸವ ಮಾಡಿ ಉಸ್ಸಂತ ನಿಟ್ಟುಸಿರುಬಿಟ್ಟಿದೀವಿ.

ಮತದಾರ: ಸ್ವಾಮಿ! ಯಾವನು ಗೆದ್ರೇನು, ಯಾವನು ಸೋತ್ರೇನು? ಸದ್ಯಕ್ಕೆ ಯಾವ ಎಲೆಕ್ಷನ್ನೂ ಇಲ್ಲ. ಇಂಗಾದ್ರೆ ನಮ್ ಗತಿ ಏನ್ ಹೇಳಿ? ಅವ್ರು ಒಂದು ತಿಂಗ್ಳು ಕಾಯೋದು ಬಿಡಿ, ನಾವಿನ್ನೂ ನಾಕು ವರ್ಷ ಕಾಯ್ಬೇಕಲ್ಲ ಸ್ವಾಮಿ ಅದನ್ನ ಹೇಳಿ?  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT