ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 19ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಡಿ.16ರಂದು ಅಬುಧಾಬಿಯಲ್ಲಿ ಜರುಗಲಿದೆ.

ಐಪಿಎಲ್ ಮಿನಿ ಹರಾಜು ಮಂಗಳವಾರ (ಡಿ.16) ಮಧ್ಯಾಹ್ನ 2.30ಕ್ಕೆ ಆರಂಭಗೊಳ್ಳಲಿದೆ. ಇದರ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಅಥವಾ ಜಿಯೋ ಹಾಟ್ಸ್ಟಾರ್ ಒಟಿಟಿ ಮತ್ತು ವೆಬ್ಸೈಟ್ನಲ್ಲಿ ವೀಕ್ಷಿಸಬಹುದಾಗಿದೆ.
.IPL Auction|ಮ್ಯಾನೇಜರ್ ತಪ್ಪಿನಿಂದಾಗಿ ಬ್ಯಾಟರ್ ಆಗಿದ್ದೇನೆ: ಕ್ಯಾಮರೂನ್ ಗ್ರೀನ್.
ಹರಾಜು ಪ್ರಕ್ರಿಯೆಯಲ್ಲಿ 240 ಭಾರತೀಯರು ಹಾಗೂ 110 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 359 ಆಟಗಾರರ ಹೆಸರಿದೆ.

ಹತ್ತು ತಂಡಗಳಲ್ಲಿ 77 ಸ್ಥಾನಗಳು ಖಾಲಿಯಿದ್ದು, 31 ವಿದೇಶಿ ಆಟಗಾರರನ್ನು ಕೊಂಡುಕೊಳ್ಳಬಹುದಾಗಿದೆ.

₹2 ಕೋಟಿ ಮೂಲಬೆಲೆಯಲ್ಲಿ 40 ಆಟಗಾರರಿದ್ದು, ಅವರ ಮೇಲೆ ಫ್ರಾಂಚೈಸಿಗಳ ಕಣ್ಣು ನೆಟ್ಟಿದೆ. ಭಾರತದ ವೆಂಕಟೇಶ್ ಐಯ್ಯರ್ ಹಾಗೂ ರವಿ ಬಿಷ್ಣೋಯಿ ಈ ಪಟ್ಟಿಯಲ್ಲಿದ್ದಾರೆ.

ಆಸ್ಟ್ರೇಲಿಯಾದ ಕ್ಯಾಮಾರೂನ್ ಗ್ರೀನ್ ಹಾಗೂ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಅವರು ಹರಾಜಿನಲ್ಲಿ ಹೆಚ್ಚಿನ ಮೊತ್ತ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
.IPL 2026: ಐಪಿಎಲ್ ಹರಾಜಿನಿಂದಲೇ ಹೊರಗುಳಿದ ಆರ್ಸಿಬಿ ಮಾಜಿ ಆಟಗಾರ.IPL Auction| 350 ಆಟಗಾರರ ಅಂತಿಮ ಪಟ್ಟಿ: ₹2 ಕೋಟಿ ಮೂಲ ಬೆಲೆಯ ಆಟಗಾರರು ಇವರೇ.IPL Auction 2026: ಅನುಮಾನಾಸ್ಪದ ಬೌಲಿಂಗ್; ಸಂಕಷ್ಟದಲ್ಲಿ ಭಾರತೀಯ ಆಲ್ರೌಂಡರ್.IPL 2026 Auction:ಹರಾಜಿನಲ್ಲಿ ಕೋಟಿ ಗಿಟ್ಟಿಸಿಕೊಳ್ಳಬಹುದಾದ ಪ್ರಮುಖ ಆಟಗಾರರಿವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.