ಮುಂಬೈ: ಅಬುಧಾಬಿಯಲ್ಲಿ ಡಿಸೆಂಬರ್ 16ರಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2026ನೇ ಆವೃತ್ತಿಯ ಹರಾಜಿನಲ್ಲಿ 240 ಭಾರತೀಯರು ಮತ್ತು 110 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 350 ಆಟಗಾರರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದರಲ್ಲಿ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಕೊನೇ ಕ್ಷಣದಲ್ಲಿ ಸ್ಥಾನ ಪಡೆದಿದ್ದಾರೆ.

ಡಿ ಕಾಕ್ ಈ ಪಟ್ಟಿಗೆ ತಡವಾಗಿ ಸೇರ್ಪಡೆಯಾಗಿದ್ದು, ಅವರು ₹1 ಕೋಟಿ ಮೂಲ ಬೆಲೆ ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಬ್ಯಾಟರ್ ಸ್ಟೀವ್ ಸ್ಮಿತ್ ₹2 ಕೋಟಿ ಮೂಲ ಬೆಲೆಯೊಂದಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಸ್ಮಿತ್ 2021ರಲ್ಲಿ ಕೊನೆಯದಾಗಿ ಐಪಿಎಲ್ನಲ್ಲಿ ಭಾಗವಹಿಸಿದ್ದರು.

ವಿಶ್ವದ ಅತೀ ದೊಡ್ಡ ಲೀಗ್ನಲ್ಲಿ ಭಾಗಿಯಾಗಲು ಒಟ್ಟು 1,390 ಆಟಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ, ಇದು ಮಿನಿ ಹರಾಜು ಆಗಿರುವುದರಿಂದ 10 ತಂಡಗಳಿಗೆ ಅಗತ್ಯವಿರುವ 77 ಆಟಗಾರರನ್ನು ಮಾತ್ರ ತಂಡಗಳು ಖರೀದಿಸಲಿವೆ. ಈ ಹಿನ್ನೆಲೆಯಲ್ಲಿ 350 ಆಟಗಾರರನ್ನು ಹರಾಜಿಗೆ ಅಂತಿಮಗೊಳಿಸಲಾಗಿದೆ.
.IPL 2026: ಐಪಿಎಲ್ ಮುಂದಿನ ಆವೃತಿಗೆ ತನ್ನ ನಾಯಕನನ್ನು ಘೋಷಿಸಿದ ಎಸ್ಆರ್ಎಚ್.IPL Trade 2026: ಸಂಜು–ಜಡೇಜ ಸೇರಿ ಐಪಿಎಲ್ ಇತಿಹಾಸದ ಅತೀ ದೊಡ್ಡ ವಿನಿಮಯಗಳಿವು.
ಹರಾಜಿನ ಮೊದಲ ಗುಂಪಿನ ಆಟಗಾರರಲ್ಲಿ ಪೃಥ್ವಿ ಶಾ ಮತ್ತು ಸರ್ಫರಾಜ್ ಖಾನ್ ಇದ್ದು, ಇಬ್ಬರೂ ತಲಾ ₹75 ಲಕ್ಷ ಮೂಲ ಬೆಲೆ ಹೊಂದಿದ್ದಾರೆ.

ಐಪಿಎಲ್ ಹಂಚಿಕೊಂಡಿರುವ ಪಟ್ಟಿಯ ಪ್ರಕಾರ, ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಮತ್ತು ಜೇಕ್ ಫ್ರೇಸರ್-ಮೆಕ್ಗುರ್ಕ್, ನ್ಯೂಜಿಲೆಂಡ್ನ ಡೆವೊನ್ ಕಾನ್ವೇ ಮತ್ತು ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ತಲಾ ₹2 ಕೋಟಿ ಮೂಲ ಬೆಲೆ ಹೊಂದಿದ್ದಾರೆ. ಇವರೊಂದಿಗೆ ಕೆಕೆಆರ್ ತಂಡ ಬಿಡುಗಡೆ ಮಾಡಿರುವ ವೆಂಕಟೇಶ್ ಅಯ್ಯರ್ ಕೂಡ ₹2 ಕೋಟಿ ಮೂಲ ಬೆಲೆ ಹೊಂದಿದ್ದಾರೆ.

ಹರಾಜಿಗೆ ಹೋಗುವುದಕ್ಕೆ ಮೊದಲು ಮೂರು ಬಾರಿ ಚಾಂಪಿಯನ್ ಕೆಕೆಆರ್ ತಂಡ ತನ್ನ ಪರ್ಸ್ನಲ್ಲಿ ₹64.3 ಕೋಟಿ ಮೊತ್ತ ಹೊಂದಿದೆ. ಸಿಎಸ್ಕೆ ತಂಡ ಕೂಡ ₹43.4 ಕೋಟಿ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.