ನವದೆಹಲಿ: ಪ್ರತಿಕೂಲ ಹವಾಮಾನದ ಕಾರಣ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಅರ್ಜೆಂಟಿನಾದ ಲಿಯೊನೆಲ್ ಮೆಸ್ಸಿ ಅವರ ದೆಹಲಿ ಭೇಟಿ ವಿಳಂಬವಾಗಿದೆ.

ತಮ್ಮ 'G.O.A.T Tour of India' ಪ್ರವಾಸದ ಭಾಗವಾಗಿ ಡಿಸೆಂಬರ್ 13ರಂದು ಕೋಲ್ಕತ್ತ, ಹೈದಾರಾಬಾದ್ ಮತ್ತು ಡಿಸೆಂಬರ್ 14ರಂದು ಮುಂಬೈಗೆ ಭೇಟಿ ನೀಡಿದ್ದ ಮೆಸ್ಸಿ, ಇಂದು ಬೆಳಿಗ್ಗೆ ರಾಷ್ಟ್ರ ರಾಜಧಾನಿ ತಲುಪಬೇಕಿತ್ತು. ಆದರೆ, ಮೋಡ ಮುಸುಕಿದ ವಾತಾವರಣ ಇರುವುದರಿಂದ ಪ್ರಯಾಣವನ್ನು ಮುಂದೂಡಲಾಗಿದೆ.

ಮೆಸ್ಸಿ ಸದ್ಯ ಮುಂಬೈ ವಿಮಾನ ನಿಲ್ದಾಣದಲ್ಲಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು ಮಧ್ಯಾಹ್ನ 1.30ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಮೆಸ್ಸಿ ಭಾಗವಹಿಸಬೇಕಿತ್ತು. ಅದಕ್ಕೂ ಮೊದಲು ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ಸಮಯ ನಿಗದಿಯಾಗಿತ್ತು. ತೀರಾ ವಿಳಂಬ ಆಗಿರುವುದರಿಂದ ಪಿಎಂ ಜೊತೆಗಿನ ಸಭೆ ಅನುಮಾನ ಎನ್ನಲಾಗುತ್ತಿದೆ.

ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾರತದ ಫುಟ್ಬಾಲ್ ಆಟಗಾರರು ಪಾಲ್ಗೊಳ್ಳಲಿದ್ದಾರೆ.

ಕ್ರಿಕೆಟಿಗ ವಿರಾಟ್ ಕೊಹ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಇತರ ಗಣ್ಯರು ಮೆಸ್ಸಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.
.ಭಾರತಕ್ಕೆ 211 ದೇಶಗಳಲ್ಲಿ ಅಪಖ್ಯಾತಿ ತಂದ ಮೆಸ್ಸಿ ಕಾರ್ಯಕ್ರಮದ ವೈಫಲ್ಯ: AIFF.ಮೆಸ್ಸಿ–ಸಚಿನ್ ಭೇಟಿಗೆ ಮನಸೋತ ಮುಂಬೈ: ಕ್ರೀಡಾಭಿಮಾನಿಗಳ ಮನದುಂಬಿದ ‘ಸುವರ್ಣ ಕ್ಷಣ’.
ಅರ್ಜೆಂಟಿನಾದವರೇ ಆದ ರೊಡ್ರಿಗೊ ಡಿ ಪೌಲ್ ಹಾಗೂ ಉರುಗ್ವೆಯ ಸೂಪರ್ಸ್ಟಾರ್ ಲೂಯಿಸ್ ಸೂರೆಜ್ ಅವರೂ ಮೆಸ್ಸಿ ಜೊತೆಗಿದ್ದಾರೆ.

ಮುಂಬೈನಲ್ಲಿ ಸಚಿನ್ ಭೇಟಿ
2022ರ ಫುಟ್ಬಾಲ್ ವಿಶ್ವಕಪ್ ವಿಜೇತ ಮೆಸ್ಸಿ ಅವರು ಮುಂಬೈನಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಫುಟ್ಬಾಲ್ ಸ್ಟಾರ್ ಸುನಿಲ್ ಚೆಟ್ರಿ ಮತ್ತು ಬಾಲಿವುಡ್ ತಾರೆಯರನ್ನು ಭೇಟಿಯಾಗಿದ್ದರು.

ಮೊದಲ ದಿನ (ಡಿ.13) ಕೋಲ್ಕತ್ತದಲ್ಲಿ ನಡೆದ ಕಾರ್ಯಕ್ರಮದ ವೇಳೆ ಗದ್ದಲವಾಗಿ, ಸಾಲ್ಟ್ ಲೇಕ್ ಕ್ರೀಡಾಂಗಣ ರಣಾಂಗಣವಾಗಿತ್ತು. ಆದರೆ, ಅದೇ ದಿನ ಸಂಜೆ ಹೈದರಾಬಾದ್ ಕಾರ್ಯಕ್ರಮ ಯಶಸ್ವಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.