ನಾರಾಯಣಪುರಕಾಲುವೆಗೆ ರೂ 4 ಸಾವಿರ ಕೋಟಿ:ಖರ್ಗೆ

7

ನಾರಾಯಣಪುರಕಾಲುವೆಗೆ ರೂ 4 ಸಾವಿರ ಕೋಟಿ:ಖರ್ಗೆ

Published:
Updated:

ಜೇವರ್ಗಿ: ಮೂರು ತಾಲ್ಲೂಕುಗಳ ರೈತರ ಜಮೀನಿಗೆ ನೀರು ಹರಿಸುವ ಉದ್ದೇಶದಿಂದ ನಾರಾ­ಯ­ಣಪುರ ಎಡ­ದಂಡೆ ಕಾಲುವೆ ದುರ­ಸ್ತಿಗೆ ಕೇಂದ್ರ ದಿಂದ ರೂ 4 ಸಾವಿರ ಕೋಟಿ ಅನುದಾನ ಬಿಡು­ಗಡೆಮಾಡಲಾಗುವುದೆಂದು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.ಭಾನುವಾರ ಇಟಗಾ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜೇವರ್ಗಿ ಮತ್ತು ಅಫಜಲಪುರ ತಾಲ್ಲೂಕಿನ ಕಬ್ಬು ಬೆಳೆಗಾರರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಾಂಗ್ರೆಸ್ ಸರ್ಕಾದ ಅವಧಿಯಲ್ಲಿ ಗುಲ್ಬರ್ಗ, ಯಾದಗಿರಿ ಜಿಲ್ಲೆಗಳಲ್ಲಿ ಹರಿಯುವ ಭೀಮಾ ಹಾಗೂ ಕೃಷ್ಣಾ ನದಿಗಳಿಗೆ 32 ಬ್ಯಾರೇಜ್ ಗಳನ್ನು ನಿರ್ಮಾಣ ಮಾಡಲಾಗಿದೆ. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.  ಕೃಷ್ಣಾ ಭಾಗ್ಯ ಜಲ ನಿಗಮದಿಂದ ನಿರ್ಮಿಸಿದ ಜೇವರ್ಗಿ ಶಾಖಾ ಕಾಲುವೆ ಇಂಡಿ ಶಾಖಾ ಕಾಲುವೆ ಹಾಗೂ ಮುಡಬೂಳ ಶಾಖಾ ಕಾಲುವೆಯಿಂದ ಜೇವರ್ಗಿ, ಶಹಾಪುರ ಮತ್ತು ಸುರಪುರ ತಾಲ್ಲೂಕುಗಳ ರೈತರ ಜಮೀನಿಗೆ ಸಮರ್ಪಕವಾಗಿ ನೀರು ಹರಿಸಲು ಕೇಂದ್ರ ಹಾಗೂ ರಾಜ್ಯಸರ್ಕಾರಗಳು ನೆರವಾಗಿವೆ ಎಂದರು.ಈ ನಿಟ್ಟಿನಲ್ಲಿ ರೈತರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕು. ಕಬ್ಬು ಬೆಳೆಗಾರರು ತಮಗೆ ಸಲ್ಲಿಸಿದ ಪ್ರಮುಖ 13 ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರೊಂದಿಗೆ ಸಭೆ ನಡೆಸಿ ಈಡೇರಿ­ಸಲಾಗುವುದು ಎಂದು ಖರ್ಗೆ ಹೇಳಿ­ದರು. ಸಕ್ಕರೆ ಹಾಗೂ ಮುಜುರಾಯಿ ಖಾತೆ ಸಚಿವ ಪ್ರಕಾಶ ಹುಕ್ಕೇರಿ ಮಾತನಾಡಿ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ರೈತರು ಹೆಚ್ಚಿನ ಪ್ರಮಾಣ­ದಲ್ಲಿ ಕಬ್ಬು ಬೆಳೆಯುತ್ತಿದ್ದು, ಪ್ರತಿ ಟನ್ ಕಬ್ಬಿಗೆ ರೂ.2400 ಬೆಂಬಲ ಬೆಲೆ ನೀಡಲಾಗುತ್ತಿದೆ ಎಂದರು.ಬೀದರ್‌ ಸಂಸದ ಎನ್.ಧರ್ಮಸಿಂಗ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ­ಅತಿಥಿಗಳಾಗಿ ಶಾಸಕ ಡಾ.ಉಮೇಶ ಜಾಧವ್, ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ, ಲೋಕಸಭಾ ಮಾಜಿ ಸದಸ್ಯ ಇಕ್ಬಾಲ್ ಅಹ್ಮದ್ ಸರಡಗಿ, ಜೆಡಿಎಸ್ ಮುಖಂಡ ಕೇದಾರ­ಲಿಂಗಯ್ಯ ಹಿರೇಮಠ, ಭಾಗಣ್ಣಗೌಡ ಸಂಕನೂರ, ರೈತ ಹೋರಾಟಗಾರ ಗೋಪಾಲರಾವ ಗುಡಿ, ಜೇವರ್ಗಿಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ನೇರಡಗಿ, ಶಾಂತಗೌಡ ದುಮ್ಮದ್ರಿ, ಚಂದ್ರಶೇಖರ ಹರನಾಳ, ತಾಲ್ಲೂಕು ಪಂಚಾಯಿತಿ ಸದಸ್ಯ ಭಗವಂತ್ರಾಯಗೌಡ ಅಂಕಲಗಿ, ಇಟಗಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೋನಮ್ಮ ಶೀಲವಂತ ಆಗಮಿಸಿದ್ದರು.ಕಾರ್ಯಕ್ರಮದಲ್ಲಿ ಬಸವಣ್ಣಪ್ಪ ಗೌನಳ್ಳಿ, ಶಿವಶರಣಪ್ಪ ಕೋಬಾಳ, ಕಾಸಿಂ ಪಟೇಲ ಮುದಬಾಳ, ಗುರುರಾಜ ಸುಭೇದಾರ, ಪುಂಡಲಿಕ ಗಾಯಕವಾಡ, ಕೃಷ್ಣಾಜೀ ಕುಲಕರ್ಣಿ, ಶಿವಾಜಿ ಹಣಮಂತಗೋಳ, ಶಾಂತಮಲ್ಲಪ್ಪ ಪಾಣೇಗಾಂವ, ಚಿದಾನಂದ ಕಟ್ಟಿ, ವಿಠೋಭಾ ಹಣಮಂತಗೋಳ ಸೇರಿದಂತೆ ಜೇವರ್ಗಿಮತ್ತು ಅಫಜಲಪುರ ತಾಲ್ಲೂಕಿನ ಸಾವಿರಾರು ರೈತರು ಪಾಲ್ಗೊಂಡಿದ್ದರು. ರೈತ ಹೋರಾಟಗಾರ ಗೋಪಾಲರಾವ ಗುಡಿ ಸ್ವಾಗತಿಸಿದರು, ಸಂಗಣ್ಣ ಹಣಮಂತಗೋಳ ನಿರೂಪಿಸಿದರು, ಯಲ್ಲಾಲಿಂಗ ಇಟಗಾ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry