ಸೋಮವಾರ, ಜನವರಿ 20, 2020
18 °C

ಕಾರ್ಯಕರ್ತೆ ವಿರುದ್ಧ ಮೇಲ್ವಿಚಾರಕಿ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ: ಇಲ್ಲಿಗೆ ಸಮೀಪದ ಹಲಕರ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರೂಜಿ ನಗರ ತಾಂಡಾದ ಅಂಗನ­ವಾಡಿ ಕೇಂದ್ರ-ಕ್ಕೆ ಮೇಲ್ವಿಚಾರಕಿ ನಾಗಮ್ಮ ಶುಕ್ರವಾರ ದಿಢೀರ್‌ ಭೇಟಿ ನೀಡಿ ಕಾರ್ಯಕರ್ತೆಯನ್ನು ತಾರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ನೀಡುವ ಅಕ್ಕಿ ಮತ್ತು ಗೋಧಿ, ಬೆಳೆ ಕಾಳುಗಳು ಮತ್ತು ಕ್ಷೀರಭಾಗ್ಯ ಯೋಜ­ನೆಯ ಹಾಲಿನ ಪುಡಿ ಸೇರಿದಂತೆ ವಿವಿಧ ಪೌಷ್ಟಿಕ ಆಹಾರವನ್ನು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶರಣಮ್ಮಾ  ವಿತರಿಸದೇ ಅಕ್ರಮವಾಗಿ ಕಾಳ ಸಂತೆ­ಯಲ್ಲಿ ಮಾರಟ ಮಾಡುತ್ತಿದ್ದಾಳೆ ಎಂಬ ದೂರಿದ್ದ ವರದಿ ‘ಪ್ರಜಾವಾಣಿ­’ಯಲ್ಲಿ ಶುಕ್ರವಾರ ಪ್ರಕಟಗೊಂಡಿತ್ತು.ಈ ಹಿನ್ನೆಲೆಯಲ್ಲಿ ಮೇಲ್ವಿಚಾರಕಿ  ಶುಕ್ರವಾರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಮತ್ತು ಬಾಣತಿಯರಿಗೆ ಕೇವಲ ಎರಡು ಬಾರಿ ಮಾತ್ರ ಪೌಷ್ಟಿಕ ಆಹಾರ ನೀಡಿದ್ದಾರೆ ಎಂದು ಕಾರ್ಯಕರ್ತೆ ವಿರುದ್ಧ ಮಹಿಳೆ­ಯರು ಮತ್ತು ಸ್ಥಳದಲ್ಲಿದ್ದ ಜೈಕರವೇ ವಾಡಿ ವಲಯ ಪ್ರದಾನ ಕಾರ್ಯದರ್ಶಿ ಶ್ರೀರಾಮ ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.ಕಳೆದ ಆರು ತಿಂಗಳ ಮಕ್ಕಳಿಂದ 3ವರ್ಷದ 40 ಮಕ್ಕಳಿಗೆ ಹಾಲಿನ ಪುಡಿ ಮತ್ತು ಅಕ್ಕಿ ಪಾಯಸ ಮನೆಗೆ ಕೊಡಬೇಕು ಎಂಬುವುದು ನಿಯಮ. ಆದರೆ ಕಾರ್ಯ­ಕರ್ತೆ ನೀಡಿಲ್ಲ ಇದರಿಂದ ಬಹುತೇಕ ತಾಂಡಾ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ನಿವಾಸಿಗಳಾದ ಲಲಿತಾಬಾಯಿ ಚವಾಣ್‌, ಶಹಾನಾಜ್‌ ಬೇಗಂ ಅಧಿಕಾರಿಗಳಿಗೆ ತಿಳಿಸಿದರು.ಇಲ್ಲಿನ ವಿದ್ಯಮಾನಗಳನ್ನು ಮೇಲಾ­ಧಿಕಾರಿಗಳ ಗಮನಕ್ಕೆ ತಂದು ಕಾರ್ಯ­ಕರ್ತೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೇಲ್ವಿಚಾ­ರಕಿ ನಾಗಮ್ಮ ‘ಪ್ರಜಾವಾಣಿ‘ ಗೆ ತಿಳಿಸಿದರು. ಜೈಕರವೇ ವಾಡಿ ವಲಯ ಪ್ರದಾನ ಕಾರ್ಯದರ್ಶಿ ಶ್ರೀರಾಮ ರಾಠೋಡ ಇದ್ದರು.

ಪ್ರತಿಕ್ರಿಯಿಸಿ (+)