ಸೋಮವಾರ, ಜನವರಿ 27, 2020
26 °C

ಹುಲಿ ರಾಷ್ಟ್ರೀಯ ಗಣತಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತಾಲ್ಲೂಕಿನ ಕೊಂಚಾವರಂ ವನ್ಯಜೀವಿಧಾಮ ಸೇರಿದಂತೆ ಸುಮಾರು 50ಸಾವಿರ ಎಕರೆ ಪ್ರದೇಶದ ಕಾಡಿನಲ್ಲಿ 2013–14ನೇ ಸಾಲಿನ ಹುಲಿ ಹಾಗೂ ವನ್ಯಜೀವಿಗಳ ರಾಷ್ಟ್ರೀಯ ಗಣತಿ  ಕಾರ್ಯ ಸೋಮವಾರ ಶುರುವಾಗಿದೆ.



ವನ್ಯಜೀವಿ ಧಾಮದ ಕುಸ್ರಂಪಳ್ಳಿ, ಐನೋಳ್ಳಿ, ಚಂದ್ರಂಪಳ್ಳಿ, ಕೊಳ್ಳೂರು, ಚಿಂಚೋಳಿ, ಶಾದಿಪುರ, ಚಿಕ್ಕಲಿಂಗದಳ್ಳಿ, ಸೋಮಲಿಂಗದಳ್ಳಿ, ಕಲಭಾವಿ, ಕೊಂಚಾ­­ವರಂ, ಮೊಗದಂಪುರ, ಸಂಗಾ­ಪುರ, ಧರ್ಮಾಸಾಗರ, ವೆಂಕಟಾಪುರ, ಅಂತಾವರಂ ಮತ್ತು ಪಂಗರಗಾದ ಅರಣ್ಯ ರಕ್ಷಕರ ಕೇಂದ್ರ(ಬೀಟ್‌)ದ ವ್ಯಾಪ್ತಿಯಲ್ಲಿ ಪ್ರತಿ ಬೀಟ್‌ಗೆ 3 ಸಿಬ್ಬಂದಿಯಂತೆ 50 ಮಂದಿ ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ.



ಸೋಮವಾರ ಎಸಿಎಫ್‌ ದಯಾನಂದ­­ಕುಮಾರ ಹಾಗೂ ಆರ್‌ಎಫ್‌ಒ  ಎಂ.ಎಲ್‌.ಬಾವಿಕಟ್ಟಿ ವಿವಿಧ ಬೀಟ್‌ಗೆ ತೆರಳಿ ಗಣತಿಗೆ ಮಾಡಿಕೊಂಡ ಸಿದ್ಧತೆ ಪರಿಶೀಲಿಸಿ, ಸೂಕ್ತ ಮಾರ್ಗದರ್ಶನ ನೀಡಿದರು.



ಸೋಮವಾರ, ಮಂಗಳವಾರ ಸಿದ್ಧತೆ, ಬುಧವಾರದಿಂದ ಶುಕ್ರವಾರ­ದವರೆಗೆ ಪ್ರತಿದಿನ 5ಕಿ.ಮೀ. ಪ್ರಾಣಿಗಳ ವಾಸಯೋಗ್ಯ ಪ್ರದೇಶದಲ್ಲಿ ಸೂಕ್ಷ್ಮ ನಡಿಗೆ ಮತ್ತು ಶನಿವಾರದಿಂದ ಸೋಮವಾರ­ದವರೆಗೆ ಟ್ರಾಂಜೆಂಟ್‌ ಲೈನ್‌ನಲ್ಲಿ 2 ಕಿ.ಮೀ ಉದ್ದದಲ್ಲಿ ಮತ್ತು ವೃತ್ತ ಹಾಗೂ ಗೊತ್ತು ಪಡಿಸಿದ ಸ್ಥಳಗಳಲ್ಲಿ ದೊರೆಯುವ ಕಾಡು­ಪ್ರಾಣಿಗಳ ಚಲನವಲನದ ಕುರು­ಹುಗಳು, ಹೆಜ್ಜೆಗುರುತು, ಹಿಕ್ಕೆಗಳು, ಮೂಳೆಗಳು, ಸತ್ತಪ್ರಾಣಿಯ ಅಸ್ಥಿಪಂಜರ, ಕಾಡಿನ ವಿವಿಧ ಗಿಡಗಳು, ಚಂಡಿ ಕತ್ತರಿಸಿದ ಗಿಡಗಳು, ಕಾಡಿನ ದಟ್ಟಣೆ, ವಿವಿಧ ಸಾದಾ ಸಸ್ಯಗಳು, ಔಷಧಿ ಸಸ್ಯಗಳು, ಒಣಹುಲ್ಲು, ಹಸಿ­ಹುಲ್ಲುಗಳ ಎಲೆಗಳ ವಿವರ ದಾಖಲಿಸಲಾಗುತ್ತದೆ.



ನಿವೃತ್ತ ವಲಯ ಅರಣ್ಯಾಧಿಕಾರಿ ಯುನುಸ್‌ಅಲಿ, ಉಪ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ, ವೀರೇಂದ್ರ, ಹಣಮಂತ­ರಾಯ ಬಿರಾದಾರ, ಮಹೇಶ ಕನಕಟ್ಟ, ಅಶೋಕ ಮೊದಲಾದವರು ಇದ್ದರು.

ಪ್ರತಿಕ್ರಿಯಿಸಿ (+)