ಮಂಗಳವಾರ, ಜನವರಿ 28, 2020
19 °C

42 ಬಾಲ ಕಾರ್ಮಿಕರ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ವಾಡಿ–ಸೊಲ್ಲಾಪುರ ರೈಲು ನಿಲ್ದಾಣಗಳಲ್ಲಿ ಶುಕ್ರವಾರ ಕಾರ್ಯಾಚರಣೆ ನಡೆಸಿದ ಗುಲ್ಬರ್ಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು 42 ಬಾಲ ಕಾರ್ಮಿಕರನ್ನು ರಕ್ಷಿಸಿದರು.ಅನಾಥ ಮಕ್ಕಳು, ಮನೆಯಿಂದ ಓಡಿಹೋದ ಮಕ್ಕಳು, ಕಾಣೆಯಾದ ಮಕ್ಕಳು, ದುಶ್ಚಟಕ್ಕೆ ಬಲಿಯಾದ ಮಕ್ಕಳು ಸೇರಿದಂತೆ ಒಟ್ಟು 42 ಮಕ್ಕಳನ್ನು ರಕ್ಷಿಸಿ, ಪುನರ್ವಸತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಾಲಕರ ಹಾಗೂ ಬಾಲಕಿಯರ ಬಾಲಮಂದಿರಕ್ಕೆ ಒಪ್ಪಿಸಲಾಯಿತು.ಬಾಲ ನ್ಯಾಯ ಕಾಯ್ದೆ (ಪಾಲನೆ ಮತ್ತು ರಕ್ಷಣೆ) 2000ರ ಅನ್ವಯ ರಕ್ಷಿಸಿದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಯಿತು. ಈ ಪೈಕಿ 20 ಮಕ್ಕಳನ್ನು ಪೋಷಕರಿಗೆ ಒಪ್ಪಿಸಲಾಯಿತು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾರಾಯಣಸ್ವಾಮಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಆನಂದರಾಜ, ಸದಸ್ಯೆ ಐರಿನ್ ಲೋಬೋ, ಸಾಥಿ ಸಂಸ್ಥೆಯ ಇಮ್ರಾನ್, ಕಾರ್ಮಿಕ ಇಲಾಖೆ ಅಧಿಕಾರಿ ಸಿದ್ದಲಿಂಗಪ್ಪ, ಕಾರ್ಮಿಕ ನಿರೀಕ್ಷಕ ಶ್ರೀಹರಿ, ಪ್ರಸಾದ್ ಸೇರಿದಂತೆ ಇತರರು ಇದ್ದರು.ಸ್ಲಂ ಅಭಿವೃದ್ಧಿಗೆ ಒಪ್ಪಿಗೆ: ಸ್ವಾಗತ

ಗುಲ್ಬರ್ಗ:
ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸ್ಲಂ ನಿವಾಸಿಗಳಿಗೆ ಮತ್ತು ಗುತ್ತಿಗೆ ಪೌರ ಕಾರ್ಮಿಕ ಅಭಿವೃದ್ಧಿಗಾಗಿ ಸಚಿವ ಸಂಪುಟ ಸಭೆ ತೆಗೆದುಕೊಂಡ ನಿರ್ಣಯವನ್ನು ಜಿಲ್ಲಾ ಸ್ಲಂ ಜನಾಂದೋಲನಾ ಕರ್ನಾಟಕ ಹಾಗೂ ಜಿಲ್ಲಾ ಕೊಳೆಗೇರಿ ನಿವಾಸಿಗಳ ಒಕ್ಕೂಟ ಸ್ವಾಗತಿಸಿದೆ.ಕೇಂದ್ರ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಗಳ ಅನ್ವಯ ರಾಜೀವ ಆವಾಸ್‌ ಯೋಜನೆ ಅಡಿ ರೂ 10,752 ಕೋಟಿ ವೆಚ್ಚದಲ್ಲಿ ಕೊಳೆಗೇರಿ ಮುಕ್ತ ನಗರ ಸ್ಥಾಪನೆಗೆ ನಿರ್ಧರಿಸಿರುವುದು, ಪೌರ ಕಾರ್ಮಿಕರನ್ನು ಕಾಯಂಗೊಳಿಸಲು ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕೆ  ಮುಖ್ಯಮಂತ್ರಿ ಸೂಚಿಸಿರುವುದಕ್ಕೆ ಸಮಿತಿ ಸಂತಸ ವ್ಯಕ್ತಪಡಿಸುತ್ತದೆ ಎಂದು ಅಧ್ಯಕ್ಷೆ ಸುಗರಾ ಬೇಗಂ, ಜಿಲ್ಲಾ ಸಂಚಾಲಕ ಅಲ್ಲಮ ಪ್ರಭು ನಿಂಬರ್ಗಾ, ಖಜಾಂಚಿ ಗಣೇಶ ಕಾಂಬಳೆ, ಕಾರ್ಯದರ್ಶಿ ಬಾಬುರಾವ ದಂಡಿನಕರ್‌, ಅಶೋಕ ರಾಠೋಡ, ಶಿವಾನಂದ ಬುಕ್ಕನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)