ಸೋಮವಾರ, ಜೂನ್ 21, 2021
28 °C

‘ಭಾರತ ನಿರ್ಮಾಣ ಯಾತ್ರೆ’ಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದ ಜಿಲಾನಾಬಾದ್‌ ಮಹಮ್ಮದಿ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂ ಭದಲ್ಲಿ ಕೇಂದ್ರ ಸಚಿವ ಮಲ್ಲಿಕಾರ್ಜನ ಖರ್ಗೆ ಅವರು ಕೇಂದ್ರ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ತಿಳಿಸುವ ‘ಭಾರತ ನಿರ್ಮಾಣ ಯಾತ್ರೆ’ಗೆ ಚಾಲನೆ ನೀಡಿದರು.ಅನಂತರ ಮಾತನಾಡಿದ ಅವರು, ‘ಯುಪಿಎ ಸರ್ಕಾರದ ಎರಡು ಅವಧಿಯ ಆಡಳಿತದಲ್ಲಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದೆ.  ರಾಜ್ಯ ದಲ್ಲಿ ಕಾಂಗ್ರೆಸ್‌ ಸರ್ಕಾರ ಕೂಡಾ ಉತ್ತಮ ಕೆಲಸ ಗಳನ್ನು ಮಾಡಿಕೊಂಡು ಬರುತ್ತಿದೆ. ಕಡಿಮೆ ಕೆಲಸ ಮಾಡಿದವರು ಹೆಚ್ಚು ಪ್ರಚಾರ ಪಡೆಯುತ್ತಿದ್ದಾರೆ. ಆದರೆ ನಾವು ಎಷ್ಟೆ ಕೆಲಸ ಮಾಡಿದರೂ ಪ್ರಚಾರ ಸಿಗುತ್ತಿಲ್ಲ’ ಎಂದರು.ಸರ್ಕಾರಗಳ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶ ದಿಂದ ಈ ಯಾತ್ರೆ ಕೈಗೊಳ್ಳಲಾಗಿದೆ. ಇದರಲ್ಲಿ ನಾವು ಮಾಡಿರುವ ಕೆಲಸ ಗಳ ಸಮಗ್ರ ವರದಿ ಇದೆ. ಕಾಂಗ್ರೆಸ್ ಸರ್ಕಾರ ಜನರ ಏಳಿಗೆ ಸಲುವಾಗಿ ಕೆಲಸ ಮಾಡಿದೆಯೆ ಹೊರತು ಚುನಾವಣಾ ಲಾಭ ಮಾಡಿಕೊಳ್ಳುವು ದಕ್ಕಲ್ಲ ಎಂದು ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವ ಖಮ ರುಲ್ ಇಸ್ಲಾಂ, ಶಾಸಕರಾದ ರಾಜಾ ವೆಂಕಟಪ್ಪ ನಾಯಕ್, ಅಲ್ಲಮಪ್ರಭು ಪಾಟೀಲ್, ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಕೈಲಾಸನಾಥ ಪಾಟೀಲ್, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹ ಮ್ಮದ್ ಅಜಗರ್ ಚುಲಬುಲ, ಕೃಷ್ಣಾಜಿ ಕುಲಕರ್ಣಿ, ಮಹಾಂತಪ್ಪ ಸಂಗಾವಿ, ಸೈಯ್ಯದ್ ಮಜರ್ ಹುಸೇನ್, ಪ್ರಭಾವತಿ ಪಾಟೀಲ್, ಮಾಜಿ ಮೇಯರ್ ಧರ್ಮವೀರ ಪಟ್ಟಣ, ನೀಲಕಂಠ ಮೂಲಗೆ, ಉಮಾದೇವಿ ದೊಡ್ಡಮನಿ, ಇಲಿಯಾಸ್ ಬಾಗವಾನ್, ಚಂದ್ರಿಕಾ ಪರಮೇಶ್ವರ್,ಡಿಸಿಸಿ ಪ್ರಧಾನ ಕಾರ್ಯದರ್ಶಿ, ಪಾಲಿಕೆ ಸದಸ್ಯ ಭೀಮರೆಡ್ಡಿ ಪಾಟೀಲ್ ಇದ್ದರು.ೇಶ ಮುನ್ನಡೆಸಲು ಮೋದಿಯಿಂದ ಸಾಧ್ಯವೇ?’

ಗುಲ್ಬರ್ಗ
: ಗುಜರಾತ್‌ನಲ್ಲಿ 15 ವರ್ಷ ಆಡಳಿತ ನಡೆಸಿರುವ ನರೇಂದ್ರ ಮೋದಿ ಯಿಂದ ನಿರೀಕ್ಷಿತ ಪ್ರಗತಿ ಮಾಡಲಾಗಿಲ್ಲ. ಇಂಥವರು ದೇಶವನ್ನು ಮುನ್ನಡೆಸಲು ಹೇಗೆ ಸಾಧ್ಯ ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.ನಗರದ ಜಿಲಾನಾಬಾದ್‌ನಲ್ಲಿ ಭಾರತ ನಿರ್ಮಾಣ ಪಾದಯಾತ್ರೆಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಡತನ ನಿರ್ಮೂಲನೆಗೊಳಿಸುವುದು, ಶಿಕ್ಷಣ ಕ್ಷೇತ್ರದಲ್ಲಿ ಬೆಳಗವಣಿಗಳು ತುಂಬಾ ಕಳಪೆ ಮಟ್ಟದಲ್ಲಿವೆ. ಮಾಧ್ಯಮಗಳಲ್ಲಿ ಸುಮ್ಮನೆ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ ಎಂದು ಹರಿಹಾಯ್ದರು.ತತ್ವ ಸಿದ್ಧಾಂತ ಇಲ್ಲದವರಿಂದ ಯಾವ ಸಾಧನೆ ಸಾಧ್ಯವಿಲ್ಲ. ವಿರೋಧ ಪಕ್ಷಗಳು ಕಾಂಗ್ರೆಸ್ ಸರ್ಕಾರದ ಮೇಲೆ ಮಾಡುವ ಟೀಕೆಗಳು ಮಾಧ್ಯಮಗಳಲ್ಲಿ ವೈಭವೀ ಕರಿಸಲಾಗುತ್ತಿದೆ. ಕಾಂಗ್ರೆಸ್‌ನವರು ಸಂವಿಧಾನಕ್ಕೆ ಬದ್ಧರಾಗಿ ಕೆಲಸ ಮಾಡು ತ್ತಿದ್ದು,ಜನರಿಗೂ ಜಾತ್ಯತೀತ ತತ್ವಗಳ ಮೇಲೆ ವಿಶ್ವಾಸ ಹೆಚ್ಚಾಗಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.