ಶನಿವಾರ, ಜೂನ್ 12, 2021
24 °C

ಸಮಸ್ಯೆ ಸುಳಿಯಲ್ಲಿ ಹೂವಿನ ವ್ಯಾಪಾರಿಗಳು

ನವೀನ್‌ ಕುಮಾರ್‌ ಜಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಇಕ್ಕಟ್ಟಾದ ರಸ್ತೆ, ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್‌, ನಡೆದಾಡಲೂ ಪರದಾಟ, ದೂಳು, ಬಿಸಿಲಿನ ನಡುವೆ ವ್ಯಾಪಾರ...ಇದು ನಗರದ ಸೂಪರ್‌ ಮಾರ್ಕೆಟ್‌ನ ಚಪ್ಪಲ್‌ ಬಜಾರ್‌ ನಲ್ಲಿರುವ ಹೂವಿನ ಮಾರುಕಟ್ಟೆ ದುರವಸ್ಥೆ.ಇಂತಹ ವಾತಾವರ ಣದ ನಡುವೆಯೂ ವ್ಯಾಪಾರ ನಡೆಸುವ ಅನಿವಾರ್ಯತೆ ವ್ಯಾಪಾರಿ ಗಳದ್ದು. ರಸ್ತೆಗಿಂತ ಆಳದಲ್ಲಿರುವ ತಳ ಅಂತಸ್ತಿನಲ್ಲಿ  ವ್ಯಾಪಾರ ನಡೆಯುತ್ತದೆ. ಇಲ್ಲಿ ಸುಮಾರು 30ರಷ್ಟು ಹೂವಿನ ಅಂಗಡಿಗಳಿವೆ. ಆದರೆ ಮೂಲ ಸೌಕರ್ಯ ಇಲ್ಲ ಎಂಬುದು ವ್ಯಾಪಾರಿಗಳ ಅಳಲು.  ಶೌಚಾ ಲಯ, ನೀರಿಗಾಗಿ  ನಿತ್ಯ ಪರದಾಟ ತಪ್ಪಿದ್ದಲ್ಲ. ಬೇಸಿಗೆ ಬಂದರೆ ಸುಡು ಬಿಸಿಲಿನ ತಾಪ, ಮಳೆಗಾಲ ದಲ್ಲಿ ಕೃತಕ ನೆರೆ ಭೀತಿ.ಅಷ್ಟೇ ಅಲ್ಲದೆ ಅಂಗಡಿಗಳಿರುವ ಕಟ್ಟಡ ಶಿಥಿಲಗೊಂಡು ಕುಸಿದು ಬೀಳುತ್ತದೋ ಎಂಬ ಭಯದಲ್ಲಿ  ವ್ಯಾಪಾರ ನಡೆಸುವಂತಾಗಿದೆ.

ಮಾರ್ಕೆಟ್‌ ಪರಿಸರದಲ್ಲೆಲ್ಲೂ ಶೌಚಾಲಯ ವಿಲ್ಲದ ಕಾರಣ ಹೂವಿನ ಅಂಗಡಿಗಳಿರುವ ಕಟ್ಟಡದ ಮೇಲ್ಛಾವಣಿ (ಟೆರೇಸ್‌) ಬಯಲು ಶೌಚಾಲಯವಾಗಿ ಮಾರ್ಪಾಡಾಗಿದೆ. ಮಳೆಗಾಲದಲ್ಲಿ ಇಲ್ಲಿ ಸಂಗ್ರಹಗೊಳ್ಳುವ ಮಲಿನ ನೀರು ಕೆಳಗೆ ಹರಿದು ಹೂವಿನ ಅಂಗಡಿಗೆ ನುಗ್ಗುತ್ತದೆ ಎಂಬುದು ವ್ಯಾಪಾರಿಗಳ ದೂರು.ಇಲ್ಲಿ ವ್ಯಾಪಾರ ನಡೆಸುವ ಹೆಚ್ಚಿನವರು ಹೂ ಮಾರಾ ಟವನ್ನೇ ಕುಲಕ ಸುಬಾಗಿ ನಡೆಸಿಕೊಂಡು ಬಂದವರು. ಇಡೀ ಕುಟುಂಬದ ಮಂದಿ ಹೂ ಕತ್ತರಿಸುವುದು, ಮಾಲೆ ತಯಾರಿಸುವ ಕೆಲಸ ದಲ್ಲಿ ತೊಡಗಿಸಿ ಕೊಳ್ಳುತ್ತಾರೆ. ಮಾರ್ಕೆಟ್‌ಗೆ ವಿವಿಧೆಡೆ ಗಳಿಂದ ಬರುವ ಹೂವು ಗಳನ್ನು ಖರೀದಿಸಿ ಇವರು ಮಾರಾಟ ನಡೆಸುತ್ತಾರೆ. ದೀಪಾವಳಿ, ದಸರಾ ಬಂದರೆ  ಸೀಸನ್‌ ಪ್ರಾರಂ ಭವಾಗುತ್ತದೆ. ಆಗ ವ್ಯಾಪಾರವೂ ಜೋರಾಗಿ ರುತ್ತದೆ. ಮಳೆಗಾಲದಲ್ಲಿ ವ್ಯಾಪಾರವೇ ಇರುವುದಿಲ್ಲ ಎನ್ನುತ್ತಾರೆ ಇವರು.‘ನಮ್ಮಲ್ಲಿ ಶೈತ್ಯಾಗಾರ ವ್ಯವಸ್ಥೆ  ಇಲ್ಲ. ಬಂದ್‌ ಮೊದಲಾದ ಸಂದರ್ಭ ದಲ್ಲಿ ಪ್ರತಿಭಟನೆಕಾರರ ಆಕ್ರೋಶಕ್ಕೆ ಮೊದಲು ತುತ್ತಾಗುವವರೇ ನಾವು. ಇಂಥ ಸಂದರ್ಭದಲ್ಲಿ ಹೂಮಾಲೆ ಗಳನ್ನು ಕಿತ್ತು ಬಿಸಾಡುತ್ತಾರೆ. ಇಂತಹ ಸವಾಲುಗಳ ನಡುವೆ ವ್ಯಾಪಾರ ನಡೆಸಬೇಕು’ ಎನ್ನುತ್ತಾರೆ ವ್ಯಾಪಾರಿ ಫಯಾಜ್‌.ವ್ಯಾಪಾರ ನಡೆಸುವುದೇ ಸವಾಲು’

ಸುಮಾರು 17 ವರ್ಷಗಳಿಂದ ಇಲ್ಲಿ ವ್ಯಾಪಾರ ನಡೆಸುತ್ತಿದ್ದೇವೆ. ಇತರ ಅಂಗಡಿಗಳಿಗೆ ಹೋಲಿಸಿದರೆ ನಮಗೆ ನೀಡಿರುವ ಕಟ್ಟಡ ಅತೀ ಸಣ್ಣದು. ಇದಕ್ಕೆ ಮಹಾನಗರ ಪಾಲಿಕೆಗೆ ಮಾಸಿಕ ₨600 ಬಾಡಿಗೆ ಕಟ್ಟಬೇಕು. 6 ತಿಂಗಳು ಬಾಡಿಗೆ ಕಟ್ಟಲಾಗದಿದ್ದರೆ ಶೇ 10ರಷ್ಟು ದಂಡ ತೆರಬೇಕು. ಅಂಗಡಿ ಮುಂದೆ ಚರಂಡಿ ವ್ಯವಸ್ಥೆಯೂ ಇಲ್ಲ. ಮಳೆಗಾಲದಲ್ಲಿ ಕೊಳಕು ನೀರು ಅಂಗಡಿಯೊಳಗೆ ಸಂಗ್ರಹವಾಗಿ ವ್ಯಾಪಾರ ನಡೆಸಲು ತೀವ್ರ ತೊಂದರೆಯಾಗುತ್ತಿದೆ. 

–ಮುಕ್ತಾರ್‌ ಅಹಮ್ಮದ್‌ ಹೂಗಾರ್‌, ಅಧ್ಯಕ್ಷರು, ಗರೀಬನ್ನವಾಸ್‌ ಹೂವಿನ ವ್ಯಾಪಾರಿಗಳ ಸಂಘ‘ಯಾರೂ ಸ್ಪಂದಿಸುತ್ತಿಲ್ಲ’


ಅಂಗಡಿಗಳಿಗೆ ನೀರಿನ ವ್ಯವಸ್ಥೆ ಯೂ ಇಲ್ಲ.  ಹೂವುಗಳಿಗೆ ಸಿಂಪಡಿಸಲು ಹೆಚ್ಚು ನೀರು ಅಗತ್ಯ ಇರುವುದರಿಂದ ನಾವು ಮನೆಯಿಂದಲೇ ಕ್ಯಾನ್‌ಗಳಲ್ಲಿ ತರಬೇಕಾದ ಅನಿವಾರ್ಯತೆ ಇದೆ. ಇದೇ ಕಟ್ಟಡದ ಮೇಲಂತಸ್ತಿನಲ್ಲಿರುವ ಇತರ ಅಂಗಡಿಗಳಿಗೆ  ಪ್ರತ್ಯೇಕ ವಿದ್ಯುತ್‌ ಮೀಟರ್‌ ಇದ್ದರೆ. ನಮಗೆ ಮೂರ್ನಾಲ್ಕು ಅಂಗಡಿಗಳಿಗೆ ಒಂದೇ ಮೀಟರ್‌ ಅಳವಡಿಸಲಾಗಿದೆ. ಯಾರೂ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ.

–ಸಲೀಮುದ್ದೀನ್‌, ಹೂವಿನ ವ್ಯಾಪಾರಿ‘ಮಳೆಗಾಲಕ್ಕಿಂತ ಮೊದಲು ದುರಸ್ತಿ’


ಹೂವಿನ ಅಂಗಡಿ ಗಳಿರುವ ಶಿಥಿಲಗೊಂಡ ಕಟ್ಟಡದ ದುರಸ್ತಿಗೆ ಈಗಾಗಲೇ ₨15ಲಕ್ಷ ಮಂಜೂರಾಗಿದೆ. ಆದರೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ  ಕಾಮಗಾರಿ ನಡೆಸುವಂತಿಲ್ಲ. ಮಳೆಗಾಲಕ್ಕಿಂತ ಮೊದಲು  ಕಟ್ಟಡ ದುರಸ್ತಿ ಮಾಡಲಾಗುವುದು. ಕಟ್ಟಡದ ಮೊದಲ ಮಹಡಿಯಲ್ಲಿ ಈ ಹಿಂದೆ ಪಾಲಿಕೆ ಶೌಚಾಲಯ ನಿರ್ಮಿಸಿತ್ತು. ಆದರೆ ಅದರಲ್ಲಿ ಸೋರಿಕೆ ಇದೆ ಎಂದು ವ್ಯಾಪಾರಿಗಳು ದೂರಿ ದ್ದರಿಂದ ಮುಚ್ಚಲಾಗಿದೆ. ಶೌಚಾಲಯ ನಿರ್ಮಿ ಸುವ ಕುರಿತೂ ಚಿಂತಿಸಲಾಗುವುದು. ಅಲ್ಲದೆ ಸಾರ್ವಜನಿಕರು ಕಟ್ಟಡದ ಮೇಲ್ಛಾವಣಿ (ಟೆರೇಸ್‌) ತೆರಳದಂತೆ ಬೀಗ ಹಾಕಲಾಗುವುದು. 

– ಆರ್‌.ಪಿ. ಜಾಧವ್‌, ಕಾರ್ಯನಿರ್ವಾಹಕ ಎಂಜಿನಿಯರ್‌, ಮಹಾನಗರ ಪಾಲಿಕೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.