ಸಿಲುಕಿದ ಲಾರಿ: ಸಂಚಾರಕ್ಕೆ ತೊಂದರೆ

ಗುರುವಾರ , ಜೂಲೈ 18, 2019
23 °C

ಸಿಲುಕಿದ ಲಾರಿ: ಸಂಚಾರಕ್ಕೆ ತೊಂದರೆ

Published:
Updated:

ಚಿತ್ತಾಪುರ: ಸ್ಥಳೀಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪಡಿತರ ಆಹಾರ ಧಾನ್ಯ ತುಂಬಿಕೊಂಡು ಶಹಾಬಾದ ಕಡೆಗೆ ಹೊರಟಿದ್ದ ಲಾರಿ ಶನಿವಾರ ಮಧ್ಯಾಹ್ನ ಇಲ್ಲಿಯ ಲಾಡ್ಜಿಂಗ್ ಕ್ರಾಸ್‌ನಲ್ಲಿ ನಡು ರಸ್ತೆಯಲ್ಲಿ ಸಿಲುಕಿ ಬಿದ್ದು ಸ್ವಲ್ಪ ಕಾಲ ಸಾರಿಗೆ ಸಂಚಾರಕ್ಕೆ ತೀವ್ರ ತೊಂದರೆಯಾದ ಘಟನೆ ನಡೆಯಿತು.ಪಡಿತರ ಧಾನ್ಯ ತುಂಬಿದ್ದ ಪರಿಣಾಮ ಲಾರಿಯನ್ನು ಬೇಗನೆ ತೆಗೆಯಲು ಸಾಧ್ಯವಾಗಲಿಲ್ಲ. ವೃತ್ತದಲ್ಲಿ ನಡು ರಸ್ತೆಯಲ್ಲಿ ಲಾರಿ ಸಿಲುಕಿ ಇಲ್ಲಿನ ರಸ್ತೆಗೆ ಸಂಬಂಧಿಸಿದ ಅಧಿಕಾರಿಗಳ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ. ರಸ್ತೆ ಸರಿಯಾಗಿದ್ದರೆ ಲಾರಿ ಸಿಲುಕುವ ಪ್ರಸಂಗವೇ ನಡೆಯುತ್ತಿರಲಿಲ್ಲ ಎಂದು ನಗರದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.ಪುರಸಭೆ ವತಿಯಿಂದ ಇಲ್ಲಿನ ಕೈಗಾರಿಕೆ ಪ್ರದೇಶದ ಹತ್ತಿರದಿಂದ ನಗರದ ಭುವನೇಶ್ವರಿ ವೃತ್ತದವರೆಗೆ ಕೈಗೆತ್ತಿಕೊಂಡಿರುವ ದ್ವೀಪಥ ರಸ್ತೆ ನಿರ್ಮಾಣಕ್ಕೆಂದು ಮುಖ್ಯ ರಸ್ತೆಯ ಎರಡೂ ಪಕ್ಕದಲ್ಲಿ ರಸ್ತೆ ಅಗೆದು ಹಾಗೆಯೇ ಬಿಟ್ಟ ಪರಿಣಾಮ ಸಾರಿಗೆ ಸಂಚಾರಕ್ಕೆ ಮತ್ತಷ್ಟು ತೊಂದರೆಯಾಗಲಿದೆ ಎಂದು ನಗರದ ಜನರು ದೂರಿದ್ದಾರೆ.ರಸ್ತೆ ಕಾಮಗಾರಿ ಪಡೆದುಕೊಂಡವರು ಹಾಗೂ ಮೇಲುಸ್ತುವಾರಿ ನೋಡಬೇಕಾದ ಪುರಸಭೆ ಅಭಿಯಂತರರು ರಸ್ತೆ ನಿರ್ಮಾಣದ ಅವೈಜ್ಞಾನಿಕ ಪದ್ದತಿ ಅನುಸರಿಸುತ್ತಿದ್ದಾರೆ. ಲಾಡ್ಜಿಂಗ್ ವೃತ್ತದಿಂದ ನಗರ ಪ್ರವೇಶ ಮಾಡುವ ಕಡೆಗೆ ಎರಡೂ ಬದಿಯಲ್ಲಿ ರಸ್ತೆ ಅಗೆದು ತೆಗ್ಗು ಹಾಗಯೇ ಬಿಟ್ಟಿದ್ದರಿಂದ ಅನೇಕ ಜನ ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇಂದು ಲಾರಿ ಸಿಲುಕಿ ಅಧಿಕಾರಿ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ವಾಹನ ಸಂಚಾರಕ್ಕೆ ಅಡಚಣೆ, ಅಡ್ಡಿ, ತೊಂದರೆಯಾಗದಂತೆ ರಸ್ತೆ ನಿರ್ಮಾಣ ಕಾಮಗಾರಿ ಮಾಡಿಸಬೇಕು. ರಸ್ತೆಯ ಒಂದು ಪಕ್ಕದಲ್ಲಿ ಅಗೆದರೆ ಮತ್ತೊಂದು ಬದಿಯಲ್ಲಿ ವಾಹನಗಳು ಸುಗಮವಾಗಿ ಓಡಾಡುವಂತೆ ಅನುಕೂಲ ಮಾಡಿಕೊಡಬೇಕು ಎಂದು ಜನರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry