ಬಾರದ ಕಾರ್ಡ್‌ಗೂ ಬಂದಿದೆ ಪಡಿತರ!

ಬುಧವಾರ, ಮೇ 22, 2019
29 °C

ಬಾರದ ಕಾರ್ಡ್‌ಗೂ ಬಂದಿದೆ ಪಡಿತರ!

Published:
Updated:

ಗುಲ್ಬರ್ಗ: ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸುವ ಮೊದಲೇ, ಆಹಾರಧಾನ್ಯ ಮತ್ತು ಸೀಮೆಎಣ್ಣೆಯನ್ನು ಸಂಬಂಧಿತ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ ಮಾಡಿದ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಪ್ರಾದೇಶಿಕ ಆಯುಕ್ತ (ಆರ್‌ಸಿ) ಡಾ. ರಜನೀಶ್ ಗೋಯಲ್ ಗುರುವಾರ ಆದೇಶಿಸಿದ್ದಾರೆ.ತಾಲ್ಲೂಕಿನಲ್ಲಿ 2009ರ ಫೆಬ್ರುವರಿ ಹಾಗೂ ಮಾರ್ಚ್‌ನಲ್ಲಿ ಸರ್ಕಾರದ ಆದೇಶದಂತೆ ನೆಮ್ಮದಿ ಕೇಂದ್ರಗಳ ಮೂಲಕ ಪಡಿತರ ಚೀಟಿ ನೀಡಲಾಗಿತ್ತು. ಅದರಂತೆ  ಮೊದಲ ಹಂತದಲ್ಲಿ 15,585 ಪಡಿತರ ಚೀಟಿಗಳನ್ನು ಮುದ್ರಿಸಿ ಫಲಾನುಭವಿಗಳಿಗೆ ವಿತರಿಸಲು ತಾಲ್ಲೂಕು ಕಚೇರಿಗೆ ನೀಡಲಾಗಿತ್ತು. 2ನೇ ಹಂತದಲ್ಲಿ 743 ಕಾರ್ಡುಗಳನ್ನು ಮುದ್ರಿಸಿ ನೀಡಲಾಗಿತ್ತು. ಮೊದಲ ಹಂತದಲ್ಲಿ 653 ಹಾಗೂ 2ನೇ ಹಂತದ 743 ಸೇರಿದಂತೆ ಒಟ್ಟು 1,406 ಕಾರ್ಡುಗಳು ಗ್ರಾಮಲೆಕ್ಕಿಗರ ಸಹಕಾರದ ಕೊರತೆಯಿಂದ ತಾಲ್ಲೂಕು ಕಚೇರಿಯಲ್ಲಿಯೇ ಉಳಿದುಕೊಂಡಿತ್ತು.ಆದರೆ 15,589 ಕಾರ್ಡುಗಳಿಗೆ ಆಹಾರಧಾನ್ಯ ಮತ್ತು ಸೀಮೆ ಎಣ್ಣೆಯನ್ನು ಮರು ಹಂಚಿಕೆ ಮಾಡುವಾಗ ವಿತರಣೆ ಆಗದೇ ಇದ್ದ ಕಾರ್ಡುಗಳ ಕೋಟಾವನ್ನೂ ಕಡಿತಗೊಳಿಸದೇ ಪೂರ್ಣ ಪ್ರಮಾಣದ ಕೋಟಾವನ್ನು ನ್ಯಾಯಬೆಲೆ ಅಂಗಡಿಗೆ  ನೀಡಲಾಗಿದೆ. ಈ ಲೋಪ ಮಾಡಿದ ಸಿಬ್ಬಂದಿಯನ್ನು ಪಟ್ಟಿ ಮಾಡಿ ಅವರ ವಿರುದ್ಧ ದೋಷಾರೋಪಣಾ ಪಟ್ಟಿ ಹಾಗೂ ಕ್ರಿಮಿನಲ್ ಮೊಕದ್ದಮೆ ಜಾರಿಗೊಳಿಸಲು ಪ್ರಾದೇಶಿಕ ಆಯುಕ್ತ ಡಾ. ರಜನೀಶ್ ಗೋಯಲ್ ಸಂಬಂಧಿತರಿಗೆ ನಿರ್ದೇಶನ ನೀಡಿದ್ದಾರೆ.ತಾಲ್ಲೂಕು ಕಚೇರಿಯಲ್ಲೇ ಉಳಿದುಕೊಂಡಿದ್ದ ಪಡಿತರ ಚೀಟಿಗಳಿಗೆ  ಗೊತ್ತುಪಡಿಸಿದ ಕೋಟಾ ಆಹಾರ ಧಾನ್ಯ ಮತ್ತು ಸೀಮೆ ಎಣ್ಣೆ ವಿತರಕರ ಬಳಿ ಸಂಗ್ರಹವಾಗಿದ್ದು, ಅದನ್ನು ಬೇರೆ ಮಾರ್ಗದಲ್ಲಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

ಒಟ್ಟು 5,194 ಕಾರ್ಡುಗಳ ಆಹಾರ ಧಾನ್ಯ ಮತ್ತು 6,335 ಕಾರ್ಡುಗಳ ಪ್ರಮಾಣ ಸೀಮೆ ಎಣ್ಣೆ 5 ತಿಂಗಳ ಅವಧಿಯಲ್ಲಿ ಕಾನೂನು ಬಾಹಿರವಾಗಿ ನ್ಯಾಯಬೆಲೆ ಅಂಗಡಿಗೆ ರವಾನೆಯಾಗಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಆದೇಶ ನೀಡಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry