ಶುಕ್ರವಾರ, ಮೇ 14, 2021
27 °C

ಅಧಿಕ ಇಳುವರಿ: ರೈತರಿಗೆ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ತಾಲ್ಲೂಕಿನ ಪ್ರಮುಖ ಆರ್ಥಿಕ ಬೆಳೆಯಾದ ಕಬ್ಬು ಬೆಳೆಯ ಫಲವತ್ತತೆ ಹೆಚ್ಚಿಸಲು ಮತ್ತು ಕಬ್ಬು ಬೆಳೆಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ತಾಲ್ಲೂಕಿನ ಎನ್‌ಎಸ್‌ಎಲ್ ಸುಗರ್ಸ್‌ ಕಾರ್ಖಾನೆ ವತಿಯಿಂದ ರೈತರಿಗೆ ಪಟ್ಟಣದ ಆರ್ಯ ಸಮಾಜದಲ್ಲಿ ಶುಕ್ರವಾರ ತರಬೇತಿ ನೀಡಲಾಯಿತು.ಬೆಳಗಾಂವ ಬೇಸಾಯ ತಜ್ಞ ಡಾ. ಆರ್.ವಿ. ಕಂಡಗಾವಿ ರೈತರನ್ನು ಉದ್ದೇಶಿಸಿ ಮಾತನಾಡಿ ತಾಲ್ಲೂಕಿನ ಕಬ್ಬು ಬೆಳೆಗಾರರು ಋತುಮಾನಕ್ಕೆ ಅನುಗುಣವಾಗಿ ಹೊಂದಬೇಕಾದ ಮುನ್ನಚ್ಚರಿಕೆಗಳು, ಕಬ್ಬು ಬೆಳೆಗೆ ಗೊಬ್ಬರ, ಕಬ್ಬು ನಾಟಿ ಮಾಡುವ ಪದ್ಧತಿ, ಕಳೆ ಪರಿಹಾರ, ನೀರು ಪೂರೈಕೆ ಸೇರಿದಂತೆ ವಿವಿಧ ಸುಲಭ ಮಾರ್ಗೊಪಾಯಗಳನ್ನು ತಿಳಿಸಿದರು. ಸಹಕಾರಿ ಕಾರ್ಖಾನೆಯ ನಿರ್ದೇಶಕ ಸಿದ್ದಣ್ಣಾ ಮಾಸ್ತರ ಸೇಗಜಿ ಕಾರ್ಯಾಗಾರ ಉದ್ಘಾಟಿಸಿ ಈ ಭಾಗದ ರೈತರು ಹೆಚ್ಚಿನ ಕಬ್ಬು ಬೆಳೆಯಲು ಮುಂದಾಗಬೇಕು. ಕಬ್ಬು ಬೆಳೆಗಾರರು ಎದುರಿಸುವ ಹಲವು ಸಮಸ್ಯೆಗಳನ್ನು ಪರಿಹರಿಸುವ ದಿಕ್ಕಿನಲ್ಲಿ ಕಾರ್ಖಾನೆಯ ಕಾರ್ಮಿಕರು ಮತ್ತು ರೈತರು ಪರಸ್ಪರ ಸಹಯೋಗ ಅಗತ್ಯವೆಂದು ನುಡಿದರು.ಪ್ರಮುಖ ಕಬ್ಬು ಬೆಳೆಗಾರರಾದ ಗುರುಶರಣಪ್ಪ ಮಾಲಿಪಾಟೀಲ್, ರಾಜಶೇಖರ ಮಲಶೆಟ್ಟಿ, ವ್ಯವಸ್ಥಾಪಕ ಅಪ್ಪಾರಾವ್ ಪಾಟೀಲ್, ಸೋಮನಾಥ ಪಾಟೀಲ್ ಪಡಸಾವಳಿ, ಕಲ್ಯಾಣಿ ಬೆಳಂ, ಸುಲ್ತಾನಪ್ಪ ವಾಗ್ದರ್ಗಿ, ಅಶೋಕ ಬಿಸಲೆ, ಸಿದ್ದಾರಾಮ ಭಕರೆ, ದಿಲೀಪ ಆಲೂರೆ, ಮಡಿವಾಳಪ್ಪ ಯಲಶೆಟ್ಟಿ, ಅಣ್ಣಾರಾವ ವಿಭೂತೆ, ಕಾರ್ಮಿಕ ಮುಖ್ಯಂಡ ಮಲ್ಲಿಕಾರ್ಜುನ ಬುಜುರ್ಕೆ, ಈರಣ್ಣಾ ಮೇತ್ರೆ, ವಿಜಯಕುಮಾರ ಪಾಟೀಲ್, ಶ್ರೀಮಂತ ಮಾಡ್ಯಾಳ, ಶಂಕರಲಿಂಗ ಮೇತ್ರೆ, ಹಣಮಂತ ಕುಂಬಾರ, ಚಿದಾನಂದ ಸ್ವಾಮಿ ಸೇರಿದಂತೆ ನೂರಾರು ಕಬ್ಬು ಬೆಳೆಗಾರರು ಭಾಗಹಿಸಿದರು. ಕಬ್ಬು ಬೆಳೆಗಾರರು ಚರ್ಚೆಯ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.