ಭಾನುವಾರ, 6–4–1969

ಶುಕ್ರವಾರ, ಏಪ್ರಿಲ್ 19, 2019
27 °C
1969

ಭಾನುವಾರ, 6–4–1969

Published:
Updated:

ತೆಲಂಗಾಣ: ಉನ್ನತ ಮಟ್ಟದ ಸಭೆ

ನವದೆಹಲಿ, ಏ. 5– ತೆಲಂಗಾಣ ಪ್ರಶ್ನೆ ಚರ್ಚೆಗಾಗಿ ಗುರುವಾರ ಉನ್ನತಮಟ್ಟದ ಸಭೆಯೊಂದನ್ನು ಪ್ರಧಾನಿ ಇಂದಿರಾ ಗಾಂಧಿಯವರು ಕರೆದಿದ್ದಾರೆ.

ಲೋಕಸಭೆಯ ಅಧ್ಯಕ್ಷ ಎನ್. ಸಂಜೀವರೆಡ್ಡಿ ಮತ್ತು ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾಮರಾಜ್ ಆಹ್ವಾನಿತರಲ್ಲಿ ಪ್ರಮುಖರು. ಗೃಹ ಸಚಿವ ಚವಾಣರೂ ಸಭೆಯಲ್ಲಿ ಭಾಗವಹಿಸುವರು.

ಸಮಾಜವಾದಿ ದೀಕ್ಷೆಯಿಂದ ಮಾತ್ರವೇ ಕಾಂಗ್ರೆಸಿಗೆ ಕಾಯಕಲ್ಪ– ಎಚ್ಚರಿಕೆ 

ನವದೆಹಲಿ, ಏ. 5– ‘ಪ್ರಜಾಸತ್ತಾತ್ಮಕ ಸಮಾಜವಾದ’ ತನ್ನ ಮೂಲಭೂತ ಗುರಿಯಾಗಿರುವುದೆಂದು ಘೋಷಿಸುವಂತೆ ಸಿ. ಸುಬ್ರಹ್ಮಣ್ಯಂ ಸಮಿತಿ ಕಾಂಗ್ರೆಸನ್ನು ಒತ್ತಾಯಿಸಿದೆ.

ವಿವಾದಕ್ಕೆ ಹೆಚ್ಚು ಮಹತ್ವ ಕೊಡಬಾರದು: ಚಂದ್ರಶೇಖರ್

ಅಹಮದಾಬಾದ್, ಏ. 5– ‘ಚಂದ್ರಶೇಖರ್– ಮುರಾರಜಿ ವಿವಾದ’ ಎಂದು ಏನು ಕರೆಯಲಾಗುತ್ತಿದೆಯೋ ಅದಕ್ಕೆ ಹೆಚ್ಚು ಮಹತ್ವ ಕೊಡಬಾರದೆಂದೂ, ಆದರೆ ಭಾರೀ ಕೈಗಾರಿಕೋದ್ಯಮಿಗಳ ಒಳಸಂಚಿನ ಪದ್ಧತಿ ಹತ್ತಿಕ್ಕುವ ಪ್ರಶ್ನೆಗಳ ಬಗ್ಗೆ ಜನಕ್ಕೆ ಮಾಹಿತಿ ನೀಡಬೇಕೆಂದೂ ‘ಯಂಗ್ ಟರ್ಕ್’ ನಾಯಕ ಚಂದ್ರಶೇಖರ್ ಪತ್ರಿಕೆಗಳಿಗೆ ಮನವಿ ಮಾಡಿಕೊಂಡರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !