ಬುಧವಾರ, 4–6–1969

ಗುರುವಾರ , ಜೂನ್ 20, 2019
26 °C
ಬುಧವಾರ

ಬುಧವಾರ, 4–6–1969

Published:
Updated:

ಹೈದರಾಬಾದಿನಲ್ಲಿ ಮತ್ತೆ ಗೋಲಿಬಾರ್: 6 ಸಾವು

ಹೈದರಾಬಾದ್, ಜೂನ್ 3– ಹಿಂಸಾಚಾರದಲ್ಲಿ ತೊಡಗಿದ್ದ ಉದ್ರಿಕ್ತ ತೆಲಂಗಾಣ ಚಳವಳಿಕಾರರ ಮೇಲೆ ಹೈದರಾಬಾದಿನ ನಾನಾ ಸ್ಥಳಗಳಲ್ಲಿ ಪೊಲೀಸರು ಇಂದು ಗೋಲಿಬಾರ್ ಮಾಡಿದುದರಿಂದ ಆರು ಜನ ಸತ್ತು, 38 ಜನ ಗಾಯಗೊಂಡರೆಂದು ಅಧಿಕೃತ ಮೂಲಗಳು ಹೇಳಿವೆ.

ಗೋಲಿಬಾರ್‌ನಿಂದ 13 ಜನ ಸತ್ತು, 50 ಜನರಿಗೆ ಗುಂಡೇಟು ತಾಕಿ ಗಾಯಗಳಾಗಿವೆಯೆಂದು ತೆಲಂಗಾಣ ಪ್ರಜಾಸಮಿತಿ ಅಧ್ಯಕ್ಷ ಡಾ. ಎಂ. ಚೆನ್ನಾರೆಡ್ಡಿ ಅವರು ತಿಳಿಸಿದ್ದಾರೆ. ಈ ಪೈಕಿ ಮೂವರು ಮಹಿಳೆಯರೆಂದೂ ಅವರು ಹೇಳಿದ್ದಾರೆ.

ಚಂದ್ರನಲ್ಲಿ ಹೊಟೇಲ್

ಕಠಮಂಡು, ಜೂನ್ 3– ಚಂದ್ರ ಮಂಡಲದ ಹೊಟೇಲ್ ಒಂದು ಶೀಘ್ರವೇ ನೇಪಾಳದಲ್ಲಿ ಸಿದ್ಧವಾಗಲಿದೆ.

13,000 ಅಡಿ ಎತ್ತರದಲ್ಲಿ ಜಪಾನೀ ಸಹಕಾರದಿಂದ ಇಲ್ಲಿನ ನಾಂಚೆ ಬಜಾರ್ ಹತ್ತಿರ ಈ ಹೊಟೇಲ್ ನಿರ್ಮಾಣವಾಗಲಿದೆ. 

ವಿಶ್ವದ ಅತ್ಯಂತ ಉತ್ತುಂಗ ಉಪಹಾರ ಗೃಹದ ನಿರ್ಮಾಣ ಕಾರ್ಯ ಅಕ್ಟೋಬರಿನಲ್ಲಿ ಆರಂಭವಾಗಿ ಮುಂದಿನ ವರ್ಷದ ಅಂತ್ಯದ ಹೊತ್ತಿಗೆ ಮುಗಿಯಲಿದೆ. ಹೊಟೇಲ್ ಉಪಯೋಗಕ್ಕಾಗಿಯೇ ಪ್ರತ್ಯೇಕ ವಿಮಾನ ನಿಲ್ದಾಣವೂ ಇರುತ್ತದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !