ಶನಿವಾರ, ನವೆಂಬರ್ 16, 2019
22 °C
1969

ಬುಧವಾರ, 15–10–1969

Published:
Updated:

ಮೊರಾಕೊ, ಜೋರ್‍ಡಾನ್‌ನಲ್ಲಿನ ರಾಯಭಾರಿಗಳ ವಾಪಸ್: ಭಾರತದ ನಿರ್ಧಾರ

ನವದೆಹಲಿ, ಅ. 14– ಮೊರಾಕೊದಲ್ಲಿನ ತನ್ನ ರಾಯಭಾರಿ ಮತ್ತು ಜೋರ್ಡಾನ್‌ನಲ್ಲಿನ ರಾಯಭಾರಿ ಪ್ರತಿನಿಧಿಯನ್ನು ವಾಪಸ್ ಕರೆಸಿಕೊಳ್ಳಲು ಭಾರತ ಸರ್ಕಾರ ನಿರ್ಧರಿಸಿದೆಯೆಂದು ಇಂದು ಇಲ್ಲಿ ಅಧಿಕೃತವಾಗಿ ಪ್ರಕಟಿಸಲಾಯಿತು.

ಇತ್ತೀಚಿನ ರಬಾತ್ ಶೃಂಗ ಸಮ್ಮೇಳನ ದಿಂದ ಭಾರತದ ನಿಯೋಗವನ್ನು ಹೊರಗಿ ಡುವ ಕಾರ್ಯದಲ್ಲಿ ಮೊರಾಕೊ ಮತ್ತು ಜೋರ್ಡಾನ್ ವಹಿಸಿದ ಪಾತ್ರವನ್ನು ಪ್ರತಿ ಭಟಿಸಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆಯೆಂದು ನಂಬಲರ್ಹ ರೀತಿಯಲ್ಲಿ ತಿಳಿದುಬಂದಿದೆ.

ರಾಷ್ಟ್ರ ಹಿತದೃಷ್ಟಿಯಿಂದ ಚಂಡೀಗಡ ಪ್ರಶ್ನೆ ಇತ್ಯರ್ಥ: ಪ್ರಧಾನಿ ಭರವಸೆ

ನವದೆಹಲಿ, ಅ. 14– ಚಂಡೀಗಡ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ರಾಷ್ಟ್ರದ ಹಿತದೃಷ್ಟಿಯ ವಿಶಾಲ ಹಿನ್ನೆಲೆಯಲ್ಲಿ ಪರಿಶೀಲಿಸುವ ಭರವಸೆಯನ್ನು ಉಪವಾಸ ಹೂಡಿರುವ ದರ್ಶನ್‌ಸಿಂಗ್ ಫೆರುಮಾನರಿಗೆ ಪ್ರಧಾನಿ ಯವರಿತ್ತಿದ್ದಾರೆ. ಪಂಜಾಬ್ ಹಾಗೂ ಹರಿಯಾಣದಲ್ಲಿರುವ ಸೋದರರಿಗೆ ತೃಪ್ತಿ ಯನ್ನುಂಟು ಮಾಡುವ ಪರಿಹಾರವನ್ನು ಹುಡುಕುವ ಅಗತ್ಯವಿದೆ ಎಂದು ಫೆರುಮಾನರಿಗೆ ಪ್ರಧಾನಿ ಪತ್ರ ಬರೆದಿದ್ದಾರೆ.

ಆಂಧ್ರ ಸಚಿವರ ಮನೆಗಳ ಮೇಲೆ ಬಾಂಬ್‌ ಎಸೆತ

ಹೈದರಾಬಾದ್, ಅ. 14– ಕೆಲವು ಪುಂಡರು ನೆನ್ನೆ ರಾತ್ರಿ, ಪ್ರವಾಸೋದ್ಯಮ ಖಾತೆ ಸಚಿವೆ ಶ್ರೀಮತಿ ರೊಢಾ ಮಿಸ್ತ್ರಿ ಮತ್ತು ಗೃಹಖಾತೆ ಸಚಿವ ಶ್ರಿ ಜೆ. ವೆಂಗಲ ರಾವ್ ಅವರ ನಿವಾಸಗಳ ಮೇಲೆ ನಾಡ ಬಾಂಬ್‌ಗಳನ್ನು ಎಸೆದಿದ್ದಾರೆ.

ಶ್ರೀಮತಿ ಮಿಸ್ತ್ರಿ ಅವರ ನಿವಾಸದ ಮೇಲೆ ಬಾಂಬ್ ಎಸೆದಾಗ ಕಿಟಕಿಯ ಗಾಜು ಒಡೆಯಿತೆಂದೂ ಆ ಸಮಯದಲ್ಲಿ ಸಚಿವರು ಮನೆಯಲ್ಲಿರಲಿಲ್ಲವೆಂದೂ ಹೇಳಲಾಗಿದೆ. ಗೃಹ ಸಚಿವರ ನಿವಾಸದ ಮೇಲೆ ಬಾಂಬ್ ಎಸೆದಾಗ ಯಾವ ಅಪಾಯವೂ ಸಂಭವಿಸಲಿಲ್ಲ.

ಪ್ರತಿಕ್ರಿಯಿಸಿ (+)