ಶನಿವಾರ, ಮೇ 15, 2021
24 °C

ಘತ್ತರ್ಗಿ: ಜೆಸ್ಕಾಂಗೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ:  ಮನಸ್ಸಿಗೆ ಬಂದಂತೆ ಲೋಡ್‌ಶೆಡ್ಡಿಂಗ್ ಮಾಡುವುದನ್ನು ಪ್ರತಿಭಟಿಸಿ ಸೋಮವಾರ ಘತ್ತರ್ಗಿ ರೈತರು ಜೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಅಲ್ಲಿಯ ಎಂಜನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು.ಲೋಡ್‌ಶೆಡ್ಡಿಂಗ್ ಅವಧಿ ಮುಗಿದ ಬಳಿಕವೂ ವಿದ್ಯುತ್ ಸ್ಥಗಿತ ಮಾಡಿದ ಕೂಡಲೇ  ನೂರಾರು ಜನ ರೈತರು ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದರು. `ವಿದ್ಯುತ್ ಸ್ಥಗಿತ ಮಾಡುವರು ನಾವಲ್ಲ ಕೆಪಿಟಿಸಿಎಲ್‌ಗೆ ಹೋಗಿ~ ಎಂದು ಅಲ್ಲಿಯ ಅಧಿಕಾರಿಗಳು ಹೇಳಿದಾಗ ಜನರು  ಕೆಪಿಟಿಸಿಎಲ್ ಹೋಗಿ  ಜ್ಯೂನಿಯರ್ ಎಂಜನಿಯರ್  ಕುದಸು ಅವರನ್ನು ತರಾಟೆಗೆ ತೆಗೆದುಕೊಂಡರು.ಕೆಪಿಟಿಸಿಎಲ್ ನವರು ಆರು ಗಂಟೆ ನಿರಂತರವಾಗಿ 3 ಫೇಸ್ ವಿದ್ಯುತ್ ಕೊಡುವುದಾಗಿ ಆದೇಶ ಮಾಡಿರುವಾಗ ಮತ್ತೆ ಮಧ್ಯದಲ್ಲಿ ವಿದ್ಯುತ್ ಕಟ್ ಮಾಡುವುದು ಏಕೆ? ಒಂದು ವೇಳೆ ಕಟ್ ಮಾಡಿದರೂ ಕಟ್ ಮಾಡಿದ ಅವಧಿಯ ವಿದ್ಯುತ್‌ನ್ನು ಮುಂದೆ ಕೊಡುವ ವ್ಯವಸ್ಥೆಯಾಗಬೇಕು. ಮಳೆ ಇಲ್ಲದೆ ಬೆಳೆ ಹಾಳಾಗುತ್ತಿವೆ. ಭೀಮಾ ನದಿಯಲ್ಲಿ ನೀರು ಬಂದಿವೆ ಬೆಳೆಗೆ ನೀರು ಉಣಿಸಬೇಕೆಂದರೆ ನೀವು ವಿದ್ಯುತ್ ಕೊಡುತ್ತಿಲ್ಲ ಎಂದು ಎಲ್ಲ ರೈತರು ಎಂಜನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು.ರೈತರಾದ ಗಂಗಾಧರ ಕರಭಂಟನಾಳ, ಸುಭಾಷ ಹಂಚನಾಳ, ಸಿದ್ದಪ್ಪ ಗುಡೇದ, ಬಾಬುಗೌಡ ಪಾಟೀಲ, ಘೋಷಯ್ಯ ಆಲಮೇಲ, ನಾನಾ ಕುಲಕರ್ಣಿ, ಮಹಿಬೂಬ ಪಟೇಲ, ಲಕ್ಕಪ್ಪ ನಿಂಬರ್ಗಿ ಸೇರಿದಂತೆ ನೂರಾರು  ಮಂದಿ ಎರಡು ಗಂಟೆಗಳ ಕಾಲ ಕೆಪಿಟಿಸಿಎಲ್ ಎದುರುಗಡೆ ಧರಣಿ ನಡೆಸಿದರು, ಅವರನ್ನು ಸಮಾಧಾನ ಪಡಿಸಲು ಜೆಸ್ಕಾಂ ಎಂಜನಿಯರ್ ನಿಂಗಪ್ಪ ವಜ್ರಕಟ್ಟಿ  ಪ್ರಯತ್ನಪಟ್ಟರು ಆದರೂ ರೈತರು ಕೇಳಲಿಲ್ಲ. ಮೊದಲು  ವಿದ್ಯುತ್ ಪೂರೈಕೆ ಆರಂಭಿಸಿ ನಂತರ ನಿಮ್ಮ ಮಾತು ಕೇಳುತ್ತೇವೆ ಎಂದು ಹಠ ಹಿಡಿದಾಗ ಘತ್ತರ್ಗಿ  ಎಂಜನಿಯರ್ ವಿದ್ಯುತ್ ಪೂರೈಕೆ ಮಾಡಿದರು.ಲೋಡ್‌ಶೆಡ್ಡಿಂಗ್ ಅವಧಿ ಬಳಿಕ ಆರು ಗಂಟೆ  ವಿದ್ಯುತ್ ನೀಡಬೇಕು.  ಸ್ಥಗಿತ ಮಾಡಿದರೆ, ಅದರ ಅವಧಿಯನ್ನ ಮುಂದೆ ನೀಡಬೇಕು ಎಂದು ರೈತರು ಆಗ್ರಹಿಸಿದರು. ಆಂಧ್ರದಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಬಂದ್ ಆಚರಣೆ ನಡೆಯುತ್ತಿದೆ. ನಮಗೆ  ಅಲ್ಲಿಂದ ಕಲ್ಲಿದ್ದಲ್ಲು ಪೂರೈಕೆಯಾಗುತ್ತಿದ್ದು,  ರಾಯಚೂರಿನ ಎಂಟು ವಿದ್ಯುತ್ ಉತ್ಪಾದನೆ ಘಟಕದಲ್ಲಿ 4 ಸ್ಥಗಿತವಾಗಿವೆ. ಅದಕ್ಕಾಗಿ ರೈತರು ಸಹಕಾರ ನೀಡಬೇಕು. ಮುಂದೆ  ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂದು ಜೆಸ್ಕಾಂ ಎಂಜನಿಯರ್ ವಜ್ರಕಟ್ಟಿ ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.