ಗುರುವಾರ , ಮೇ 13, 2021
39 °C

ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2011-12ನೇ ಸಾಲಿಗೆ 4 ವರ್ಷದ ಆಡಳಿತ ನ್ಯಾಯಾಧಿಕರಣ ತರಬೇತಿಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಹೊಂದಿರಬೇಕು.  ಕಾನೂನು ಪದವೀಧರರ ವಯಸ್ಸು ಪ್ರಕಟಣೆಯ ದಿನಾಂಕದಂದು 35 ವರ್ಷ ಮೀರಿರಬಾರದು. ಅರ್ಜಿದಾರರು ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಬೆಂಗಳೂರಿನಲ್ಲಿ ನೋಂದಾಯಿತ ಸದಸ್ಯರಾಗಿರಬೇಕು, ಅಭ್ಯರ್ಥಿ ನ್ಯಾಯಾಧಿಕರಣ ತರಬೇತಿ ಅರ್ಜಿಗಾಗಿ ನಿಗದಿಪಡಿಸಿದ ಕೊನೆಯ ದಿನಾಂಕದಿಂದ 2 ವರ್ಷದ ಅವಧಿಯೊಳಗಾಗಿ ಕಾನೂನು ಪದವಿಧರರಾಗಿರಬೇಕು.ತರಬೇತಿಯ ಅವಧಿ 4 ವರ್ಷದ್ದಾಗಿದ್ದು, ಅನುದಾನದ ಲಭ್ಯತೆಯ ಪ್ರಕಾರ ಆಯ್ಕೆಯಾದ ತರಬೇತಿದಾರರಿಗೆ ತಿಂಗಳಿಗೆ ರೂ. 1000  ಸ್ಟೈಫಂಡ್ ಕೊಡಲಾಗುವುದು. ಆಯ್ಕೆಯಾದ ತರಬೇತಿದಾರರು ನುರಿತ ಸರ್ಕಾರಿ ಅಥವಾ ಖಾಸಗಿ ವಕೀಲರ ನಿಯಂತ್ರಣದಲ್ಲಿ ತರಬೇತಿ ಪಡೆಯಬೇಕಾಗುತ್ತದೆ.ತರಬೇತಿಗಾಗಿ ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ಉಚಿತವಾಗಿ ಗುಲ್ಬರ್ಗ ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಕಚೇರಿಯಿಂದ ಸೆ. 28ರಿಂದ ಅ.10ರವರೆಗೆ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಅಕ್ಟೋಬರ್ 15ರೊಳಗೆ ಸಲ್ಲಿಸಬೇಕು.ಸೆ. 29ಕ್ಕೆ ಕಾರ್ಯಾಗಾರ

ಪ್ರಜಾವಾಣಿ ವಾರ್ತೆ

ಗುಲ್ಬರ್ಗ:
ರಾಷ್ಟಿಯ ಸ್ವಾಸ್ಥ್ಯ ಭೀಮಾ ಯೋಜನೆಯ ಅನುಷ್ಠಾನ ಕುರಿತು ತಾಲ್ಲೂಕಿನ ಕ್ಷೇತ್ರ ಮಟ್ಟದ   ಪ್ರಮುಖ ಅಧಿಕಾರಿಗಳಾಗಿ ನಗರದ ಸೂಪರ್ ಮಾರ್ಕೆಟ್‌ನಲ್ಲಿರುವ ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮ ಸಂಘದ ಸಭಾಂಗಣದಲ್ಲಿ 29ರಂದು ಬೆಳಿಗ್ಗೆ 11ಗಂಟೆಗೆ ಕಾರ್ಯಾಗಾರ ಆಯೋಜಿಸಲಾಗಿದೆ.ಜಿಲ್ಲಾಧಿಕಾರಿ ಹಾಗೂ  ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ. ವಿಶಾಲ್ ಆರ್., ಕಾರ್ಯಾಗಾರದ ಅಧ್ಯಕ್ಷತೆ ವಹಿಸುವರು.ತಾಲ್ಲೂಕಿನ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು, ಗ್ರಾಮ ಪಂಚಾಯಿತಿ ಅಭಿವದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಕಷಿ ಸಹಾಯಕರು, ಆರೋಗ್ಯ ಇಲಾಖೆಯ ಎ.ಎನ್.ಎಂ. ಹಾಗೂ ಜಿಲ್ಲಾ ಅನುಷ್ಠಾನ ಸಮಿತಿಯ ಸದಸ್ಯರು ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬೇಕೆಂದು  ಕೋರಲಾಗಿದೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.