ಶನಿವಾರ, 7–9–1968

7
ವಾರ

ಶನಿವಾರ, 7–9–1968

Published:
Updated:

ದಿನ, ದಿನಾಂಕ ತೋರುವ ಸ್ವಯಂಚಾಲಿತ ಎಚ್.ಎಂ.ಟಿ. ಗಡಿಯಾರ

ನವದೆಹಲಿ, ಸೆ. 6– ಎಚ್.ಎಂ.ಟಿ ಗಡಿಯಾರ ಕಾರ್ಖಾನೆಯು ದಿನ ಮತ್ತು ದಿನಾಂಕಗಳನ್ನು ತೋರಿಸುವ ಆಟೋಮ್ಯಾಟಿಕ್ ಕೈಗಡಿಯಾರಗಳನ್ನು ಇಷ್ಟರಲ್ಲೇ ತಯಾರಿಸುವುದು.

**

ಪರಿಹಾರ ಕಾರ್ಯ: ಸ್ಥಳೀಯ ಗಣ್ಯರ ಸಮಿತಿ ರಚನೆಗೆ ಒತ್ತಾಯ

ಬೆಂಗಳೂರು, ಸೆ. 6– ಕ್ಷಾಮವಿರುವ ನೂರಾರು ತಾಲ್ಲೂಕುಗಳಲ್ಲಿ ಪರಿಹಾರ ಕಾರ್ಯಗಳಿಗಾಗಿ, ಸ್ಥಳೀಯ ಪ್ರಮುಖರ ಸಮಿತಿಗಳ ರಚನೆಯಾಗಬೇಕು ಎಂದು ಸದಸ್ಯರು ಇಂದು ವಿಧಾನಸಭೆಯಲ್ಲಿ ಸರ್ಕಾರವನ್ನು ಒತ್ತಾಯಪಡಿಸಿದರು.

**

ದಸರಾ ಸಂದರ್ಭದಲ್ಲಿ ಆಹಾರ ಪೊಟ್ಟಣಗಳ ಮಾರಾಟಕ್ಕೆ ವ್ಯವಸ್ಥೆ

ಮೈಸೂರು, ಸೆ. 6– ಮೈಸೂರು ನಗರದಲ್ಲಿ ದಸರಾ ಉತ್ಸವಗಳ ಸಂದರ್ಭದಲ್ಲಿ ಆಹಾರ ಪೊಟ್ಟಣಗಳನ್ನು ಸಿದ್ಧಗೊಳಿಸಿ ಮಾರುವ ವ್ಯವಸ್ಥೆಗಾಗಿ ಇಂದು ಸಂಜೆ ಡಿವಿಜನಲ್ ಕಮೀಷನರ್ ಶ್ರೀ ಆರ್. ಶ್ರೀನಿವಾಸನ್ ಅವರು ಸಭೆಯೊಂದನ್ನು ಕರೆದಿದ್ದರು.

**

ರಷ್ಯದಿಂದ ಅಣು ಸ್ಫೋಟ

ನವದೆಹಲಿ, ಸೆ. 6– ರಷ್ಯವು ನಿನ್ನೆ ಭೂಗರ್ಭದಲ್ಲಿ ಅಣ್ವಸ್ತ್ರವೊಂದನ್ನು ಸ್ಫೋಟಿಸಿತೆಂದು ಅಮೆರಿಕದ ಅಣುಶಕ್ತಿ ಆಯೋಗಕ್ಕೆ ಸಂಕೇತಗಳಿಂದ ಗೊತ್ತಾಗಿರುವುದಾಗಿ ‘ಯೂಸೀಸ್’ ಇಂದು ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !