ಶುಕ್ರವಾರ, 10–1–1969

7

ಶುಕ್ರವಾರ, 10–1–1969

Published:
Updated:

ರಾಮಾಯಣ ದರ್ಶನ ಅಗ್ಗದ ಪ್ರತಿಗೆ ಮುಖ್ಯಮಂತ್ರಿ ಸಲಹೆ
ಬೆಂಗಳೂರು, ಜ. 9–
‘ಶ್ರೀ ರಾಮಾಯಣ ದರ್ಶನಂ’ ಕಾವ್ಯವನ್ನು ಜನಸಾಮಾನ್ಯರು ಕೊಳ್ಳಲು ಸಾಧ್ಯವಾಗುವಂತೆ ಮಾಡಬೇ
ಕೆಂದು ತಾವು ಶಿಕ್ಷಣ ಸಚಿವರಿಗೆ ಸಲಹೆ ಮಾಡಲಿರುವುದಾಗಿ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಇಲ್ಲಿ ತಿಳಿಸಿದರು.

‘ಶ್ರೀ ರಾಮಾಯಣ ದರ್ಶನಂ’ ಪ್ರತಿ ಮನೆಗೂ ಮುಟ್ಟಬೇಕು, ಆದಾಗುವಂತೆ ಮಾಡುವುದು ನಮ್ಮ ಜವಾಬ್ದಾರಿ’ ಎಂದು ನಾಗರಿಕರ ಸನ್ಮಾನ ಸಮಿತಿಯೊಂದು ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಕುವೆಂಪು ಮತ್ತು ಡಾ. ಉಮಾಶಂಕರ ಜೋಶಿಯವರನ್ನು ಸನ್ಮಾನಿಸಿದಾಗ ತಿಳಿಸಿತು.

ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿಯವರು ಡಾ. ಕೆ.ವಿ. ಪುಟ್ಟಪ್ಪನವರ ‘ಶ್ರೀ ರಾಮಾಯಣ ದರ್ಶನಂ’ ಮತ್ತು ಡಾ. ಜೋಶಿಯವರ ‘ನಿಶಿಥ’ದಂತಹ ಗ್ರಂಥಗಳು ಭಾರತದ ಅನ್ಯ ಭಾಷೆಗಳಿಗೆ ಮಾತ್ರವಲ್ಲ ವಿದೇಶಿ ಭಾಷೆಗಳಿಗೂ ಭಾಷಾಂತರವಾಗಬೇಕಾದ್ದು ಅಗತ್ಯವೆಂದೂ ಇದನ್ನು ಮಾಡುವುದರಲ್ಲಿ ಕೇಂದ್ರ ಸರಕಾರದ ಜವಾಬ್ದಾರಿ ಹೆಚ್ಚಿದೆಯೆಂದೂ ತಿಳಿಸಿದರು.

ನಾಗರಕೋಯಿಲ್‌ನಿಂದ ಲೋಕಸಭೆಗೆ: ಕಾಮರಾಜರ ಭಾರಿ ವಿಜಯ
ಮದ್ರಾಸ್, ಜ. 9–
ನಾಗರಕೋಯಿಲ್ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಉಮೇದುವಾರ ಶ್ರೀ ಕಾಮರಾಜರು ತಮ್ಮ ಸಮೀಪ ಪ್ರತಿಸ್ಪರ್ಧಿಗಿಂತ ಒಂದೂಕಾಲು ಲಕ್ಷಕ್ಕೂ ಹೆಚ್ಚು ಬಹುಮತ ಗಳಿಸಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

ಶ್ರೀ ಕಾಮರಾಜರಿಗೆ 2,49,437 ಮತಗಳೂ, ಪಕ್ಷೇತರ ಉಮೇದುವಾರರಾಗಿದ್ದ ಅವರ ಅತ್ಯಂತ ಸಮೀಪದ ಪ್ರತಿಸ್ಪರ್ಧಿ ಡಾ. ಮಥಿಯಾಸ್ ಅವರಿಗೆ 1,21,236 ಮತಗಳೂ ದೊರೆತು ಶ್ರೀ ಕಾಮರಾಜರು 1,28,201 ಹೆಚ್ಚು ಮತಗಳಿಂದ ವಿಜಯಿಯಾದರು.

ಕೇಂದ್ರ ಸಂಪುಟಕ್ಕೆ ಸೇರುವ ಸಂಭವ
ಮದ್ರಾಸ್, ಜ. 9–
ಚುನಾವಣೆ ನಂತರ ಕೆ. ಕಾಮರಾಜ್ ಅವರು ಕೇಂದ್ರ ಸಚಿವ ಸಂಪುಟ ಸೇರುವ ಸೂಚನೆಯನ್ನು ಕಾಂಗ್ರೆಸ್ ಅಧ್ಯಕ್ಷ ಎಸ್. ನಿಜಲಿಂಗಪ್ಪ ಮತ್ತು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಸಿ. ಸುಬ್ರಹ್ಮಣಂ ಅವರಿಬ್ಬರೂ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !