ಅತಿ ಆಸೆಯೇ ಭ್ರಷ್ಟಾಚಾರಕ್ಕೆ ಪ್ರೇರಣೆ

7

ಅತಿ ಆಸೆಯೇ ಭ್ರಷ್ಟಾಚಾರಕ್ಕೆ ಪ್ರೇರಣೆ

Published:
Updated:

ಗುಲ್ಬರ್ಗ: ಅತಿಯಾದ ಆಸೆಯೇ ಭ್ರಷ್ಟಾಚಾರಕ್ಕೆ ಪ್ರೇರಣೆ ಎಂದು ಧಾರವಾಡ ಮನಗುಂಡಿ ಬಸವಾನಂದ ಸ್ವಾಮಿ ಹೇಳಿದರು.ಗುಲ್ಬರ್ಗ ಸಾರ್ವಜನಿಕ ಉದ್ಯಾನದಲ್ಲಿನ ಓಂ ಯೋಗ ಕೇಂದ್ರವು ಈಚೆಗೆ ಖೂಬಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ದಶಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.ಗಾಂಧೀಜಿ ಜೀವನದ ಆದರ್ಶ, ಶಾಸ್ತ್ರೀ ಅನುಸರಿಸಿದ ಮೌಲ್ಯಗಳನ್ನು ಬದುಕಿನಲ್ಲಿ ಕಾರ್ಯಗತಗೊಳಿಸುವುದು ಇಂದಿನ ಅಗತ್ಯ. ಒತ್ತಡಗಳ ಬದುಕಿನಲ್ಲಿ ಯೋಗ ಮಾನಸಿಕ, ದೈಹಿಕ ನೆಮ್ಮದಿ ನೀಡುತ್ತದೆ ಎಂದರು.ಓಂ ಯೋಗ ಕೇಂದ್ರದ ಡಿ.ಸಿದ್ದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧುನಿಕ ಜೀವನ ಪದ್ಧತಿ ಹಲವು ಕಾಯಿಲೆಗಳಿಗೆ ಕಾರಣವಾಗಿದೆ. ಯೋಗದಿಂದ ಉತ್ತಮ ಆರೋಗ್ಯ ಸಾಧ್ಯವಿದ್ದು, ಎಲ್ಲರೂ ಸಂತೋಷದ ಜೀವನ ನಡೆಸಬಹುದಾಗಿದೆ ಎಂದರು.ಯೋಗಿಣಿ ಪ್ರಭುಶ್ರೀ ತಾಯಿ, ವಿಲಾಸವತಿ ಖೂಬಾ, ಎ.ವಿ.ದೇಶಮುಖ ಇದ್ದರು.12ರಂದು ಜಿ.ಪಂ. ಸಾಮಾನ್ಯ ಸಭೆ

ಗುಲ್ಬರ್ಗ:ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಪ್ರಭು ಪಾಟೀಲ್ ಅಧ್ಯಕ್ಷತೆಯಲ್ಲಿ ಅ. 12ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾ ಪಂಚಾಯಿತಿ ಹಳೆಯ ಸಭಾಂಗಣದಲ್ಲಿ 3ನೇ ಸಾಮಾನ್ಯ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry