ಕಣ್ಣೀರಿಟ್ಟ ನಿರ್ದೇಶಕ!

7

ಕಣ್ಣೀರಿಟ್ಟ ನಿರ್ದೇಶಕ!

Published:
Updated:

ಚಿತ್ರದ ಹೆಸರು ‘*121#’. ದೋಸ್ತಿ ವಿ. ಆನಂದ್‌ ಇದರ ನಿರ್ದೇಶಕ. ಈ ಚಿತ್ರದ ಟೈಟಲ್‌ ಕೇಳಿದರೆ ಬ್ಯಾಲೆನ್ಸ್‌ ಕೋಡ್‌ ನೆನಪಾಗುವುದು ಸಹಜ. ಆದರೆ, ಮೊಬೈಲ್‌ಗೂ ಮತ್ತು ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದು ಥ್ರಿಲ್ಲರ್‌, ಹಾರರ್‌ ಇರುವ ಸಿನಿಮಾ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.

ಈ ಚಿತ್ರ ನಿರ್ಮಾಣ ಆರಂಭಗೊಂಡಿದ್ದು ಮೂರು ವರ್ಷದ ಹಿಂದೆ. ಈ ವಾರ(ಜೂನ್ 29ರಂದು) ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಬಂದಿತ್ತು.

ನಿರ್ದೇಶಕ ದೋಸ್ತಿ ವಿ. ಆನಂದ್‌ ಮೂರು ವರ್ಷದ ಏರಿಳಿತದ ಕಥೆ ಹೇಳಿದರು. ಪ್ರತಿಯೊಂದು ದೃಶ್ಯವೂ ಚೆನ್ನಾಗಿ ಮೂಡಿಬರಲೆಂದು ತಾವು ಪಟ್ಟಿರುವ ಶ್ರಮದ ಬಗ್ಗೆ ಹೇಳುತ್ತಲೇ ಅವರು ಕಣ್ಣೀರಿಟ್ಟರು. ಇದರಿಂದ ವೇದಿಕೆಯಲ್ಲಿದ್ದ ಚಿತ್ರತಂಡದ ಸದಸ್ಯರು ಕ್ಷಣಕಾಲ ಆತಂಕಗೊಂಡಿದ್ದೂ ಉಂಟು.

‘ನಾನು ಸಾಕಷ್ಟು ಕಿರುಚಿತ್ರ ಮಾಡಿದ್ದೇನೆ. ಹಾಲಿವುಡ್‌ ಸಿನಿಮಾಗಳನ್ನು ನೋಡುವುದು ನನ್ನ ಹವ್ಯಾಸ. ಆ ಚಿತ್ರಗಳೇ ಈ ಚಿತ್ರ ನಿರ್ಮಾಣಕ್ಕೆ ಪ್ರೇರಣೆ’ ಎಂದು ಗುಟ್ಟುಬಿಚ್ಚಿಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !