ಪಾಲಿಕೆಯನ್ನೇ ಮಾರಾಟ ಮಾಡಿಬಿಡ್ರೀ..!

7

ಪಾಲಿಕೆಯನ್ನೇ ಮಾರಾಟ ಮಾಡಿಬಿಡ್ರೀ..!

Published:
Updated:

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಆಡಳಿತ ತನ್ನ ಆಸ್ತಿ ಮಾರಾಟ ಮಾಡುತ್ತಿರುವುದು ಚದರಡಿಗೆ ₹ 15ರಿಂದ ₹ 20ರಂತೆ. ಆದರೆ
ಭೂಸ್ವಾಧೀನ ಮಾಡಿಕೊಂಡ ಆಸ್ತಿಯಮಾಲೀಕರಿಗೆ ಪರಿಹಾರ ನೀಡುತ್ತಿರುವುದು ಚದರಡಿಗೆ ₹ 5000ಕ್ಕೂ ಹೆಚ್ಚು..! ಇದ್ಯಾವ ಲೆಕ್ಕಾಚಾರ ? ಸ್ವಲ್ಪ
ನಾದ್ರೂ ಕಾಮನ್‌ಸೆನ್ಸ್‌ ಬೇಕಲ್ವಾ..?

ಆರೋಗ್ಯ ಸಚಿವ ಶಿವಾನಂದ ಪಾಟೀಲ ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ನಡೆದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿಯಿದು.

ಸಚಿವರ ಪ್ರಶ್ನೆಗೆ ತಬ್ಬಿಬ್ಬಾದ ಅಧಿಕಾರಿಗಳು, ‘ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ, ಅನುಮತಿ ಪಡೆಯಲಾಗಿದೆ’ ಎಂದಾಗ; ಮತ್ತಷ್ಟು ಗರಂ ಆದ ಸಚಿವರು, ‘ಹಿಂಗ್ಯಾಕೆ ಮಾರಾಟ ಮಾಡ್ತೀರಿ.
ಸುಮ್ನೇ ಇಡೀ ಪಾಲಿಕೆ ಸಮೇತ ಎಲ್ಲವನ್ನೂ ಮಾರಿ ಕೈ ತೊಳೆದುಕೊಳ್ಳಿ’ ಎಂದು ಚಾಟಿ ಬೀಸಿದರು.

‘ಸರ್ಕಾರಕ್ಕೆ ಆಸ್ತಿ ಮಾರಾಟದ ಪ್ರಪೋಸಲ್‌ ಕಳುಹಿಸಲು ಹೇಳಿದವನಿಗೆ ಮತ್ತು ಕಳುಹಿಸಿದವನಿಗೆ ಸ್ವಲ್ಪ ಕಾಮನ್‌ಸೆನ್ಸ್‌ ಇರಬೇಕಿತ್ತು. ಯಾವ ರೇಟಿಗೆ ಮಾರಾಟ ಮಾಡ್ತಿದ್ದೀವಿ ಎಂಬ
ಪರಿಜ್ಞಾನವಿರಬೇಕಾಗಿತ್ತು. ತುರ್ತಿದ್ದರೇ ಓಕೆ. ಆದ್ರೇ ಕಾಸಿಗೆ ಕಡೆಯಾಗಿ ದುಬಾರಿ ಕಿಮ್ಮತ್ತಿನ ಆಸ್ತಿ ಮಾರಿದ್ದೀರಿ ಅಂದ್ರೇ; ಇದರಲ್ಲಿ ಏನಿದೆ?’ ಎಂದು ದಬಾಯಿಸುತ್ತಿದ್ದಂತೆ ಪಾಲಿಕೆ ಅಧಿಕಾರಿ ಪೆಚ್ಚು ಮೋರೆ ಹಾಕಿದರು.

‘ಬಹುತೇಕ ಆಸ್ತಿ ಮಾರಾಟವಾಗಿದೆ. ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಲು ಮುಂದಾದಂತೆ ಸಚಿವರು ಹೇಳುತ್ತಿದ್ದಾರೆ’ ಎಂದು ಸಭೆಯಲ್ಲಿದ್ದ ಮತ್ತೊಂದು ಇಲಾಖೆಯ ಅಧಿಕಾರಿಯೊಬ್ಬರು ಗೊಣಗಿದರು.

ಡಿ.ಬಿ. ನಾಗರಾಜ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !