7

ಬಿಎಸ್‌ಎನ್‌ಎಲ್‌ ವಿಭಾಗೀಯ ಎಂಜಿನಿಯರ್ ಕೊಲೆ

Published:
Updated:
ಸುಧಾಕರ ನಾಯಕ್

ಕಾಸರಗೋಡು : ಬಿ ಎಸ್ ಎನ್ ಎಲ್ ಕಾಸರಗೋಡು  ವಿಭಾಗದ ಎಂಜಿನಿಯರನ್ನು ಕತ್ತಿಯಿಂದ ಕುತ್ತಿಗೆಗೆ ಕಡಿದು ಕೊಲೆಮಾಡಲಾಗಿದೆ. ಬೋವಿಕಾನ ಸಮೀಪದ ಮಲ್ಲ ಎಂಬಲ್ಲಿನ ನಿವಾಸಿ ಸುಧಾಕರ ನಾಯಕ್ (57) ಕೊಲೆಯಾದವರು. ಮಲ್ಲ ಜಂಕ್ಷನ್ ಬಳಿಯಲ್ಲಿ ಮಂಗಳವಾರ ಸಂಜೆ ಈ ಕೊಲೆ ನಡೆದಿದೆ.

ಮಲ್ಲ ಜಂಕ್ಷನ್ ಬಳಿಯಿಂದ 150 ಮೀಟರ್ ದೂರದಲ್ಲಿರುವ ತಮ್ಮ ಮನೆಗೆ ನಡೆದು ಹೋಗುತ್ತಿದ್ದ ವೇಳೆ ಅವರನ್ನು ಕೊಲೆ ಮಾಡಲಾಗಿದೆ. ‘ಸುಧಾಕರ ಮತ್ತು ಅವರ ಸಂಬಂಧಿಕರ ಮಧ್ಯೆ ದ್ವೇಷ ಇದ್ದು, ದಾರಿಯ ಬಗ್ಗೆ ವಿವಾದ ಇತ್ತು
ಎಂಬುವುದಾಗಿಯೂ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹಿರಿಯ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ .

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !