ಯುವಕನ ಕೃಷಿ ಕೆಲಸಕ್ಕೆ ಭಗ್ನ ತಂದ ನೆರೆ

7

ಯುವಕನ ಕೃಷಿ ಕೆಲಸಕ್ಕೆ ಭಗ್ನ ತಂದ ನೆರೆ

Published:
Updated:
ಕಿನ್ನಿಗೋಳಿ ಬಳಿಯ ಐಕಳದ ಏಳಿಂಜೆಯಲ್ಲಿ ಸುಧಾಕರ ಸಾಲ್ಯಾನ್ ಅವರ ಪಂಪ್ಶೆಡ್ ಶಾಂಭವಿ ನದಿ ಸೆಳೆತದಿಂದ ನೀರು ಪಾಲಾಗಿದೆ. (ಮೂಲ್ಕಿ)

ಮೂಲ್ಕಿ: ಇತ್ತೀಚೆಗಷ್ಟೇ ಸುಮಾರು 15 ಎಕರೆ ಯ ಗದ್ದೆಯಲ್ಲಿ ಭತ್ತದ ಬೆಳೆಯ ನಾಟಿ ಮಾಡಿ ಸುದ್ದಿಯಾಗಿದ್ದ ಕಿನ್ನಿಗೋಳಿ ಬಳಿಯ ಐಕಳದ ಏಳಿಂಜೆ ನಿವಾಸಿ ಯುವ ಕೃಷಿಕ ಸುಧಾಕರ ಸಾಲ್ಯಾನ್ರವರ ಶ್ರಮವನ್ನು ಮಳೆಯ ನೆರೆಯಿಂದ ಹಿನ್ನಡೆಯಾಗಿದೆ.

ಏಳಿಂಜೆ ಹಾಗೂ ಸಂಕಲಕರಿಯದ ಶಾಂಭವಿ ನದಿಯ ಸುತ್ತಮುತ್ತ ಇದ್ದ ಗದ್ದೆಯಲ್ಲಿ ಕೃಷಿ ನಾಟಿ ಮಾಡಿದ್ದು ಕಳೆದ ಎರಡು ದಿನಗಳಿಂದ ಧಾರಾಕಾರ ಸುರಿದ ಮಳೆಯಿಂದ ಸಂಪೂರ್ಣವಾಗಿ ನೆರೆಗೆ ಕೊಚ್ಚಿಕೊಂಡು ಹೋಗಿದೆ. ಇದರೊಂದಿಗೆ ಕೃಷಿ ಪಂಪ್ ಶೆಡ್ ಸಹ ಕುಸಿದು ನದಿ ನೀರು ಪಾಲಾಗಿದೆ. ಸುಮಾರು ₹1 ಲಕ್ಷದಷ್ಟು ನಷ್ಟವಾಗಿರುವ ಬಗ್ಗೆ ಸುಧಾಕರ ಸಾಲ್ಯಾನ್ ಕಂದಾಯ ಇಲಾಖೆಗೆ ಮತ್ತು ಕೃಷಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಕಿನ್ನಿಗೋಳಿಯ ವಿಜಯಾ ಕಲಾವಿದರು ತಂಡದ ಕಲಾವಿದರೂ ಆಗಿರುವ ಸುಧಾಕರ ಸಾಲ್ಯಾನ್ ಐಕಳ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದು ಕೃಷಿ ಚಟುವಟಿಕೆಯಲ್ಲಿ ಉತ್ಸಾಹದಿಂದ ತೊಡಗಿಕೊಂಡಿದ್ದರು. ಇವರ ಬಗ್ಗೆ ಇತ್ತೀಚೆಗೆ ‘ಪ್ರಜಾವಾಣಿ’ಯ ಕರಾವಳಿ ಪುಟದಲ್ಲಿ ಕೃಷಿ ಕಾರ್ಯ ಸಾಧನೆಯ ವಿಶೇಷ ಲೇಖನವು ಪ್ರಕಟಗೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !